ಬೆಟ್ಟದಷ್ಟು ಆಸೆ ಇಟ್ಟುಕೊಂದು ದೂರದ ಬೆಂಗಳೂರಿಗೆ ಹೋಗಿದ್ದ ರಾಜ್ಯ ಸರ್ಕಾರಿ ನೌಕರರಿಗೆ ನಿರಾಶೆ ಮಾಡಿದ ಮಹಾಸಮ್ಮೇಳನ,,,,,,,,,,
ನೌಕರರ ಸಂಘದ ರಾಜ್ಯ ಅಧ್ಯಕ್ಷರೇ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಭಾಗವಹಿಸಿ ರಾಜ್ಯ ಸರ್ಕಾರಿ ನೌಕರರು ತಮಗೆ ಬೆಂಬಲ ನೀಡಿದ್ದಾರೆ. ಆದರೆ ಇವತ್ತಿನ ಸಮ್ಮೇಳನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಏಳನೇ ವೇತನ ಆಯೋಗದ ವರದಿಯ ಜಾರಿಯ ಕುರಿತು ಚಕಾರ ಎತ್ತಲಿಲ್ಲ. ಇತ್ತೀಚಿಗೆ ಸಂಘಟನೆಗಳು ತಮ್ಮ ಸ್ವಹಿತಾಸಕ್ತಿಗಾಗಿ ತಮ್ಮತನವನ್ನು ಉಳಿಸಿಕೊಳ್ಳಲು ಮಾತ್ರ ಸಂಘಗಳು ಆಗಿದೆ.
????ಇಡೀ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾಗಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದಿರ್ತಕ್ಕಂತ ದೊಡ್ಡ ಸಂಘ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ. ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾವು ಸರ್ವಾಧಿಕಾರಿಯಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನ್ನುವ ಹಣೆಪಟ್ಟಿ ತಮ್ಮದಾಗಿಸಿಕೊಂಡಿದ್ದೀರಿ.
ಮಾನ್ಯ ಷಡಕ್ಷರಿ ಯವರೇ,
ಬೆಂಗಳೂರಿನಲ್ಲಿ ನಡೆದ ಫ್ರೀಡಂ ಪಾರ್ಕ್ ನ ಎನ್ ಪಿ ಎಸ್ ಹೋರಾಟಕ್ಕೆ ಬೆಂಬಲ ಕೋಡದೆ ಎನ್ ಪಿ ಎಸ್ ನೌಕರರಿಗೆ ಅನ್ಯಾಯ ಮಾಡಿದ್ದೀರಿ. ಅವತ್ತೇ ನೀವು ಬೆಂಬಲ ಕೊಟ್ಟಿದ್ದೆ ಆಗಿದ್ದರೆ ಇವತ್ತು ಎನ್ ಪಿ ಎಸ್ ಅನ್ನುವ ಮಾರಕ ಯೋಜನೆ ರದ್ದಾಗಿರುತ್ತಿತ್ತು. ಇವತ್ತು ಮಹಾ ಸಮ್ಮೇಳನ ಮಾಡಿ ಏಳು ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ.
????ಎಲ್ಲಿಯವರೆಗೆ ಸರ್ಕಾರದ ಅನುಮೋದಿತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒಂದಾಗಿ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು ಈಡೇರುವುದಿಲ್ಲ ಅನ್ನುವದು ಮೊದಲು ತಮ್ಮ ಗಮನಕ್ಕೆ ಬರಲಿ.
????ಮೊದಲು ನಿಮ್ಮ ಪ್ರತಿಷ್ಠೆಯನ್ನು ಬಿಟ್ಟು ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ವೃಂದ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಿದರೆ ಮಾತ್ರ 7ನೇ ವೇತನ ಆಯೋಗ ಸಂಪೂರ್ಣ ಜಾರಿ ಮಾತು ಎನ್ಪಿಎಸ್ ರದ್ದು ಮಾಡಿ OPS ಜಾರಿ ಜಾರಿ ಮಾಡಲು ಸಾದ್ಯ.
???? ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಸರ್ವ ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸಚಿವಲಯ ನೌಕರರ ಸಂಘ ಎಲ್ಲರೂ ನಿಮ್ಮ ನಿಮ್ಮ ಒಣ ಪ್ರತಿಷ್ಠೆಗಾಗಿ ರಾಜ್ಯದ ನೌಕರರನ್ನು ಬಲಿ ತೆಗೆದುಕೊಳ್ಳಬೇಡಿ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಗಳಾಗಿ ಕೆಲಸ ಮಾಡಿ. ಒಣ ಪ್ರತಿಷ್ಠೆಗಾಗಿ ರಾಜ್ಯದ ನೌಕರರನ್ನು ಬಲಿ ತೆಗೆದುಕೊಳ್ಳಬೇಡಿ. ನಿಮ್ಮ ಪ್ರತಿಷ್ಠೆ ಬಿಟ್ಟು ಎರಡು ಸಂಘ ಒಂದಾಗಿ ಜೋಡೆತ್ತುಗಳ ಹಾಗೆ ಕೆಲಸ ಮಾಡಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಗಳಾಗಿ ಕೆಲಸ ಮಾಡಿದಾಗ ಮಾತ್ರ ಸಂಘಟನೆಗೆ ಬೆಲೆ.ಹುದ್ದೆಗಾಗಿ ದುದ್ದೋಗಾಗಿ ಸಂಘಟನೆ ಬರಬೇಡಿ. ನೌಕರರ ಪರವಾಗಿ ಹೋರಾಡುವ ನಾಯಕರಾಗಿರಿ
ಇಂದ,
ಆನಂದ್ ಕೆಂಭಾವಿ
ನಿರ್ದೇಶಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ