ಶಾಲಾ ವಾರ್ಷಿಕೋತ್ಸವ ಹಾಗು ವಿಜ್ಞಾನ ವಸ್ತು ಪ್ರದರ್ಶನ.
ವಿಜ್ಞಾನವು ನಮ್ಮನ್ನು ಚಿಂತನಶೀಲರನ್ನಾಗಿ ಮಾಡುತ್ತದೆ ಎಂದು ಪ್ರೌಢ ವಿಭಾಗದ ಬಿ.ಆರ್.ಪಿ ಗಳಾದ ಶ್ರೀ ಈಶ್ವರ ಮೆಡ್ಲೇರಿ ಅವರು *ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಸ.ಮಾ.ಪ್ರಾ.ಶಾಲೆ ನಂ.2 ಲಕ್ಷ್ಮೇಶ್ವರ* ಇಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು .ಶಿಕ್ಷಣ ಸಂಯೋಜಕರಾದ ಶ್ರೀ ಹರೀಶ ಸೇಂದ್ರಗಯವರು ಗಣಿತ ಮೇಳ ಉದ್ಘಾಟಿಸಿ ಗಣಿತ ನಮ್ಮ ನಿತ್ಯ ಜೀವನದ ಜೀವನಾಡಿಯಾಗಿದ್ದು,ಅದು ಕಬ್ಬಿಣದ ಕಡಲೆಯಲ್ಲ ಸುಲಿದ ಬಾಳೆಹಣ್ಣಿನಂತೆ ಸುಲಭ ಹಾಗೂ ಸುಲಲಿತವಾಗಿದೆ ಎಂದರು .ಪ್ರಾಥಮಿಕ ವಿಭಾಗದ ಬಿ.ಆರ್.ಪಿ ಗಳಾದ ಶ್ರೀ ಬಿ.ಎಂ.ಯರಗುಪ್ಪಿ ಯವರು ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು .ಈ ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ .ನಿರ್ಮಲ ನೆರೆಗಲ್ ರವರು ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀ .ರೇವಣಸಿದ್ದಯ್ಯ ಕಲ್ಮಠ,ಶ್ರೀ .ಬಿ.ಎಂ.ಕುಂಬಾರ,ಸಿ.ಆರ್ ಪಿ ಗಳಾದ ಶ್ರೀ ಸತೀಶ್ ಬೋಮಲೆ ,ಉಮೇಶ ನೇಕಾರ ಪ್ರಧಾನ ಗುರುಗಳಾದ ಶ್ರೀಮತಿ .ಎಸ್.ಎಸ್.ಜೀರಂಕಳ್ಳಿ ವಹಿಸಿದ್ದರು. ಶ್ರೀಮತಿ .ಸಿ.ಎಫ್.ಪಾಟೀಲ ಸ್ವಾಗತಿಸಿದರು ,ಶ್ರೀಮತಿ . ಕೆ.ಆರ್.ಮುದಕಣ್ಣವರ ವಂದಿಸಿದರು ,ಪುಷ್ಪಾ ಹವಾಲ್ದಾರ್,ಎನ್ .ಎಸ್ .ಬಂಕಾಪುರ ನಿರ್ವಹಿಸಿದರು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸರ್ವ ಸದಸ್ಯರು,ಶಾಲಾ ಸಿಬ್ಬಂದಿ ವರ್ಗ ,ವಿದ್ಯಾರ್ಥಿಗಳು ಹಾಜರಿದ್ದರು.