ಇನ್ನೂ ಮುಂದೆ ಶಿಕ್ಷಕಕರು ಶಾಲೆಗೆ ಬೇಗ ಬರಬೇಕು: ಶಿಕ್ಷಕರಿಗೆ ಖಡಕ್ ಆದೇಶ ಮಾಡಿದ ಶಿಕ್ಷಣ ಇಲಾಖೆ ಆಯುಕ್ತರು…ಅನ್ಯಕಾರ್ಯದ ನಿಮಿತ್ಯ ಹೊರ ಹೋಗುವ ಶಿಕ್ಷಕರೆ ಗಮನಿಸಿ…
ಶಿಕ್ಷಕರು ಅರ್ಧಗಂಟೆ ಮುಂಚೆ ಶಾಲೆಗೆ ಬರಬೇಕು: ಶಿಕ್ಷಣ ಇಲಾಖೆ..
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕ್ಕಳ ಕಲಿಕಾ ಗುಣ
ಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧ ಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಮಕ್ಕಳ ಶೈಕ್ಷಣಿಕ, ಬೌದ್ಧಿಕ ಹಾಗೂ ಸಾಮಾಜಿಕಬೆಳೆವಣಿಗೆ ದೃಷ್ಟಿಯಿಂದಶಿಕ್ಷಕರುತಮ್ಮಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಇತರೆ ಸಹ ಶಿಕ್ಷಕರು ನಿಗ ದಿತ ಸಮಯಕ್ಕೆ ಅರ್ಧಗಂಟೆ ಮೊದಲೇ ಕರ್ತವ್ಯಕ್ಕೆ ಹಾಜರಾಗಿ ಇಲಾಖಾ ಮಾರ್ಗ ಸೂಚಿಗಳನ್ನು ಅನುಸರಿಸಬೇಕು. ರಜೆಯ ಮೇಲೆ ತೆರಳುವಾಗ, ಶಾಲೆಗೆ ಹಾಜ ರಾಗಿದ್ದ ವೇಳೆ ಅನ್ಯ ಕಾರ್ಯನಿಮಿತ್ತ ಹೊರೆಗೆ ಹೋಗುವುದಾದರೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಂದ ಪೂರ್ವಾನುಮತಿ ಪಡೆದಿರಬೇಕು. ಶಿಕ್ಷಕರು ಶಾಲಾ ಅವಧಿಯಲ್ಲಿ ಬಿಇಒ, ಡಿಡಿಪಿಐ ಕಚೇರಿಗಳಿಗೆ ತೆರಳುವುದನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು ಎಂದು ಇಲಾಖಾ ಆಯುಕ್ತ ಬಿ.ಬಿ.ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ