ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರ ದಲ್ಲಿ. ಲಕ್ಷ್ಮೇಶ್ವರದ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಶಾಲೆಯ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನಲ್ಲಿ ಏನಾದರೂ ಅಗ್ನಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬಹುದಾದ ಕ್ರಮಗಳನ್ನು ಮಕ್ಕಳೊಂದಿಗೆ ಚರ್ಚಿಸಿದರು.
ಹಾಗೂ ಮನೆಯಲ್ಲಿ ಬಳಸಲಾಗುವ LPG ಗ್ಯಾಸ್ ಸಿಲಿಂಡರ್ ನಿಂದ ಆಗುವ ಅಗ್ನಿ ಅವಘಡಗಳಿಗೆ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಪ್ರತ್ಯೇಕ್ಷಿಕವಾಗಿ ವಿವರಿಸಿದರು. ಮಕ್ಕಳಿಗೆ ಈ ವಿಷಯವನ್ನು ಪಾಲಕರಿಗೂ ಕೂಡ LPG ಗ್ಯಾಸ್ ಬಳಕೆಯ ತಿಳುವಳಿಕೆಯನ್ನು ಗಮನಕ್ಕೆ ತರಬೇಕೆಂದು ಮಕ್ಕಳಿಗೆ ತಿಳಿಸಿದರು.
ಲಕ್ಷ್ಮೇಶ್ವರದಲ್ಲಿ ಏನಾದರೂ ಅಗ್ನಿ ಅವಘಡಗಳು ಸಂಭವಿಸಿದಾಗ ಕೂಡಲೇ 08487-272101ಈ ನಂಬರಿಗೆ ಕರೆ ಮಾಡಬೇಕೆಂದು ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ ಎಂ ಕುಂಬಾರ್ ಹಾಗೂ ಶಿಕ್ಷಕರಾದ ಶ್ರೀ ಆರ್ ಎಂ ಶಿರಹಟ್ಟಿ, ಶ್ರೀಮತಿ ಹೆಚ್ಡಿ ನಿಂಗರೆಡ್ಡಿ, ಶ್ರೀಮತಿ ಸ್ವಪ್ನ ಕಾಳೆ, ಶ್ರೀರಾಮಪ್ಪ ಉಪ್ಪನಾಳ, ಕುಮಾರಿ ಪೂರ್ವಿ ಮುದುಕಣ್ಣವರ್ ಉಪಸ್ಥಿತರಿದ್ದರು