ಬೆಂಗಳೂರು: ವೇತನ ಆಯೋಗದ ಅಧ್ಯಕ್ಷರು ಸದಸ್ಯರು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಆಯೋಗದ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿತು. ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ , ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಿರಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲಾಗುತ್ತಿದ್ದು ವಿಧಾನಪರಿಷತ್ ಸದಸ್ಯರು ಈ ನಾಡಿನ ಶಿಕ್ಷಕರ ನೌಕರರ ಗಟ್ಟಿಧ್ವನಿಯಾದ ಸನ್ಮಾನ್ಯ ಶ್ರೀ ಪುಟ್ಟಣ್ಣನವರ ನೇತೃತ್ವದಲ್ಲಿ ರಾಜ್ಯದ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೂಡ ಮಾನ್ಯ ಮುಖ್ಯಮಂತ್ರಿಗಳವರ ಮನೆಯಲ್ಲಿ ಉಪಸ್ಥಿತರಿದ್ದು ನಾಡಿನ ನೌಕರರ ಪರವಾದ ವೇತನ ವರದಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದಾರೆ ಎಂಬ ಅಂಶವನ್ನು ತಿಳಿಯಬಯಸುತ್ತೇವೆ. ಈ ಸಂದರ್ಭದಲ್ಲಿ ನೌಕರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಮಾನ್ಯ ಶ್ರೀ ಮಂಜೇಗೌಡರು ಉಪಸ್ಥಿತರಿದ್ದರು.
27.50% ಹೆಚ್ಚಾಗುವ ಸಾಧ್ಯತೆ ಇದೆ…
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಮೆ್ ಸಿದ್ದರಾಮಯ್ಯ.. ಈ ವರದಿ ಯನ್ನು ಆರ್ಥಿಕ ಇಲಾಖೆ ಪರಿಶೀಲನೆ ಮಾಡಲಬೇಕಾಗುತ್ತೆ..27.5 ರಷ್ಟು ವೇತನ ಹೆಚ್ಚು ಮಾಡುವಂತೆ ಮನವಿ ಮಾಡಿದ್ದಾರೆ..
ಅರ್ಥಿಕ ಇಲಾಖೆ ಪರೀಶೀಲನೆ ಮಾಡಿ ಸರ್ಕಾರ ಏನು ತಿರ್ಮಾನ ಮಾಡಲಿದೆ ಎಂಬುದನ್ನು ತಿಳಿಸುತ್ತಾರೆ. ನಂತರ ಸರ್ಕಾರ ತನ್ನ ನಿರ್ದಾರ ತಿಳಿಸಲಿದೆ ಎಂದರು.
ಸರ್ಕಾರ ಆರ್ಥಿಕ ಇಲಾಖೆ ನೀಡುವ ಶಿಪಾರಸ್ಸು ಮಾಡಿದ ಮೇಲೆ ತಮಗೆ ಮುಂದಿನ ನಿರ್ಧಾರ ಮಾಡಲಿದೆ ಎಂದರು..
ಬೇಸಿಕ 17 ಸಾವಿರ ರೂಪಾಯಿ ಇದ್ದಿದ್ದನ್ನು ,27 ಸಾವಿರ ರೂಪಾಯಿ ಮಾಡಬೆಕೆಂದು ವರದಿಯಲ್ಲಿ ತಿಳಿಸಿದ್ದಾರೆ..
17% ವೇತನ ಹೆಚ್ಚಳ ಮುಂದುವರೆಯುತ್ತದೆ..ಮದ್ಯಂತರ ವರದಿಯನ್ನು ಜಾರಿ ಮಾಡಲಾಗಿದೆ..
ಎರಡು ಮೂರು ದಿನ ಆರ್ಥಿಕ ಇಲಾಖೆಗೆ ಸಮಯ ಬೇಕು, ಚುನಾವಣೆ ಘೋಷಣೆ ಆಗಲಿದೆ ನೋಡೊಣ ಎಂದರು..
ಹಾಗೂ ವೇತನ ಆಯೋಗ ಯಾವಾಗ ವಿಸ್ತರಣೆ ಮಾಡಲಾಗಿತ್ತು, ವೇತನ ಆಯೋಗ ಸಂಬಂದಿಸಿದ ಮಾಹಿತಿಯನ್ನು ನೀಡಿದ್ರು..