ನೌಕರರ ಏಳನೇ ವೇತನ ಆಯೋಗ ಜಾರಿ…ಠುಸ್ ಪಟಾಕಿ…ನೌಕರರಲ್ಲಿ ಭ್ರಮ ನಿರಸನ
ಎಲ್ಲಾ ನೌಕರರ ವೃಂದ ಸಂಘಗಳನ್ನು ವಿಸರ್ಜಿಸಿ ಇಲ್ಲಾ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ…ಅಶೋಕ ಸಜ್ಜನ ಗುಡುಗು..
ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಅವಧಿಯನ್ನು ಮಾರ್ಚ್ ಹದಿನೈದರವರೆಗೆ ವಿಸ್ತರಿಸಲಾಗಿತ್ತು.ಅದರಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ..ಆದರೆ ಈ ವರದಿಯಲ್ಲಿರುವ ಅಂಶಗಳನ್ನು ಗಮನಿಸಿದರೆ ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು ತೃಪ್ತಿದಾಯಕ ಅಂಶಗಳು ಇದ್ರಲ್ಲಿ ಇಲ್ಲ ನಿರಾಸೆದಾಯಕ ಅಂಶಗಳೇ ಇವೆ ವೇತನ ಹೆಚ್ವಿಸಿದ್ದಾರೋ ಕಡಿತಗೊಳಿಸಿದ್ದಾರೋ ತಿಳಿಯುತ್ತಿಲ್ಲ ಉದಾ.ಮನೆ ಬಾಡಿಗೆ ಭತ್ಯೆ ಈ ಹಿಂದೆ ಇದ್ದ ಶೇ.24,16,8 ರ ಬದಲಾಗಿ ಶೇ.20,15,7.5 ಸಿಫಾರಸ್ಸು ಮಾಡಿದ್ದಾರೆ.ಗ್ರಾಮೀಣ ಭತ್ಯೆಯನ್ನು ಶೇ.ಹತ್ತು ಒಕ್ಕೊರಲಿನಿಂದ ಪ್ರಸ್ತಾವಿಸಿದರೂ ಪುರಸ್ಕರಿಸಿಲ್ಲದಿತುವುದು ಗ್ರಾಮೀಣ ನೌಕರರಿಗೆ ತೀವ್ರ ನಿರಾಸೆ ಮೂಡಿಸಿದೆ.ಈ ಕುರಿತು ನೌಕರರ ಸಂಘಟನೆಗಳ ನೇತಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ದಿಸೆಯಲ್ಲಿ ಸತತ ಎರಡು ವರ್ಷಗಳಿಂದ ಆಯೋಗ ರಚನೆಯಾಗಲು ಆಯೋಗದ ಸಿಬ್ಬಂದಿ ನೇಮಿಸಿ ಕಚೇರಿ ತೆರೆಯಲು ಬಹು ಮುಖ್ಯವಾಗಿ ಶೇ.ಹದಿನೇಳು ಮಧ್ಯಂತರ ಪರಿಹಾರ ಪಡೆದುಕೊಂಡಿದ್ದು ಕಾರ್ಯಾಂಗ ಸ್ಥಗಿತಗೊಳಿಸಿ ಹೋರಾಟದ ಮೂಲಕವೇ ಹೀಗಿರುವಾಗ ಇಪ್ಪತ್ತು ಸಾವಿರ ಕೋಟಿಗೂ ಅಧಿಕ ಮೊತ್ತ ಪಡೆದುಕೊಳ್ಳಬೇಕಾಗಿರುವದರಿಂದ ಸರ್ಕಾರವು ನಮ್ಮ ದೈನಾಸಿಗೆ ಕಣ್ಣು ತೆರೆಯುಲಿಲ್ಲ ಶೇ.ನಲವತ್ತು ಹೆಚ್ಚಿಸಲು ಮನವಿ ಮಾಡಿದ್ದರೂ ಕೇವಲ 27.5 ಆಯ್.ಆರ್.ಶೇ.17 ಸೇರಿ
ಸಂಘಟನೆಗಳು ರಾಜಕೀಯ ಪಕ್ಷಕಗಳ ರೀತಿ ಆಂತರಿಕ ಬೇಗುದಿ ಭಿನ್ನ ಮತ ಪರಸ್ಪರ ಟೀಕೆ ದೋಷಾರೋಪಣೆ ವಿಘಟನೆ ಅಧಿಕಾರ ಲಾಲಸೆಗಳಿಂದ ಇರುತ್ತಿರುವಾಗ ಸರ್ಕಾರ ನಮ್ಮತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಕಾಡು ದೇವರ ಕಾಟ ಕಳೆಯುತ್ತಾರೆ.
ಈ ರಾಜ್ಯದಲ್ಲಿ ಎಪ್ಪತ್ತಕ್ಕೂ ಹೆಚ್ಚು ವೃಂದ ಸಂಘಗಳಿದ್ದು ಇಪ್ಪತ್ತಕ್ಕೂ ಹೆಚ್ಚು ಸಮಾನ ವೃಂದದ ಸಂಘಗಳಿವೆ ಎಂದು ಹೇಳಲಾಗುತ್ತಿದೆ.ಇವರೆಲ್ಲರೂ ಒಂದೇ ವೇದಿಕೆಯಲ್ಲಿ ನೂರಕ್ಕೆ ನೂರರಷ್ಟು ಸರ್ವರೂ ಸೇರಿದ್ದು ಇಲ್ಲವೇ ಇಲ್ಲ ಹೀಗಿದ್ದಾಗ ಒಕ್ಕಟ್ಟಿಲ್ಲದ ಬಿಕ್ಕಟ್ಟಿನ ಸಂಘಟನೆಗಳ ಲಾಭ ಪಡೆಯುವವರು ಯಾರು ಎಂಬುದನ್ನು ಇಲ್ಲಿ ಹೇಳಬೇಕಾಗಿಲ್ಲ. ಸಂಘಟನೆಗಳು ಸರ್ಕಾರದ ಮನ ಮುಟ್ಟುವಲ್ಲಿ ಮನ ತಟ್ಟುವಲ್ಲಿ ಕೆಲವೊಮ್ಮೆ ಒಕ್ಕೊರಲಿನ ಹೋರಾಟಕ್ಕೆ ಇಳಿಯಲೇಬೇಕಾಗುತ್ತದೆ.ಆದರೆ ಈ ಕೆಲಸ ಆಗಬೇಕಾದ್ದು ಆಗಲೇ ಇಲ್ಲ.ಜನ ನಾಯಕರು ನೌಕರರ ಕರ್ತವ್ಯಗಳನ್ನಷ್ಟೇ ಒತ್ತಿ ಒತ್ತಿ ಹೇಳುತ್ತಾರೆ ಆದರೆ ನಮ್ಮ ಹಕ್ಕು ಬಾಧ್ಯತೆಗಳನ್ನು ಆಲಿಸುವುದೇ ಇಲ್ಲ.ಆದಾಗ್ಯೂ ಈ ಹಿಂದೆ ನಾಲ್ಕು ಮುಖ್ಯ ಮಂತ್ರಿಗಳು ವಿಳಂಬವಾದ್ರೂ ಅತೀ ವಿಳಂಬವಾಗದೇ ವೇತನ ಆಯೋಗಗಳ ವರದಿ ಜಾರಿಗೊಳಿಸಿದ್ದಾರೆ. ಈ ದಿಸೆಯಲ್ಲಿ ಅಂದಿನ ದಿಟ್ಟ ಹುಟ್ಟು ಹೋರಾಟಗಾರರಾಗಿದ್ದಂತ ರಾಜ್ಯ ನೌಕರ ನೇತಾರರನ್ನು ನೆನೆಯಲೇ ಬೇಕು.
ಈಗ ಸಧ್ಯ ಇರುವ ಸಂಘಟನೆಗಳ ರಾಜ್ಯ ನೇತಾರರು ಒಂದೇ ವೇದಿಕೆಯಲ್ಲಿ ಬಂದು ಆಂತರಿಕ ಕಚ್ಚಾಟ ಬದಿಗಿಟ್ಟು ದಿಟ್ಟ ಕೆಚ್ಚೆದೆಯ ಹೋರಾಟಕ್ಕೆ ಸನ್ನದ್ಧರಾಗಿ ಈಗ ಸಲ್ಲಿಸಿದ ವರ ದಿ ಏನೂ ಸಾಲದು ಎಂದು ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿ ವೇತನ ಹೆಚ್ಚಿಸಿ ವಿಶೇಷವಾಗಿ ಗ್ರಾಮೀಣ ಭತ್ಯೆ ಕೊಡಿಸಿ ಎಚ್.ಆರ್.ಎ.30,20,15 ಕ್ಕೆ ಹೆಚ್ಚಿಸಲು ಒತ್ತಾಯಿಸಿ ಇಲ್ಲವಾದಲ್ಲಿ ಎಲ್ಲಾ ಸೇವಾನಿರತ ಹಾಗೂ ನಿವೃತ್ತ ನೌಕರರ ಸಂಘಗಳ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಟ್ಟು ಹಿಂದೆ ಸರಿಯಿರಿ ಯುವ ಉತ್ಸಾಹಿ ನವ ಯುವಕರನ್ನು ಮುಂದೆ ಬಿಟ್ಟು ನೋಡಿ.ಇಲ್ಲವಾದಲ್ಲಿ ಸರ್ಕಾರ ಮತ್ತು ಸಂಘಟನೆಗಳ ಮಧ್ಯೆ ನೌಕರರು ಬಡವಾಗುತ್ತಿದ್ದಾರೆ.ಇದಕ್ಕೆ ಅವಕಾಶ ಕೊಡುತ್ತಿರುವ ಸಂಘಟನೆಗಳ ಧೋರಣೆ ಸರಿಯಲ್ಲ.ನೋಡಿ ಯೋಚಿಸಿ ಯೋಜಿಸಿ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ತಾಳ್ಮೆಯ ಕಟ್ಟೆ ಒಡೆದರೆ ಏನಾದರು ಸಂಭವಿಸಬಹುದು ಎಂದು ನಿವೃತ್ತ ನೌಕರ ಅಶೋಕ.ಎಮ್.ಸಜ್ಜನ. ಸರ್ವ ಸಂಘಟನೆಗಳಿಗೆ ಆಗ್ರಹಿಸಿ ಎಚ್ಚರಿಸಿದ್ದಾರೆ.