ಅಡರಕಟ್ಟಿ ಸ. ಮಾ. ಪ್ರಾ. ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವಿದ್ಯಾರ್ಥಿಗಳ ಬಿಳ್ಕೊಡುಗೆ ಪ್ರತಿಭಾ ಪುರಸ್ಕಾರ ಗುರುವಂದನಾ ಕಾರ್ಯಕ್ರಮ.
ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಪ್ರತಿಭಾ ಪುರಸ್ಕಾರ ಹಾಗೂ ಗುರುವಂದನಾ ಕಾರ್ಯಕ್ರಮ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಸ್ ಹರ್ಲಾಪುರ ಅವರು ಅಡಕಟ್ಟಿ ಗ್ರಾಮಸ್ಥರು ಶಾಲೆಯ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸದಿಂದ ಶಾಲೆ ಶಿಕ್ಷಕರು ತಮ್ಮ ಶಾಲೆಯ ಉತ್ತಮ ಬೆಳವಣಿಗೆಗೆ ಸಾಕಷ್ಟು ಶ್ರಮವಹಿಸಿ ಶಾಲೆಯನ್ನು ತಾಲೂಕಿನಲ್ಲಿ ಮಾದರಿ ಶಾಲೆಯನ್ನಾಗಿ ಮಾಡಲು ಉತ್ಸಾಹಕರಾಗಿದ್ದಾರೆ ಅದಕ್ಕೆ ಇಂದು ಈ ಕಾರ್ಯಕ್ರಮಕ್ಕೆ ಸೇರಿರುವ ಗ್ರಾಮಸ್ಥರೇ ಸಾಕ್ಷಿಯಾಗಿದ್ದಾರೆ, ಈ ಶಾಲೆಯಲ್ಲಿ ಎಲ್ಕೆಜಿ ಯುಕೆಜಿ ಯನ್ನು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಅದಕ್ಕಾಗಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಂಪೂರ್ಣ ಸಹಕಾರ ನೀಡಿ ಮುಂದಿನ ದಿನಗಳಲ್ಲಿ ಅನುಕೂಲ ಕಲ್ಪಿಸಲಾಗುವುದು ಎಂದರು.
ಪಿ ಸಿ ಕಾಳಶೆಟ್ಟಿ ಅವರು ಪ್ರಸ್ತಾವಿಕ ನುಡಿಗಳನ್ನು ನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶ್ರೀ ವೀರೇಶ ಭಂಗಿವಹಿಸಿದರು ಗೀತಾ ಹಳ್ಯಾಳ, ಕುಮಾರಣ್ಣ ಚಕ್ರಸಾಲಿ, ಎಂ.ಬಿ.ಹವಳದ ಪವಿತ್ರಾ ಗಡಿಯಪ್ಪನವರ, ರೇಣುಕಾ ರೊಳ್ಳಿ, ಬಿ. ಎಂ. ಯರಗುಪ್ಪಿ, ಸಿ ಎಸ್ ನೇಕಾರ ಸೇರಿದಂತೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್ ಎಚ್ ಉಮಚಗಿ ಸ್ವಾಗತಿಸಿದರು, ಡಿ ಡಿ ಲಮಾಣಿ ನಿರೂಪಿಸಿದರು, ಎಸ್ ಕೆ ಅಮ್ಮಿನಭಾವಿ ವಂದಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು ಹಾಗೂ ಶಾಲೆಯ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಹಾಗೂ ಮನೋರಂಜನೆಯ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ತಮ್ಮ ಮಕ್ಕಳ ಕಾರ್ಯಕ್ರಮವನ್ನು ನೋಡಲು ಇಡೀ ಅಡರಕಟ್ಟಿ ಗ್ರಾಮಸ್ಥರು ಸೇರಿದ್ದು ಕಾರ್ಯಕ್ರಮಕ್ಕೆ ಹೆಚ್ಚು ಸಂಭ್ರಮ ಕಂಡು ಬಂದಿತ್ತು.