ಶಿರಹಟ್ಟಿ: ಕಲಿತ ಶಾಲೆ ಕಲಿಸಿದ ಗುರುಗಳ ಸ್ಮರಣೆ ಸದಾ ಕಾಲ ಇರಬೇಕು ಕಲಿತ ಶಾಲೆಯ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕು ಅಂದಾಗ ಶಾಲೆಯು ಒಂದು ಜ್ಞಾನ ದೇಗುಲ ಎಂಬ ಮನೋಭಾವ ಮೂಡುತ್ತದೆ. ಎಂದು ಕೆನರಾ ಬ್ಯಾಂಕ್ ವಿಭಾಗಿಯ ವ್ಯವಸ್ಥಾಪಕ ಗಣೇಶ್ ಬಸ್ತವಾಡಕರ್ ಅಭಿಪ್ರಾಯಪಟ್ಟರು. ಅವರು ಬೆಳ್ಳಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಕೆನರಾ ಬ್ಯಾಂಕಿನ ಸಿಎಸ್ಆರ್ ಅನುದಾನದಡಿ ಕೊಡ ಮಾಡಿದ ಶಾಲಾ ಸ್ಮಾರ್ಟ್ ಕ್ಲಾಸ್ ಹಾಗೂ ಟಿವಿ ಲ್ಯಾಪ್ಟಾಪ್ ಸಿಸಿ ಕ್ಯಾಮೆರಾದಂತಹ ಉಪಕರಣಗಳನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ನಾನು ಕಲಿತ ಶಾಲೆಗೆ ನನ್ನ ಸಂಸ್ಥೆಯಿಂದ ಇಂದು ಈ ಶಾಲೆಗೆ ಕೊಡುಗೆ ನೀಡುತ್ತಿದ್ದೇನೆ. ಎಂಬ ಹೆಮ್ಮೆ ನನಗಿದೆ ಎಂದರು ಸಾನಿಧ್ಯವಹಿಸಿದ್ದ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ.ಮ.ನಿ.ಪ್ರ. ಬಸವರಾಜ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡುತ್ತ ಶಿಕ್ಷಕರು ಮಕ್ಕಳ ಗುಣಾತ್ಮಕ ಕಲಿಕೆ ಹಾಗೂ ಪ್ರಗತಿಗೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಖುಷಿ ತಂದಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಪ್ರಕಾಶ್ ಮಹಾಜನಶೆಟ್ರ ಮಾತನಾಡಿ ಕೆನರಾ ಬ್ಯಾಂಕ್ ನೀಡಿದ ಉಪಕರಣಗಳ ಸದುಪಯೋಗ ಮಾಡಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಕೆನರಾ ಬ್ಯಾಂಕಿನ ವಿಭಾಗಿಯ ಸಹ ವ್ಯವಸ್ಥಾಪಕ ಪಿ ಶ್ರೀನಿವಾಸ್ ಬೆಳ್ಳಟ್ಟಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ನರಸಿಂಹರಾಜು ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯ ತಿಮ್ಮರೆಡ್ಡಿ ಮರಡ್ಡಿ ಪ್ರಾಸ್ತಾವಿಕ ಮಾತನಾಡಿದರು.ಶಾಲಾ ಅಧ್ಯಕ್ಷ ಕೊಟ್ರೇಶ ಬಣಗಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ ಕ್ಷೇತ್ರ ಸಮನ್ವಯಾಧಿಕಾರಿ ಬಿ ಎಸ್ ಭಜಂತ್ರಿ ಗ್ರಾಮ ಪಂಚಾಯತ ಅಧ್ಯಕ್ಷ ರಮೇಶ ನಿರ್ವಾಣ ಶೆಟ್ರು ಉಪಾಧ್ಯಕ್ಷ ಗಂಗವ್ವ ತಳವಾರ ಸದಸ್ಯರಾದ ಶಿವಾನಂದಗೌಡ ಪಾಟೀಲ ಮೋಹನ್ ಚಂದ್ ಗುತ್ತೆಮ್ಮನವರ. ಮಲ್ಲಯ್ಯ ಶೀಲವಂತ ಮಠ ರಮೇಶ ಮಲ್ಲಾಡದ ದಿಲ್ ಶಾದಿ ಬಿ ಚೌರಿ ರೇಣುಕಾ ಮಾಳಮ್ಮನವರ ಶೋಭಾ ದೇಶಳ್ಳಿ ಹಾಗೂ ಗಿರೀಶರೆಡ್ಡಿ ಮೇಕಳಿ ಕೊಟ್ರೇಶ ಸಜ್ಜನರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಿಆರ್ಪಿ ಬಿ ಆರ್ ಪಿ ಗಳು ವಿವಿಧ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಸುಭಾಸ ಬಸ್ತ್ವಾಡಕರ್ ಪರಿವಾರದವರು ಭಾಗವಹಿಸಿದ್ದರು ಶಿಕ್ಷಕ ಆರ್ ಎಂ ಯಣಿಗಾರ ಪ್ರಾರ್ಥಿಸಿದರು. ಎಂ.ಬಿ ಹಾವೇರಿ ಸ್ವಾಗತಿಸಿದರು ಶಿವಾನಂದ ಹಾವನೂರ ವಂದಿಸಿದರು.ಗಿರೀಶ ಕೋಡಬಾಳ ಕಾರ್ಯಕ್ರಮ ನಿರೂಪಿಸಿದರು.