ಬಸಯ್ಯ ವಿರುಪಯ್ಯನವರಮಠಗೆ ರಾಜ್ಯಮಟ್ಟದ ಶ್ರಮಿಕರತ್ನ ಪ್ರಶಸ್ತಿ
ಮುನವಳ್ಳಿಃ ಪಟ್ಟಣದ ಸಮಾಜ ಸೇವಕ ಬಸಯ್ಯ ವಿರುಪಯ್ಯನವರಮಠ ಇವರು ರಾಜ್ಯಮಟ್ಟದ ಶ್ರಮಿಕರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜದ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ನೀಡುವ ರಾಜ್ಯಮಟ್ಟದ ಶ್ರಮಿಕರತ್ನ ಪ್ರಶಸ್ತಿ ಇದಾಗಿದೆ. ರೋಷನ್ ಕೇರ್ ಪೌಂಢೇಶನ್ ಬೆಂಗಳೂರು ಹಾಗೂ ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರದ ಆಶ್ರಯದಲ್ಲಿ ಫೆ.೨೪ರಂದು ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರಿಗೆ ರಾಜ್ಯಮಟ್ಟದ ಶ್ರಮಿಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ವೈ.ಬಿ.ಕಡಕೋಳ ಸಂಪಾದಿತ ಭಜನಾಕಾರ ದಿವಂಗತ ಚಂದ್ರಪ್ಪ ಚಲವಾದಿ ಕೃತಿ ಕೂಡ ಲೋಕಾಪಣೆಯಾಗುವುದು ಎಂದು ಶಿಕ್ಷಕ ಎಲ್.ಐ.ಲಕ್ಕಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ