ಶ್ರೀಯುತ ಜಗದೀಶ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಡವಿನಾಗೇನಹಳ್ಳಿ ಕೊಡಿಗೇನಹಳ್ಳಿ ಹೋಬಳಿ ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆ
ಇವರನ್ನು ಮಾನ್ಯ
ಕ್ಷೇತ್ರ ಶಿಕ್ಷಣಾಧಿಕಾರಿ ಮಧುಗಿರಿ ರವರು ವಿವಿಧ ರೀತಿಯ ಕಾರಣಗಳನ್ನು ಸೂಚಿಸಿ ಶಿಸ್ತು ಕ್ರಮ ಜಾರಿ ಮಾಡಲು ಮಾನ್ಯ
ಉಪ ನಿರ್ದೇಶಕರು ತುಮಕೂರು ಉತ್ತರ ಮಧುಗಿರಿ ಶೈಕ್ಷಣಿಕ ಜಿಲ್ಲೆ ಇವರಿಗೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ
ಮಾನ್ಯ ಉಪ ನಿರ್ದೇಶಕರು
ಕ್ಷೇತ್ರ ಶಿಕ್ಷಣಾಧಿಕಾರಿ ಮಧುಗಿರಿರವರ ವರದಿಯ ಅನುಸಾರ ಇತ್ತೀಚಿಗೆ ಅಮಾನತ್ ಆದೇಶವನ್ನು ಜಾರಿ ಮಾಡಿದ್ದರು ಸದರಿ ಶಿಕ್ಷಕರನ್ನು ಒಟ್ಟಾರೆ ಇವರನ್ನು 2 ಬಾರಿ ಅಮಾನತ್ ಮಾಡಿದ ಕಾರಣಗಳಿಂದ ಇದರಿಂದ ಮಾನಸಿಕ ವಾಗಿ ನೋವಿನ ಪರಿಣಾಮಗಳಿಂದ ಅನಾರೋಗ್ಯ ವಾತಾವರಣ ಉಂಟಾಗಿರುತ್ತದೆ ಶ್ರೀಯುತ ಜಗದೀಶ್ ರವರಿಗೆ ಆರೋಗ್ಯದಲ್ಲಿ ಅತ್ಯಂತ
ತೀರ್ವ ರೀತಿಯಲ್ಲಿ ಏರು ಪೇರು ಉಂಟಾಗಿದ್ದು ದೇಹದಲ್ಲಿ ಅಧಿಕ ರಕ್ತದ ಒತ್ತಡ ಪ್ರಮಾಣ
ಹಾಗೂ ದೇಹದಲ್ಲಿ
ಅಧಿಕವಾದ ಸಕ್ಕರೆ ಶುಗರ್ ಪ್ರಮಾಣ ಏರಿಕೆಯ ಅನಾರೋಗ್ಯದ ಕಾರಣಗಳಿಂದ ಸರ್ಕಾರಿ ಆಸ್ಪತ್ರೆ ಮಧುಗಿರಿಯಲ್ಲಿ ಕುಟುಂಬ ವರ್ಗದವರು ದಾಖಲು ಮಾಡಿದ್ದರು.
ಆದರೆ ಸದರಿ ಶಿಕ್ಷಕರ
ಆರೋಗ್ಯದಲ್ಲಿ ಚೇತರಿಕೆ ಯಾಗದೆ ಇಂದು ಸರ್ಕಾರಿ ಆಸ್ಪತ್ರೆ ಮಧುಗಿರಿ ಯಲ್ಲಿ ಅಕಾಲಿಕ ಮರಣವನ್ನು ಹೊಂದಿರುತ್ತಾರೆ.
ಎಂದು ಕುಟುಂಬ ವರ್ಗ ತಿಳಿಸಿರುತ್ತಾರೆ ಆದ್ದರಿಂದ ಸದರಿ ಶ್ರೀಯುತ ಜಗದೀಶ್ ರವರ ಆತ್ಮಕ್ಕೆ ಶಾಂತಿ ಸದ್ಗತಿ ದೊರಕುವ ಮುಕಾಂತರ ಅವರ ಕುಟುಂಬವರ್ಗ ದವರಿಗೆ ಮತ್ತು ಸ್ನೇಹಿತರ ಬಳಗದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಕೋರುತ್ತೇವೆ.
ಇಂತಿ. ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರ ವೃಂದ ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆ