ಕಿರಿಯ ವಯಸ್ಸಿನಲ್ಲಿ ಗ್ರಾಮ ಪಂಚಾಯತಿ ಚುಕ್ಕಾಣಿ ಹಿಡಿದ ಹಣಮಂತ ಸಿಂಗನ್ನವರ..
೨೦೦೦ ನೇ ಇಸ್ವಿ ಎಂ.ಎಸ್.ಹೊಂಗಲ ಗುರುಗಳು ಕಬಡ್ಡಿ ಟೀಂ ತಯಾರು ಮಾಡುತ್ತಿದ್ದರು.ತೆಗ್ಗಿಹಾಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಾನು ಪ್ರಭಾರಿ ಮುಖ್ಯೋಪಾಧ್ಯಾಯರ ಹುದ್ದೆ ನಿರ್ವಹಿಸುತ್ತಿದ್ದೆ. ಅಡಿಭಟ್ಟಿ ಗುರುಗಳು ವ್ಹಾಲಿಬಾಲ್ ಟೀಂ ತಯಾರಿ ಮಾಡುತ್ತಿದ್ದರು. ನಮ್ಮೊಡನೆ ಸದ್ಯ ಬೆಡಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಶೋಕ ಕಬ್ಬಿನ. ಇದ್ದರು. ಶಿಕ್ಷಕ ಬಳಗದ ಪ್ರತಿಫಲ ನಮ್ಮ ಶಾಲೆ ಕೋಕೋ ಮತ್ತು ವ್ಹಾಲಿಬಾಲ್.ಕಬಡ್ಡಿ ತಂಡಗಳ ಮೂಲಕ ಮುನವಳ್ಳಿ ವಲಯ ಮಟ್ಟದ ಪಂದ್ಯಾಟಗಳಲ್ಲಿ ತನ್ನದೇ ಆದ ಹೆಸರು ಗಳಿಸಿತು.ಗ್ರಾಮೀಣ ಮಟ್ಟದ ಶಾಲೆಯೊಂದು ಈ ರೀತಿಯ ಸಾಧನೆ ಮಾಡಲು ಸದ್ಯ ಮುನವಳ್ಳಿ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಿರುವ ಯಕ್ಕುಂಡಿಯವರಾದ ಎಂ.ಎಸ್.ಹೊಂಗಲ ಹಾಗೂ ನಿವೃತ್ತ ಜೀವನ ಸಾಗಿಸುತ್ತಿರುವ ಆರ್.ಐ.ಅಡಿಭಟ್ಟಿ. ವೀಣಾ ಅಂಬಿಗೇರ (ನಲಿಕಲಿ. ಸದ್ಯ ಸಿಂದೋಗಿ ಶಾಲೆ) ಅಶೋಕ ಕಬ್ಬಿನ ಗುರುಗಳ ಸಾಂಘಿಕ ಪ್ರಯತ್ನ ಕಾರಣ. ಈ ಮಾತು ಯಾಕೆ ಹೇಳುತ್ತಿರುವೆನಂದರೆ ಆ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಂದಿಗೂ ಕೂಡ ಇಂದಿಗೂ ಎಲ್ಲ ಗುರುಗಳ ಸಂಪರ್ಕದಲ್ಲಿದ್ದು ಸಮಾಜದಲ್ಲಿ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ತಮ್ಮನ್ನು ಗುರುತಿಸಿಕೊಂಡು ಗುರುಗಳ ಸಂಪರ್ಕದಲ್ಲಿದ್ದವರು. ಅಂಥವರಲ್ಲಿ ಹಣಮಂತ.ರಮೇಶ.ಸಿಂಗನ್ನವರ ಕೂಡ ಒಬ್ಬ.
ಇಂದು ಅವರ ೩೦ ನೇ ವರ್ಷದ ಹುಟ್ಟು ಹಬ್ಬ.
ತೆಗ್ಗಿಹಾಳ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ತಮ್ಮದೇ ಆದ ಯುವಪಡೆಯ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವನು. ಇತ್ತೀಚಿಗೆ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ ಕೂಡ ಕಿರಿಯ ವಯಸ್ಸಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವಾತ. ತಾನು ಅಧ್ಯಕ್ಷ ಹುದ್ದೆಗೆ ಆಯ್ಕೆ ಆದ ತಕ್ಷಣ ಎಲ್ಲ ಗುರುಗಳ ಮನೆಗೆ ಹೋಗಿ ಗುರುಗಳ ಆಶೀರ್ವಾದ ಪಡೆಯುವ ಮೂಲಕ ಗುರುಗಳ ಬಗ್ಗೆ ತನಗಿರುವ ಗೌರವ ತೋರಿಸಿದಾತ.
ಸಿಂಗನ್ನವರ ಅಂದು ಹೇಗಿದ್ದನೋ ಹಾಗೆಯೇ ಗುರುಗಳ ಬಗ್ಗೆ ತನ್ನ ಗೌರವ ಭಾವನೆ ಹೊಂದಿದ್ದಾನೆ. ಆ ವರ್ಷದ ಹಲವು ವಿದ್ಯಾರ್ಥಿಗಳು ಇಂದಿಗೂ ತಮ್ಮದೇ ಆದ ಪ್ರತಿಭೆಯ ಮೂಲಕ ನಮಗೆಲ್ಲ ಚಿರಪರಿಚಿತರಾಗಿ ನಮ್ಮೆದುರು ಇರುವರು.
ಹಲವು ಹೆಸರುಗಳನ್ನು ಇಲ್ಲಿ ನೆನಪಿಸುವೆ. ಬೆಂಗಳೂರಿನ ಯಲಹಂಕ ಬಳಿ ಇರುವ ಮುದಕಪ್ಪ ಜೇಡರ ಹಾಗೂ ಪ್ರಕಾಶ ಜೇಡರ. ಐ.ಟಿ.ಐ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತ ತನ್ನ ಕಾರ್ಯದಕ್ಷತೆಯಿಂದ ಲಂಡನ್ ವರೆಗೂ ಹೋಗಿ ತರಬೇತಿ ಪಡೆದುಕೊಂಡು ಬಂದು ವಿವಾಹ ಸಂದರ್ಭದಲ್ಲಿ ತನಗೆ ಉಪಕರಿಸಿದ ಬೆಟಗೇರಿ ವೈದ್ಯರನ್ನು ನನ್ನನ್ನು ಮಂತ್ರಾಕ್ಷತೆಯ ಸಂದರ್ಭದಲ್ಲಿ ಕರೆದುಕೊಂಡು ಆಶೀರ್ವಾದ ಪಡೆದ ವಿದ್ಯಾರ್ಥಿ ಮುದಕಪ್ಪ ಜೇಡರ. ಇಂದಿಗೂ ನಾನು ಬೆಂಗಳೂರಿಗೆ ಕಾರ್ಯನಿಮಿತ್ತ ತೆರಳಿದ ಸುದ್ದಿ ತಿಳಿದರೆ ಸಾಕು ನಾನಿರುವಲ್ಲಿಗೆ ಬಂದು ತನ್ನ ಮನೆಗೆ ಕರೆದುಕೊಂಡು ಹೋಗುವ ಜೇಡರ ಸಹೋದರರ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.
ಇತ್ತೀಚಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿ ಬಂದ ಸೋಮನಿಂಗ ತುಳಜನ್ನವರ ತೆಗ್ಗಿಹಾಳ ಗ್ರಾಮದಲ್ಲಿ ತನ್ನ ನಿವೃತ್ತಿ ಸಮಾರಂಭವನ್ನು ತನ್ನೊಡನೆ ಸೇವೆ ಸಲ್ಲಿಸಿದ ತಾಲೂಕಿನ ವವಿಧ ಗ್ರಾಮಗಳ ಸೈನಿಕರೊಂದಿಗೆ ಗೌರವ ಸನ್ಮಾನ ಪಡೆದುಕೊಂಡ ಕ್ಷಣಗಳು ಇಲ್ಲಿ ನೆನಪಾಗುತ್ತವೆ. ಸದ್ಯ ಧಾರವಾಡದಲ್ಲಿ ವಾಸವಿರುವ ಈತ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪ್ರತಿಭೆ ಹೀಗೆ ಇನ್ನೂ ಸೇವೆಯಲ್ಲಿರುವ ಚಂದ್ರಗೌಡ ಸೋಮನಾಯ್ಕ ಪಾಟೀಲ (ಪೋಲಿಸ್ ಇಲಾಖೆ) ತಿಪ್ಪಣ್ಣ.ಕರಿಗಾರ ಟಿಕೀಟ ಕಲೆಕ್ಟರ್.(ರೈಲ್ವೆ ಇಲಾಖೆ) ಬಸಪ್ಪ ಇದ್ಲಿ (ಸಿವ್ಹಿಲ್ ಪಿಎಸ್ಐ) ವಿನೋದ ಪಾಟೀಲ (ವಾಯುಸೇವೆ ಕಸ್ಟಮ್ಸ ವಿಭಾಗ) ರಾಯಪ್ಪ ಕರಿಗಾರ.(ಬಿ.ಎಸ್.ಎಫ್) ಮಂಜುನಾಥ ಸಿಂಗನ್ನವರ (ಅರೋಗ್ಯ ಇಲಾಖೆ ಯರಗಟ್ಟಿ ಹಾಗೂ ಸಾಹಿತಿ). ಪ್ರಕಾಶಗೌಡ.ಪಾಟೀಲ (ನಿವೃತ್ತ ಭಾರತೀಯ ಸೇನೆ ಯರಗಟ್ಟಿ.) ಕಟಿಗೆನ್ನವರ ಸಿದ್ದಪ್ಪ (ಪ್ರವಾಸೋದ್ಯಮ ಇಲಾಖೆ. ಓರ್ವ ರಂಗಭೂಮಿ ಕಲಾವಿದ.ಪರಸಗಡ ನಾಟಕೋತ್ಸವ) ಹಣಮಂತಗೌಡ(ರಾಜು) ಪಾಟೀಲ. ಪಿ.ಎಸ್.ಐ ಗದಗ.ಸುರೇಶ ಮುದಗೊನ್ನವರ (ಸಿವ್ಹಿಲ್ ಪೋಲಿಸ್) ನಿಸ್ಸಾರ ಅಹಮ್ಮದ್ ಜಕಾತಿ (ರೈಲ್ವೆ ಇಲಾಖೆ). ಆನಂದ ಕರಿಗಾರ (ಬಿಎಸ್ ಎಪ್).ಬಲರಾಮ ಸಿಂಗನ್ನವರ(ರೈಲ್ವೆ ಇಲಾಖೆ) ಈ ಎಲ್ಲ ವಿದ್ಯಾರ್ಥಿಗಳು ಒಂದು ಸಲ ಕಣ್ಮುಂದೆ ಬಂದು ನಿಲ್ಲುವರು. ಇವರಲ್ಲಿ ರಾಜಕೀಯದಲ್ಲಿ ಬೆಳೆಯುತ್ತಿರುವ ಪ್ರತಿಭೆ ಹಣಮಂತ.ಸಿಂಗನ್ನವರ.
ಹಣಮಂತ ಸಿಂಗನ್ನವರ ಜನಿಸಿದ್ದು ತೆಗ್ಗಿಹಾಳದಲ್ಲಿ ರಮೇಶ ಹಾಗೂ ರೇಣುಕಾರ ಜೇಷ್ಠಪುತ್ರನಾಗಿ ೧೦ನೇಯ ಮಾರ್ಚ ೧೯೯೩ ರಂದು. ಬಾಲ್ಯದಿಂದಲೂ ಬಹಳ ಕಿಲಾಡಿ ಈತ.,ಶಾಲೆಯ ಹತ್ತಿರ ಮನೆ. ಸದ್ಯ ಇವರ ಮನೆ ತಮ್ಮ ಕೃಷಿ ಜಮೀನಿನಲ್ಲಿದೆ.ಇವರ ಅಜ್ಜನ ಹೆಸರು ಭೀಮಪ್ಪ.ನಿಂಗವ್ವ.ಭೀಮವ್ವ.ಮಂಜುಳಾ ಇವನ ಸಹೋದರಿಯವರು. ಓರ್ವ ಸಹೋದರ ಮಾರುತಿ. ಈ ಕುಟುಂಬದ ಹಿರಿಯ ಮಗ ಹಣಮಂತ ಶಾಲೆಯಲ್ಲಿ ಆಟದಲ್ಲಿ ಮುಂದು.ಹೊಂಗಲ ಗುರುಗಳು ಇವನ ಪ್ರತಿಭೆ ಕಂಡು ಇವರ ಸ್ನೇಹಿತರನ್ನೆಲ್ಲ ಸೇರಿಸಿ ಕಬಡ್ಡಿ ಟೀಂ ಕಟ್ಟಿದ್ದು ಆ ಟೀಂ ಮೂಲಕ ಬೆಳಗಾವಿ ಜಿಲ್ಲಾ ಮಟ್ಟದವರೆಗೂ ನಮ್ಮ ಶಾಲೆ ಹೋಗಿದ್ದು ಹಣಮಂತ ಈಗ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿರುವುದನ್ನು ಕಂಡಾಗ ಅಂದಿನ ಇವನ ನಾಯಕತ್ವ ಗುಣ ಇಂದು ಈತ ಬೆಳೆದು ಬಂದ ಹಾದಿಯನ್ನು ಅವಲೋಕಿಸಿದಾಗ ಶಾಲಾ ಸಂದರ್ಭದ ಘಟನೆಗಳು ನೆನಪಿಗೆ ಬರುತ್ತವೆ.
ತನ್ನ ೨೨ನೇ ವಯಸ್ಸಿನಲ್ಲಿ ಈತ ಸವದತ್ತಿ ತಾಲೂಕು ಹಾಲುಮತ ಸಮಾಜದ ಕಾರ್ಯಾಧ್ಯಕ್ಷನಾಗಿ ಸಮಾಜದ ಕಾರ್ಯದಲ್ಲಿ ತನ್ನನ್ನು ಗುರುತಿಸಿಕೊಂಡನು.೨೪ನೇ ವಯಸ್ಸಿಗೆ ಸವದತ್ತಿ ತಾಲೂಕಿನ ರೈತ ಸಂಘದ ಉಪಾಧ್ಯಕ್ಷ ಸ್ಥಾನಕ್ಕೇರಿದ.೨೬ ನೆಯ ವಯಸ್ಸಿನಲ್ಲಿ ಯರಗಟ್ಟಿ ಮುನವಳ್ಳಿ ಬ್ಲಾಕ್ ಕಾಂಗ್ರೇಸ್ ಸದಸ್ಯ ಸ್ಥಾನವನ್ನು ನಿರ್ವಹಿಸಿದನು.೨೦೨೦ ರ ರಲ್ಲಿ ಜರುಗಿದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷಬೇದ ಮರೆತು ಇವನ ಸ್ನೇಹಿತರು ಇವನು ಗ್ರಾಮಪಂಚಾಯತಿ ಸದಸ್ಯನಾಗಿ ಆಯ್ಕೆಯಾಗುವಲ್ಲಿ ಶ್ರಮಿಸಿದರು.ಇಂದಿಗೂ ಎಲ್ಲ ಸ್ನೇಹಿತರೊಡನೆ ಸ್ನೇಹಜೀವಿಯಾಗಿ ತನ್ನ ರಾಜಕೀಯ ಚಟುವಟಿಕೆಗಳನ್ನು ಮಾಡುತ್ತ ತನ್ನ ವಾರ್ಡನಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸ್ನೇಹಿತರ ಕಣ್ಮಣಿಯಾಗಿರುವನು.ಕ್ರೀಡಾ ಚಟುವಟಿಕೆಗಳಿಗೆ ತನ್ನ ಪ್ರೋತ್ಸಾಹ ನೀಡುತ್ತ ಕೋರೋನಾ ಸಂದರ್ಭದಲ್ಲಿ ಸೇವೆಗೈದ ಆಶಾ ಕಾರ್ಯಕರ್ತೆಯರನ್ನು ವೈದ್ಯಕೀಯ ಸಿಬ್ಬಂಧಿಯನ್ನು ಸ್ಮರಿಸಿದ ಜೊತೆಗೆ ಅವರ ಸನ್ಮಾನವನ್ನು ಕೂಡ ಈತ ತನ್ನ ಸಂಘಟನೆಯ ಮೂಲಕ ಮಾಡಿದನು.
ಇಂದಿಗೂ ಕೂಡ ಸಪ್ಟಂಬರ್ ೫ ಶಿಕ್ಷಕರ ದಿನಾಚರಣೆಯಂದು ತನ್ನ ಗುರುಗಳ ಮನೆಗೆ ತನ್ನ ಸ್ನೇಹಿತರೊಂದಿಗೆ ತೆರಳಿ ಗುರುಗಳನ್ನು ಗೌರವಿಸುವ ಇವನ ಕಾರ್ಯ ನಮಗೆಲ್ಲ ಹೆಮ್ಮೆ.೨೨ ಜುಲೈ ೨೦೨೩ ರಲ್ಲಿ ಜರುಗಿದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಹಣಮಂತ ಸಿಂಗನ್ನವರ ಶಾಲಾ ಆವರಣ ಮತ್ತು ಸುತ್ತುಗೋಡೆ.ಶೌಚಾಲಯದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮಾದರಿಯಾಗಿರುವನು.
ನನ್ನೆಲ್ಲ ಶಿಕ್ಷಕ ವೃಂದ ಹೊಂಗಲ ಗುರುಗಳು.ಅಡಿಭಟ್ಟಿ ಗುರುಗಳು.ಕಬ್ಬಿನ ಗುರುಗಳಿಗೆ ಇಂದಿಗೂ ಗೌರವಿಸುವ ಪರಂಪರೆಯನ್ನು ತೆಗ್ಗಿಹಾಳ ಗ್ರಾಮದ ಯುವಕರು ಗೌರವಿಸುವುದನ್ನು ಕಂಡಾಗ. ನಮಗೆ ಯಾವುದೇ ಹುದ್ದೆ ಇರಲಿ ನಮ್ಮ ಸಂಸ್ಕೃತಿ.ಸಂಸ್ಕಾರ ಮರೆಯುವಂತಿಲ್ಲ ಎಂಬುzನ್ನು ಈ ವಿದ್ಯಾರ್ಥಿಗಳು ಸರಕಾರಿ ಹುದ್ದೆಯ ಜೊತೆಗೆ ತಮ್ಮ ಹುಟ್ಟೂರಿಗೆ ಬಂದಾಗ ಗುರುಗಳನ್ನು ಭೇಟಿಯಾಗಿ ಹೋಗುವ ಪರಂಪರೆ ಇಂದಿನ ಯುವ ಪೀಳಿಗೆಗೆ ಮಾದರಿ. ಈ ದಿನ ಹಣಮಂತ ಸಿಂಗನ್ನವರನ ಜನ್ಮದಿನ. ತಾಲೂಕಿನ ರಾಜಕೀಯ ಗಣ್ಯರ ಸಮ್ಮುಖದಲ್ಲಿ ತೆಗ್ಗಿಹಾಳ ಗ್ರಾಮದಲ್ಲಿ ಸಾಯಂಕಾಲ ತನ್ನ ಜನ್ಮದಿನದ ವಿಶೇಷ ಕಾರ್ಯಕ್ರಮ ಆಯೋಜಿಸಿಕೊಂಡಿರುವ ವಿದ್ಯಾರ್ಥಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರುವೆ. ಪಕ್ಷಾತೀತವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಇನ್ನೂ ಹೆಚ್ಚಿನ ಅಭಿವೃದ್ದಿ ಕಾಣಲಿ ಎಂದು ಆಶಿಸುವೆ. ತನ್ನ ಮಡದಿ ಭಾರತಿ ಮಕ್ಕಳಾದ ಮಾಯಶ್ರೀ .ಸೋಮು.ರಾಯಣ್ಣ. ಅನುಶ್ರೀ ಇವರ ಶಿಕ್ಷಣ ಕೂಡ ಚನ್ನಾಗಿ ಸಾಗಲಿ.ಪತ್ನಿಯೊಂದಿಗೆ ತುಂಬು ಕುಟುಂಬದ ಬದುಕು ಇವನದಾಗಲಿ ಎಂದು ನಮ್ಮೆಲ್ಲ ಗುರುವೃಂದದ ಪರವಾಗಿ ಹಾರೈಸುವೆ.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ