ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ!! ಮಕ್ಕಳಿಗೆ ನೀಡುವ ಕ್ಷೀರಭಾಗ್ಯ ಯೋಜನೆ ದುರಪಯೋಗ!! ಶಿಕ್ಷಕ ಅಮಾನತ್
ಇಂಥಹ ಶಿಕ್ಷಕರಿಗೆ ಯಾವ ಶಿಕ್ಷೆ ನೀಡಬೇಕು!!ನೀವೆ ಹೇಳಿ..
ಯಾದಗಿರಿ: ಶಿಕ್ಷಕನೊಬ್ಬ ಕ್ಷೀರಭಾಗ್ಯ ಯೋಜನೆಯ (Ksheera Bhagya Scheme) ಹಾಲಿನ ಪುಡಿ ಪ್ಯಾಕೆಟ್ನ್ನು ಕಿರಾಣಿ ಅಂಗಡಿಯೊಂದಕ್ಕೆ ಮಾರಾಟ ಮಾಡಿ ಅಮಾನತು ಆದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಸೂರ್ಯಕಾಂತ್ ಅಮಾನತು ಆದ ಶಿಕ್ಷಕ. ಈತ ಯಾದಗಿರಿ ತಾಲೂಕಿನ ಲಿಂಗೇರಿ ತಾಂಡಾದ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.
ತನ್ನ ಕಾರಿನಲ್ಲಿ ಕ್ಷೀರ ಯೋಜನೆಯಲ್ಲಿ ನೀಡುತ್ತಿದ್ದ ಹಾಲಿನ ಪಾಕೆಟ್ಗಳನ್ನು ತೆಗೆದುಕೊಂಡು ಬಂದು ಯಾದಗಿರಿ ನಗರದ ಬಿವಿ ಸ್ವಾಮಿ ಕಿರಾಣಿ ಹಾಗೂ ಜನರಲ್ ಸ್ಟೋರ್ ಅಂಗಡಿಗೆ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಹಲವು ವರ್ಷಗಳಿಂದ ಈ ರೀತಿ ಮಾರಾಟ ಅಕ್ರಮವಾಗಿ ಮಾಡುತ್ತಿದ್ದ. ಘಟನೆಯ ಹಿನ್ನೆಲೆಯಲ್ಲಿ ಹಾಲಿನ ಪೌಡರ್ ಮಾರಾಟ ಮಾಡುವ ವಿಡಿಯೋ ಬಹಿರಂಗವಾಗಿದೆ. ಈ ಸಂಬಂಧ ಇಲಾಖೆಯು ಕ್ರಮ ಕೈಗೊಂಡಿದ್ದು ಸೂರ್ಯಕಾಂತ್ ಅವರನ್ನು ಅಮಾನತು ಮಾಡಲು ಯಾದಗಿರಿ ಡಿಡಿಪಿಐ ಮಂಜುನಾಥ್ ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಅಮಾನತು ಜೊತೆಗೆ ಕ್ರಿಮಿನಲ್ ಪ್ರಕರಣವನ್ನು ಪ್ರಕರಣ ಕೂಡ ದಾಖಲಿಸುವಂತೆ ಅಕ್ಷರ ದಾಸೋಹ ಯೋಜನಾಧಿಕಾರಿಗಳಿಗೆ ಸೂಚಿಸಿದ್ದಾರೆ.