ಮಾತೆ ಸಾವಿತ್ರಿಬಾಯಿ ಫುಲೆ ಪುಣ್ಯ ಸ್ಮರಣಾ ದಿನ ನಿಮಿತ್ತ
ಪೌರ ಕಾರ್ಮಿಕರಿಗೆ ಸನ್ಮಾನ
ದೇಶ ಕಾಯುವ ಯೋಧರನ್ನು ,ಹಸಿವು ನೀಗಿಸುವ ರೈತರನ್ನು ನೆನೆಯುವಷ್ಟೇ ದೇಶಕ್ಕಾಗಿ ದುಡಿಯುವ ಪೌರ ಕಾರ್ಮಿಕರನ್ನು ನೆನೆದು, ತಮ್ಮ ಬಡಾವಣಾ ವ್ತಾಪ್ತಿಗೆ ಬರುವ ಪೌರ ಕಾರ್ಮಿಕರನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಇಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ರಿ.ನವದೆಹಲಿ ಇದರ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಆದ ಡಾ.ಲತಾ.ಎಸ್ ಮುಳ್ಳೂರ ರವರು ಮಾತೇ ಸಾವಿತ್ರಿಬಾಯಿ ಫುಲೆ ರವರ ಪುಣ್ಯ ಸ್ಮರಣಾ ದಿನವನ್ನು ತಮ್ಮನಿವಾಸದ ಸಬಾ ಅಂಗಳದಲ್ಲಿ ಅಚರಿಸುವ ಮೂಲಕ ಮಾದರಿಯಾದರು.
ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಡಾ.ಲತಾ.ಎಸ್.ಮುಳ್ಳೂರ ರವರು
ದೇಶದ ಸ್ವಚ್ಚತೆಯು ದೇಶದ ಅಭಿವೃದ್ಧಿಯಷ್ಟೇ ಪ್ರಮುಖ ಪಾತ್ರವಹಿಸಲಿದೆ. ಸ್ವಚ್ಚತಾ ಕಾರ್ಯದಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ಪೌರ ಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕಿದೆ.ಅವರ ಬದುಕಿಗೆ ನಾವೆಲ್ಲರೂ ಸಹಕಾರ ನೆರೆವು ನೀಡಬೇಕಿದೆ.ಎಲ್ಲರಿಗೂ ಅವರದ್ದೆ ಆದ ಸ್ಥಾನಮಾನಗಳಿರುತ್ತವೆ, ಅವರನ್ನು ಕಸ ಕಸಿನವರು ಎಂದೆಲ್ಲ ಗುರ್ತಿಸಿ ಕರೆಯುವ ವಾಡಿಕೆಯನ್ನು ಬಿಡಬೇಕಿದೆ.
ಅವರನ್ನು ನಾವು ಗೌರವದಿಂದ ನಡೆಸಿಕೊಳ್ಳಬೇಕಾಗಿದೆ.
ಸ್ವಚ್ಚತೆಯೂ ಕೂಡ ದೇಶದ ಅಭಿವೃದ್ಧಿಯನ್ನು ಬಿಂಬಿಸುವ ಕನ್ನಡಿಯಾಗಿದೆ. ಮನೆಯ
ಕಸದ ವಿಲೇವಾರಿಯ ಸರಿಯಾದ ಕ್ರಮಗಳು ನಮ್ಮಿಂದಲೇ ಶುರು ಆಗಬೇಕಿದೆ. ಹಸಿಕಸ, ಒಣಕಸ,ಅಪಾಯಕಾರಿ ಕಸ, ಎಂದು ನಾವೆಲ್ಲರು ಮನೆಯಲ್ಲಿಯೇ ಮೂರು ಡಸ್ಟ್ ಬಕೆಟ್ ಗಳನ್ನು ಬಳಸಿ ವಿಂಗಡಣೆ ಮಾಡಿಕೊಡಬೇಕಿದೆ.
ಇದರಿಂದ ಮುಂದಿನ ಹಂತದ ಕಸ ವಿಲೇವಾರಿ ಕ್ರಮವಹಿಸಲು ಸುಲಭವಾಗಲಿದೆ ಎಂದರು,
ಈ ಒಂದು ಸಾಮಾಜಿಕ ಕಳಕಳಿಯ
ಕಾರ್ಯಕ್ರಮದಲ್ಲಿ ಶ್ರೀಮತಿ ಗಾಯತ್ರಿ. ಕಮ್ಮಾರ.CRP. ನವಲೂರ ಕ್ಲಸ್ಟರ ಧಾರವಾಡ ಶಹರ.ಹಾಗೂ ಶ್ರೀಮತಿ. ಶಾಂತಾ.ಬಿರಾದಾರ. ರಾಷ್ಟ್ರೀಯ ಸಂಘಟನಾ.ಕಾರ್ಯದರ್ಶಿ. ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್.(ರಿ)ನವದೆಹಲಿ ರವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಅವರುಗಳಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಿಗೆ ಸನ್ಮಾನಿತರಿಗೆ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದ್ದು,ಸನ್ಮಾನಿತ ಪೌರಕಾರ್ಮಿಕರು ಈ ಸಂದರ್ಭದಲ್ಲಿ ಮಾತೆಯನ್ನು ನೆನೆದು ಆತಿಥ್ಯ ಸ್ವೀಕರಿಸಿ ಉತ್ತಮ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದರು.