ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಗದಗದಲ್ಲಿ ನಡೆದ ಲಕ್ಷ್ಮೇಶ್ವರ ತಾಲೂಕಿನ ಎಂ ಪಿ ಎಸ್ ಹುಲ್ಲೂರು ಶಾಲೆಯ ಫಕ್ಕಿರೇಶ ಡಂಬಳ 18 ರಿಂದ 39 ವಯಸ್ಸಿನವರಿಗಾಗಿ ನಡೆದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಅದೇ ರೀತಿ ಸುರೇಶ್ ಹುಡೇದ ಎಂ ಪಿ ಎಸ್ ಶಾಲೆ ಯಲ್ಲಾಪುರ ಇವರು 40 ರಿಂದ 50 ವಯೋಮಾನದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹಾಗೂ ಮಾಗಡಿ ಎಂ ಪಿ ಎಸ್ ಶಾಲೆಯ ಶ್ರೀಮತಿ ಎಂ ಎನ್ ತಳವಾರ ಇವರು 400 ಮೀಟರ್ ಓಟದ ಸ್ಪರ್ಧೆಯಲ್ಲಿ 45 ವರ್ಷ ಮೇಲ್ಪಟ್ಟ ವಯೋಮಾನದವರ ಓಟದ ಸ್ಪರ್ಧೆಯಲ್ಲಿ ಇವರು ಸಹ ಪ್ರಥಮ ಸ್ಥಾನಗಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಂಗಳಾ ತಾಪಸ್ಕರ ಕ ರಾ ಸ ನೌಕರರ ಸಂಘದ ಅಧ್ಯಕ್ಷ ಡಿ ಎಚ್ ಪಾಟೀಲ್ ಕಾರ್ಯದರ್ಶಿ ಎಂ ಎ ನದಾಫ್ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ ಅಧ್ಯಕ್ಷ ಬಸವರಾಜ ಹರ್ಲಾಪುರ ಕಾರ್ಯದರ್ಶಿ ಚಂದ್ರಕಾಂತ ನೇಕಾರ ಜಿಲ್ಲಾ ಶಿಕ್ಷಕರ ಸಂಘ ಗದಗ ದ ಸದಸ್ಯರಾದ ಎಂ ಎಸ್ ಹಿರೇಮಠ ಎನ್ ಪಿ ಎಸ್ ಸಂಘದ ಅಧ್ಯಕ್ಷ ಫಕ್ಕಿರೇಶ ತಳವಾರ ಹಾಗೂ ಸಮಸ್ತ ಗುರುಬಳಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.