ಕಡಕೋಳ ಅವರ ಬರವಣಿಗೆ ಬಹಳ ಆಪ್ತವಾಗಿರುವಂತಹದು
ಶಂಕರ ಹಲಗತ್ತಿ
ಧಾರವಾಡ: “ಕಡಕೋಳ ಅವರ ಬರವಣಿಗೆ ಬಹಳ ಆಪ್ತವಾಗಿರುವಂತಹದು.ಅವರು ಲೂಸಿ ಸಾಲ್ಡಾನಾ ಗುರು ಮಾತೆ ಯವರ ಬದುಕಿನ ಚಿತ್ರಣ ಕಟ್ಟಿಕೊಡುವ ಮೂಲಕ ಓರ್ವ ಸಾಧಕ ಮಹಿಳೆಯನ್ನು ಪರಿಚಯಿಸಿದ ರೀತಿ ಅಭಿನಂದನಾರ್ಹ. ಇಂದು ಡಾ. ಪ್ರಹ್ಲಾದ ಬೋಯಿ ಯವರ ಕುರಿತು ಸಂಪಾದನಾ ಕೃತಿ ಹೊರತಂದಿರುವ ಅವರ ಸೃಜನಶೀಲ ಬರವಣಿಗೆ ಅಭಿನಂದನಾರ್ಹ.ಲಕ್ಕಮ್ಮನವರ ತನಗೆ ಶಿಕ್ಷಣ ನೀಡಿದ ಗುರು ಮಾತೆ ಯ ವ್ಯಕ್ತಿತ್ವ ಕಡಕೋಳ ಅವರ ಜೊತೆ ಸೇರಿ ಹನ್ನೊಂದು ಕೃತಿಗಳು ಹೊರಬರಲು ಕಾರಣರಾಗಿರುವರು. ದತ್ತಿದಾನಿ ಸಾಲ್ಡಾನಾ ಅವರ ವ್ಯಕ್ತಿತ್ವ ಕೃತಿಯ ರೂಪದಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಇಬ್ಬರ ಕಾರ್ಯ ಶ್ಲಾಘನೀಯ.” ಎಂದು ಬಾಗಲಕೋಟೆಯ ಸಮಾಜಸೇವಕ ಡಾ,ಪ್ರಹ್ಲಾದ ಭೋಯಿ ಅವರ ಅಭಿಮಾನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡುವ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ವಮಕ್ಕಳ ಮಹರ್ಷಿ ಶಂಕರ ಹಲಗತ್ತಿ ತಿಳಿಸಿದರು.ಮುಂದುವರಿದು ಮಾತನಾಡುತ್ತಾ “ಆದರ್ಶ ಶಿಕ್ಷಕರ ಗುಣಗಳು
ಆದರ್ಶ ಶಿಕ್ಷಕರ ಪ್ರಾಥಮಿಕ ಲಕ್ಷಣವೆಂದರೆ ಅವರ ಸ್ವಂತ ಪರಿಣತಿ. ಅವರು ಸಾಮಾನ್ಯವಾಗಿ ತಮ್ಮ ವಿಷಯದ ಬಗ್ಗೆ ಬಹಳ ಜ್ಞಾನವನ್ನು ಹೊಂದಿರುತ್ತಾರೆ ಮತ್ತು ಯಾವುದೇ ಸಂದೇಹಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ.ಅವರು ನಿರಂತರವಾಗಿ ಆ ನಿರ್ದಿಷ್ಟ ಕ್ಷೇತ್ರದೊಂದಿಗೆ ತಮ್ಮನ್ನು ನವೀಕರಿಸಿಕೊಳ್ಳುತ್ತಾರೆ ಮತ್ತು ಆ ವಿಷಯದ ಬಗ್ಗೆ ಹೆಚ್ಚು ಪಾಂಡಿತ್ಯಪೂರ್ಣ ಕೃತಿಗಳನ್ನು ಓದುತ್ತಾರೆ. ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ಅವರ ಸಾಹಿತ್ಯದ ಮೂಲಕ ನಿಜವಾಗಿಯೂ ಶಿಕ್ಷಣ ತಜ್ಞರು ಎನಿಸಿದ್ದಾರೆ ಎಂದರು.
ಅವರು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಸಂಪಾದಿತ ಡಾ. ಪ್ರಹ್ಲಾದ ಬೋಯಿ ಅವರ ಷಷ್ಠಬ್ಧಿ ಅಭಿನಂದನಾ ಕೃತಿ ದಿವ್ಯ ದರ್ಶನ ಲೋಕಾರ್ಪಣೆ ಗೊಳಿಸುವ ಮೂಲಕ ಮಾತನಾಡಿದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಈ ಕೃತಿ ಲೋಕಾರ್ಪಣೆ ಗೊಂಡಿತು.
“ಕಡಕೋಳ ಅವರು ಇತ್ತೀಚೆಗೆ ಸಜ್ಜನ ಅವರ ಅಶೋಕ ಪಥ ಕೃತಿ ಸಂಪಾದನೆ ಮಾಡಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬಿಡುಗಡೆ ಗಳಿಸಿದರು. ಆ ಕೃತಿ ನಾನು ಗಮನಿಸಿದಾಗ ಕಡಕೋಳ ಅವರ ಬರವಣಿಗೆಯ ಶಕ್ತಿ ವಿಶಿಷ್ಟವಾದ ರೀತಿಯಲ್ಲಿ ಸಾಗುತ್ತಿದೆ.ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಅವರ ಬರಹಗಳು ಇಂದು ಪ್ರಕಟವಾಗುವ ಮೂಲಕ ಒಬ್ಬ ಸೃಜನಶೀಲ ಶಿಕ್ಷಕ ಸಾಹಿತಿ ನಮ್ಮ ನಡುವಿರುವುದು ಸಂತಸದ ಸಂಗತಿ.ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾಪೋಷಕರಾದ ಎಂ ಐ ಮುನವಳ್ಳಿ ತಿಳಿಸಿದರು, ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ, ಚೇತನ ಫೌಂಡೇಶನ್ ಕರ್ನಾಟಕದ ಆಶ್ರಯದಲ್ಲಿ ಜರುಗಿದ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು, ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮೂಲಕ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಎಂದರು,
ಮುಖ್ಯ ಅತಿಥಿಯಾಗಿದ್ದ, ಶಿಕ್ಷಕರತ್ನ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದ, ಬೆಂಗಳೂರಿನ ಐಎಎಸ್ ಸಾಧನಾ ತರಬೇತಿ ಕೇಂದ್ರದ ಮುಖ್ಯಸ್ಥೆ ಡಾ, ಕೆ ಸಿ ಜ್ಯೋತಿ ಮಾತನಾಡಿ,”ಕಡಕೋಳ ಗುರುಗಳು ನಮ್ಮ ಮನೆಗೆ ಬಂದು ನನ್ನ ಸಂದರ್ಶನ ಮಾಡಿ ಬಹಳ ಒಳ್ಳೆಯ ಲೇಖನ ಪ್ರಕಟಿಸಿದರು. ಆ ದಿನ ಅವರ ಸರಳತೆ. ಕಂಡು ನನ್ನ ಸಹೋದರರೂ ತಾಯಿಯೂ ಕೂಡ ಅವರ ಬಗ್ಗೆ ಮೆಚ್ಚುಗೆ ಸೂಸಿದ್ದರು. ಕಡಕೋಳ ಅವರ ಬರವಣಿಗೆ ಬಹಳ ವೈಶಿಷ್ಟ್ಯವನ್ನು ಹೊಂದಿದೆ. ಎಂದು ಹೇಳಿ ಮಕ್ಕಳ ಯಶಸ್ಸು ಮತ್ತು ಪ್ರಗತಿಗೆ ಅತ್ಯಗತ್ಯ. ಒಬ್ಬ ಆದರ್ಶ ಶಿಕ್ಷಕ ಯಾವಾಗಲೂ ಭಾವೋದ್ರಿಕ್ತನಾಗಿರುತ್ತಾನೆ ಮತ್ತು ತನಗೆ ನಿಗದಿಪಡಿಸಿದ ವಿಷಯದ ಬಗ್ಗೆ ನವೀಕರಿಸುತ್ತಾನೆ, ಇದು ಮಕ್ಕಳನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.ಎಂದು ಶಿಕ್ಷಕ ಶಿಕ್ಷಣ ಪಾಲಕರ ಜವಾಬ್ದಾರಿ ಕುರಿತು ಮಾತನಾಡಿದರು
“ರಾಜಕೀಯ ನಾಯಕರು ಅಥವಾ ಗಣ್ಯ ವ್ಯಕ್ತಿಗಳ ಜನ್ಮದಿನವನ್ನು ಸರಕಾರಿ ಶಾಲೆಗಳಿಗೆ ಬಣ್ಣ ದರ್ಪಣ ಮಾಡಿ ಜನುಮದಿನ ಆಚರಿಸಿದರೆ ಅದಕ್ಕೆ ಒಂದು ಮೆರಗು” ಎಂದರು,
ಸಮ್ಮೇಳನದ ಅಧ್ಯಕ್ಷರಾಗಿದ್ದ ಶಿಕ್ಷಕ ಮಲ್ಲಿಕಾರ್ಜುನ ಉಪ್ಪಿನ
“ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದಾರೆ, ಅವರು ಕೆಲಸ ಮಾಡುವುದನ್ನು ಗಮನಿಸಿ ದಾಗ ಇದು ಕಂಡುಬರುವುದು. ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಹಾಗೂ ಗುರುಗಳಾದ ಲಕ್ಕಮ್ಮನವರ ಅವರ ಕಾರ್ಯ ಅಭಿನಂದನಾರ್ಹ.
ಆದರ್ಶ ಶಿಕ್ಷಕರಾಗುವುದು ಕೇವಲ ತಂತ್ರ ಅಥವಾ ಬೋಧನಾ ಶೈಲಿಯನ್ನು ಸುಧಾರಿಸುವುದಕ್ಕೆ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳೊಂದಿಗಿನ ಸಂಬಂಧವನ್ನು ಸುಧಾರಿಸಲು ಸಹ ಸಂಬಂಧಿಸಿದೆ.ಅವರು ಯಾವುದೇ ದೇಶದ ಭವಿಷ್ಯದ ಆಧಾರ ಸ್ತಂಭಗಳು. ಒಬ್ಬರ ಶಿಕ್ಷಣದ ಪ್ರಕ್ರಿಯೆಯಲ್ಲಿ ಶಿಕ್ಷಕರು ಬಹುಶಃ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.ಎಂದು ಅಧ್ಯಕ್ಷೀಯ ನುಡಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗದ ಗ್ರಾಮೀಣ ಶಿಕ್ಷಕ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಲೇಶ ನವುಲೆ ಮಾತನಾಡಿ. ಬರವಣಿಗೆ ಬಹಳ ಕಡಿಮೆ ಜನರು ಮಾಡುವರು. ವೈ. ಬಿ. ಕಡಕೋಳ ಅವರ ಅಶೋಕ ಪಥ ಮತ್ತು ದಿವ್ಯ ದರ್ಶನ ಎರಡು ಕೃತಿ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ನಾನು ಪಾಲ್ಗೊಂಡಿದ್ದ ಕಾರಣ ಅವರ ಬರವಣಿಗೆ ಶೈಲಿ ನಿಜಕ್ಕೂ ಆಪ್ತವಾಗಿದೆ.ದಿವ್ಯ ದರ್ಶನ ಕೃತಿಯಲ್ಲಿ ಬೋಯಿಯವರ ಮಗಳ ಬರಹ ಗಮನಿಸಿದಾಗ ಬೋಯಿಯವರ ವ್ಯಕ್ತಿತ್ವ ಎಂಥಹದ್ಜು ಎಂಬುದನ್ನು ಹೇಳಬಹುದು. ಇಂತಹ ಎಲ್ಲಾ ಬರಹಗಳು ಈ ಕೃತಿಯಲ್ಲಿ ಮೂಡಿಬಂದಿವೆ.ಕಡಕೋಳ ಹಾಗೂ ಬೋಯಿಯವರಿಗೆ ಅಭಿನಂದನೆಗಳು. ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚೇತನ ಫೌಂಡೇಶನ್ ಮುಖ್ಯಸ್ಥರು ಚಂದ್ರಶೇಖರ ಮಾಡಲಗೇರಿ “ಆತ್ಮವಿಶ್ವಾಸವು ಶಿಕ್ಷಕರ ಮುಖದ ಮೇಲೆ ಮತ್ತು ವಿದ್ಯಾರ್ಥಿಗಳ ಕಡೆಗೆ ಅವರ ನಡವಳಿಕೆಯಲ್ಲಿ ತೋರಿಸುತ್ತದೆ, ಇದು ಅತ್ಯುತ್ತಮವಾದ ಮೊದಲ ಆಕರ್ಷಣೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.ಆದರ್ಶ ಶಿಕ್ಷಕರಾಗಿರುವುದು ಕೇವಲ ಬೋಧನೆಗೆ ಸೀಮಿತವಾಗುವುದಿಲ್ಲ – ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಮತ್ತು ಪೋಷಕರಾಗಲು ವಿಸ್ತರಿಸುತ್ತದೆ,ವ್ಯಕ್ತಿತ್ವದ ವಿಷಯದಲ್ಲಿ, ಶಿಕ್ಷಕರು ಹಾಸ್ಯಮಯವಾಗಿದ್ದರೆ ಅದು ಸಹಾಯ ಮಾಡುತ್ತದೆ.ವೈ.ಬಿ.ಕಡಕೋಳ ಅವರ ದಿವ್ಯ ದರ್ಶನ ಕೃತಿ ಡಾ ಬೋಯಿಯವರ ವ್ಯಕ್ತಿತ್ವವನ್ನು ತನ್ನೊಳಗೆ ಹೊಂದಿದೆ. ಬೋಯಿಯವರಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಶುಭ ಕೋರಿದರು.
ಕೃತಿ ತಮ್ಮ ಸಂಪಾದನೆಯ ಮೂಲಕ ಮೂಡಿ ಬರುವಲ್ಲಿ ಲಕ್ಕಮ್ಮನವರ ಗುರುಗಳ ಸಹಕಾರ ಬೋಯಿಯವರ ಸರಳತೆ ಕುರಿತು ಸಂಪಾದಕ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಮಾತನಾಡುತ್ತಾ “ಬರವಣಿಗೆ ತಮ್ಮ ಹವ್ಯಾಸ ಈ ನಡುವೆ ಹಲವಾರು ಆದರ್ಶ ವ್ಯಕ್ತಿ ಗಳು ಪರಿಚಯ ವಾಗುವ ಮೂಲಕ ಅವರ ವ್ಯಕ್ತಿತ್ವದ ಬರಹ ಮೂಡುತ್ತದೆ. ನನ್ನ ಅನೇಕ ಬರಹಗಳು ಅಂಥವರ ಪರಿಚಯದ ಮೂಲಕ ಮೂಡಿ ಬಂದು ನನ್ನ ಕೃತಿಗಳಾಗಿ ಹೊರಹೊಮ್ಮಿವೆ ಎಂದು ಕೃತಿಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ
ಅಕ್ಷರತಾಯಿ ಲೂಸಿ ಸಾಲ್ಡಾನ, ಎಂ ಎಸ್ ಅಕ್ಕಿ ಆರ್ ಎಂ ಕಮ್ಮಾರ ವಾಯ್ ಬಿ ಕಡಕೋಳ ಎಲ್ ಐ ಲಕ್ಕಮ್ಮನವರ ಡಾ,ಪ್ರಹ್ಲಾದ ಬೋಯಿ, ಸತೀಶ ಪಿಕೆ ಅಶೋಕ ಸಜ್ಜನ, ಡಾ, ಪಂಡಿತ ಶ್ರೀಕಾಂತ್ ಚಿಮಲ್ ಶಾಂತಾ ಶೀಲವಂತ ನಂದಕುಮಾರ ದ್ಯಾಪೂರ, ಸಂತೋಷ ಭದ್ರಾಪೂರ ವಂದನಾ ಕರಾಳೆ ಮುಂತಾದವರು ಇದ್ದರು. ನಂದಕುಮಾರ ದ್ಯಾಪೂರ ಸ್ವಾಗತಿಸಿದರು, ಸಂತೋಷ ಭದ್ರಾಪೂರ ನಿರೂಪಿಸಿದರು,ಡಾ, ಪ್ರಹ್ಲಾದ ಭೋಯಿ ವಂದಿಸಿದರು.