ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹುಬ್ಬಳ್ಳಿಯ ದಾಕ್ಷಾಯಣಿ ಎಸ್ ಬಿರಾದಾರ
ಹುಬ್ಬಳ್ಳಿ,..
ರಾಷ್ಟ್ರಮಟ್ಟದ ಈಜು ಕ್ರೀಡಾಪಟು.ಶಿಕ್ಷಕಿ ಹುಬ್ಬಳ್ಳಿ ಗಿರಣಿಚಾಳ ಶಾಲೆಯ ದ್ರಾಕ್ಷಾಯಣಿ ಬಿರಾದಾರ
ಇವರು ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ, ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ. 50 . ಮೀಫ್ರೀ ಸ್ಟೈಲಿನಲ್ಲಿ ಪ್ರಥಮ ಬಂದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. .
ಶಿಕ್ಷಕರು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಇವರು, ಈಜುವ ಕಲೆಯನ್ನು ಬಾಲ್ಯದಿಂದಲೂ ರೂಢಿಸಿಕೊಂಡು ಬಂದಿರುತ್ತಾರೆ, ಕಲಿಕೆಗೂ ಸೈ, ಈಜಲು ಸೈ ಎಣಿಸಿರುವ ಇವರ ಸಾಧನೆಯನ್ನು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರು ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಧಾರವಾಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಅಕ್ಬರಲಿ ಸೋಲಾಪುರ ಮುಕ್ತಕಂಠದಿಂದ ಹೊಗಳಿದ್ದಾರೆ, ಅಭಿನಂದಿಸಿದ್ದಾರೆ,