ಲೋಕಸಭೆ ಚುನಾವಣೆಗೂ ಮೋದಲೇ ಸರಕಾರಿ ನೌಕರರ ಬೇಡಿಕೆ ಈಡೇರುತ್ತಾ??
ನೌಕರರೇ ಮುಷ್ಕರಕ್ಕೆ ತಯಾರಾಗಿ!!ಏನಿದು ಸರ್ಕಾರಕ್ಕೆ ಸಿ ಎಸ್ ಷಡಕ್ಷರಿಯವರು ನೀಡಿರುವ ಎಚ್ಚರಿಕೆ ಏನು ಅಂತ ನೀವೆ ನೋಡಿ.
ಬೆಂಗಳೂರು: ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ. ಸರ್ಕಾರಿ ನೌಕರರ ಹೋರಾಟಗಳಿಗೆ ಇಲ್ಲಿಯವರೆಗೂ ಸೋಲಾಗಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಒಂದು ವೇಳೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತದೆ. ಅದಕ್ಕೂ ಬಗ್ಗಲಿಲ್ಲವೆಂದರೆ, ನೌಕರರು ಮುಷ್ಕರ ಹೂಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಎಚ್ಚರಿಕೆ ನೀಡಿದರು.
ಅರಮನೆ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ಭಾಷಣದ ನಂತದ ಮಾತನಾಡಿದ ಅವರು, ನೌಕರರು ತಾಳ್ಮೆ ಕಳೆದುಕೊಳ್ಳುವುದು ಬೇಡ. ಸರ್ಕಾರ ನೀಡಿರುವ ಗಡುವನ್ನು ಸ್ವೀಕರಿಸೋನವೆಂದು ಎಲ್ಲರಿಗೂ ತಿಳಿಸಿದರು.