ಸಿ& ಆರ್ ತಿದ್ದುಪಡಿಗೆ ಮತ್ತು ಬಡ್ತಿ ಪ್ರಕ್ರಿಯೆ ಆರಂಭಿಸಲು ಒತ್ತಾಯ
ಶಿಕ್ಷಕರುಗಳಾಗಿ ಇಲಾಖೆಯಲ್ಲಿ ನೇಮಕಗೊಂಡು 1-8 ತರಗತಿಗಳನ್ನು ಬೋಧಿಸುತ್ತಾ ದೀರ್ಘಕಾಲ ಸೇವೆ ಸಲ್ಲಿಸುತ್ತಿದ್ದು, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಗಳನ್ನು ಪಡೆದವರು ಇದ್ದೇವೆ ಆದರೆ ಸೇವಾಹಿರಿತನ & ವಿದ್ಯಾರ್ಹತೆ ಇದ್ದರೂ ಈಗ ನಮ್ಮನ್ನು PST 1-5 ಕೇಡರ್ ಗೆ ಪರಿಗಣಿಸಲಾಗುತ್ತಿದ್ದು ಇದರಿಂದ ವರ್ಗಾವಣೆಯಲ್ಲಿ , ಹೆಚ್ಚುವರಿಯಲ್ಲಿ ತೊಂದರೆ ಅನುಭವಿಸುತ್ತಿದ್ದೇವೆ. ಅಲ್ಲದೇ 1ರಿಂದ 8 ನೇ ತರಗತಿಯವರೆಗೆ ಬೋಧಿಸುತ್ತಾ ಬಂದಿದ್ದು ಇರುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಿ& ಆರ್ ನಿಯಮಾವಳಿಗಳ ತಿದ್ದುಪಡಿಯಾದ ನಂತರ ಸೇವಾಜೇಷ್ಟತೆಯೊಂದಿಗೆ ಬಡ್ತಿ ಪ್ರಕ್ರಿಯೆಯು ನಡೆದಿರುವುದಿಲ್ಲ ಇದರಿಂದ ಅರ್ಹ ಸೇವಾನಿರತ ಪದವೀದರ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ.
ಪ್ರಧಾನಗುರುಗಳ ಹುದ್ದೆ ಬಡ್ತಿ ಗೆ ನ್ಯಾಯಾಲಯದ ಪ್ರಕರಣದ ಹಿನ್ನಲೆಯಲ್ಲಿ ಕೌನ್ಸಿಲಿಂಗ್ ಅನ್ನು ಮುಂದೂಡಲಾಗಿದ್ದು ಇದರಿಂದ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಇಲಾಖೆಯಿಂದ ಶೀಘ್ರವಾಗಿ ನ್ಯಾಯಾಲಯದ ಪ್ರಕರಣವನ್ನು ಇತ್ಯರ್ಥಗೊಳಿಸಿ ಎಲ್ಲ ಶಿಕ್ಷಕರ ಸೇವಾ ವಿಲೀನತೆಯೊಂದಿಗೆ ಬಡ್ತಿ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಲು ಸಿ& ಆರ್ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಶೀಘ್ರವಾಗಿ ಬಡ್ತಿ ಪ್ರಕ್ರಿಯೆ ಆರಂಭಿಸಲು ಕೋರುತ್ತೇವೆ. ಸೇವಾ ವಿಲೀನದೊಂದಿಗೆ ಬಡ್ತಿ ಪ್ರಕ್ರಿಯೆ ಮೊದಲ ಆದ್ಯತೆಯಾಗಲಿ ಅಲ್ಲದೇ ವೇತನ ಆಯೋಗದ ಅನುಷ್ಠಾನದ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ಸೇರಿದಂತೆ,1994,1997,2002,2005,2007,2010 ರ ಬ್ಯಾಚಿನಲ್ಲಿ ನೇಮಕಗೊಂಡ ಶಿಕ್ಷಕರಿಗೆ ವೇತನ ತಾರತಮ್ಯವಾಗಿದ್ದು ಅದನ್ನು ಏಳನೇ ವೇತನ ಆಯೋಗದ ಅನುಷ್ಠಾನ ಸಂದರ್ಭದಲ್ಲಿ ಸರಿಪಡಿಸುವಂತೆ ಕೋರಿ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಘದವರು ಈ ಕುರಿತು ದಿಟ್ಟ ಹೋರಾಟ ಕೈಗೊಳ್ಳಲು ಒತ್ತಾಯಿಸುತ್ತಾ, ನ್ಯಾಯ ಸಿಗದೇ ಇದ್ದರೆ ಬರುವ ದಿನಗಳಲ್ಲಿ ತರಗತಿ ಬಹಿಷ್ಕಾರಕ್ಕೆ ಸಜ್ಜಾಗಲು ಶಿಕ್ಷಕರು ತಿಳಿಸಿದರು
ಪತ್ರಾಂಕಿತ ವ್ಯವಸ್ಥಾಪಕರಾದ ಸಂತೋಷಕುಮಾರ್ ಬಿಜಾಪುರ ರವರು ಮತ್ತು ಮನವಿ ಸ್ವೀಕರಿಸಿ ಮಾತಾಡಿದ ಕ್ಷೇತ್ರಸಮನ್ವಯಾಧಿಕಾರಿಗಳಾದ ಎಂ ವಿ ಅಡವೇರ್ ರವರು ಮನವಿಯನ್ನು ಮೇಲಾಧಿಕಾರಿಗಳಿಗೆ ಯಥಾವತ್ತಾಗಿ ಕಳುಹಿಸಿಕೊಡಲಾಗುವದು ಎಂದರು.
ಈ ಸಂದರ್ಭದಲ್ಲಿ ಪಿ ಎಫ್ ಗುಡೇನಕಟ್ಟಿ, ಎಂ ಆರ್ ಕಬ್ಬೇರ್, ಪ್ರಭಾಕರ ಕುಸಗೂರ್, ಆರ್ ಎಸ್ ಹಿರೇಗೌಡ್ರ, ಎಸ್ ಬಿ ಅರಮನಿ, ವಿ ಎಂ ಪಾಟೀಲ, ಜೆ ಡಿ ಸಾಂಬ್ರಾಣಿ, ಎಸ್ ಡಿ ದ್ಯಾವನಕೊಂಡ, ಉಮಾ ಅಳಗವಾಡಿ, ಸಾಧನಾ ಗರಗ, ಶುಭಾ ಕುಲಕರ್ಣಿ ,ರೇಖಾ ಶೆಟ್ಟಿ, ಮೌನೇಶ್ ಕಮ್ಮಾರ್, ನಾಗರಾಜ ತಳವಾರ, ಪ್ರದೀಪ ಶೆಟ್ಟಿ, ಆರ್ ಕೆ ಪಿಂಜಾರ್, ಇಮ್ರಾನ್ ರಾಣೆಬೆನ್ನೂರ, ಎಚ್ ಎಂ ದೊಡಮನಿ, ವಿ ಪಿ ಬಡಿಗೇರ್,ನಾಗರಾಜ್ ಈಚಗೇರಿ, ಎ ಸಿ ಕಲ್ಯಾಣಶೆಟ್ಟರ್, ಪಿ ಎಂ ಸಿಂಗನಹಳ್ಳಿ, ಮುದಕನಗೌಡ್ರ, ಭಾಗ್ಯ ಕ್ಯಾಸನೂರ್, ಪಂಚಬಾವಿ, ಸುರೇಖಾ ಯರಗಟ್ಟಿ, ಪಿ ಕೆ ನಿಂಬನಗೌಡ್ರ, ಜಬೀನಾ ಹುನಗುಂದ, ಸುಮಿತಾ ಹಿರೇಮಠ ಅವು ಸೇರಿದಂತೆ ನೂರಾರು ಶಿಕ್ಷಕರು ಉಪಸ್ಥಿತರಿದ್ದರು