ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿ ಮೂರು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ.
ಬೆಂಗಳೂರು..
ಈಗಾಗಲೇ ಸರ್ಕಾರ 2023ರ ನವೆಂಬರ್ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15 ತನಕ ವಿಸ್ತರಣೆ ಮಾಡಿದೆ. ಇದು ಇನ್ನೂ ವಿಸ್ತರಣೆಯಾಗುವ ಸಾಧ್ಯತೆಯಿದೆ. 7ನೇ ವೇತನ ಆಯೋಗದ ಅವಧಿ 3 ತಿಂಗಳು ವಿಸ್ತರಣೆ ಕರ್ನಾಟಕ ಸರ್ಕಾರವು ಆದೇಶ ಮಾಡಲಿದೆ.
ಕೆ ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿ ಮೂರು ತಿಂಗಳು ವಿಸ್ತರಣೆ ಆಗುವ ಸಾಧ್ಯತೆ. ರಾಜ್ಯ ಸರ್ಕಾರ 2023 ರ ನವೆಂಬರ್ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಆದರೆ ಈಗ ಆಯೋಗದ ವರದಿಯನ್ನು ನೀಡುವಾಗ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ನಿರೀಕ್ಷೆ ಇದೆ.
ಅಲ್ಲದೇ ಏಪ್ರಿಲ್ 1ರಿಂದ 2024 – 25ನೇ ಸಾಲಿನ ಬಜೆಟ್ ಜಾರಿಗೆ ಬರುವುದರಿಂದ ಆಯೋಗದ ಅವಧಿ 3 ತಿಂಗಳು ವಿಸ್ತರಣೆಯಾಗಲಿದೆ.
7th Pay Commission; ಸರ್ಕಾರಿ ನೌಕರರ ಪ್ರತಿಭಟನೆ, ಗುಪ್ತಚರ ಮಾಹಿತಿಈಗಾಗಲೇ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇತನ ಹಾಗೂ ಪಿಂಚಣಿಯಲ್ಲಿ ಶೇ 25ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದರು.
7ನೇ ವೇತನ ಆಯೋಗದ ಶಿಫಾರಸ್ಸಿನಿಂದ ವೇತನ ಶ್ರೇಣಿಯಲ್ಲಿ ಸಂಭವಿಸಬಹುದಾದ ಹೆಚ್ಚಳವನ್ನು ಅಂದಾಜಿಸಿ 2024 – 25ನೇ ಸಾಲಿನಲ್ಲಿ ವೇತನ ಹಾಗೂ ಪಿಂಚಣಿಗೆ 1,12,789 ಕೋಟಿ ಅಂದಾಜಿಸಲಾಗಿರುತ್ತದೆ ಎಂದು ಹೇಳಿದ್ದಾರೆ. ಇನ್ನು, 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ 13,000 ಕೋಟಿ ರೂಪಾಯಿಯನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, ಆಯೋಗದ ವರದಿ ಅನುಸರಸಿ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಉಂಟಾದರೆ ಪೂರಕ ಅಂದಾಜಿನಲ್ಲಿ ಒದಗಿಸುವ ಭರವಸೆ ನೀಡಿದ್ದಾರೆ. ಹೀಗಾಗಿಯೇ ಮುಂದಿನ ಬಜೆಟ್ ಅಂದಾಜಿನಲ್ಲಿ ಈ ಲೆಕ್ಕವು ಬರಲಿದ್ದು, ಚುನಾವಣೆ ಮತ್ತು ಬಜೆಟ್ ಕಾರಣಕ್ಕೆ ವೇತನ ಆಯೋಗ ವಿಸ್ತರಣೆಯಾಗಲಿದೆ.ಮುಂದಿನ ವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು 7ನೇ ವೇತನ ಆಯೋಗದ ಜೊತೆ ಸಭೆ ನಡೆಸುವ ನಿರೀಕ್ಷೆ ಇದೆ ಎಂಬ ಸುದ್ದಿಯೂ ಇದೆ. ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಸರ್ಕಾರಿ ನೌಕರರ ಸಮಾವೇಶದಲ್ಲಿಯೂ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದರು.7ನೇ ವೇತನ ಆಯೋಗದ ವರದಿ ಜಾರಿ ಮಾಡದ ಸರ್ಕಾರದ ಮೇಲೆ ನೌಕರರು ಕೆಂಡ ಕಾರುತ್ತಿರುವುದು ಸಮಾವೇಶದ ದಿನವೇ ತಿಳಿದು ಬಂದಿದೆ. ಅನಿರ್ಧಿಷ್ಟಾವಧಿ ಪ್ರತಿಭಟನೆ ಬಗ್ಗೆಯೂ ಗುಸು ಗುಸು ಕೇಳಿ ಬಂದಿತ್ತು. ನೌಕರರು ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಸಿಎಂಗೆ ಮಾಹಿತಿ ನೀಡಿತ್ತು