ಹೃದಯಾಘಾತದಿಂದ ನಿಧನರಾದ ಶಿಕ್ಷಕಿ – BP ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದ 1998ನೇ ಬ್ಯಾಚ್ ನ ಶಿಕ್ಷಕಿ ಹೃದಯಾಘಾತದಿಂದ ನಿಧನ – ಶಾಲೆಯ ಶಿಕ್ಷಕರು ಸೇರಿದಂತೆ ಸಂತಾಪ
ಹೃದಯಾಘಾತದಿಂದ ಶಿಕ್ಷಕಿಯೊಬ್ಬರು ನಿಧನರಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಹೌದು ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬನ್ನೂರ ತಾಂಡಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ರೀಮತಿ ಜಿ ವಿ ತೋರಣಗಟ್ಟಿಯವರೇ ನಿಧನರಾಗಿರುವ ಶಿಕ್ಷಕಿಯಾಗಿದ್ದಾರೆ.
ಕಳೆದ ವಾರವಷ್ಟೇ ರಕ್ತದ ಒತ್ತಡ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಬೆಳಗಾವಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಸಧ್ಯ ಚಿಕಿತ್ಸೆ ನೀಡುತ್ತಿರುವ ಬೆನ್ನಲ್ಲೇ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.1998ನೇ ಬ್ಯಾಚ್ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡಿದ್ದ
ಇವರು ಪತಿ ಇಬ್ಬರು ಮಕ್ಕಳನ್ನು ಅಗಲಿದ್ದು ನಿಧನಕ್ಕೆ ಬನ್ನೂರು ತಾಂಡಾದ ಶಾಲೆಯ ಶಿಕ್ಷಕ ಬಂಧಗಳಾದ ಎನ್.ಎಮ್ ಚೌಹಾನ್,ಸಹ ಶಿಕ್ಷಕರಾದ ವಿ ಐ ಗಂಗಣ್ಣವರ,ವಿ ಆರ್ ಮೇತ್ರಿ, ನಾಯಕ,ಲಮಾಣಿ,ವಿಜಯ ಕೇದಾರಿ,ಪಾಟೀಲ ಸಂತಾಪವನ್ನು ಸೂಚಿಸಿದ್ದು
ಇವರೊಂದಿಗೆ ರಾಜ್ಯದ ಮೂಲೆ ಮೂಲೆಗ ಳಿಂದಲೂ ಶಿಕ್ಷಕ ಬಂಧುಗಳು ವಿದ್ಯಾರ್ಥಿಗಳು ಇಲಾಖೆಯ ಅಧಿಕಾರಿಗಳು ಸಂತಾಪವನ್ನ ಸೂಚಿಸಿದ್ದಾರೆ.ಮೃತರ ಅಂತ್ಯಕ್ರಿಯೆ ರಾಮದುರ್ಗದಲ್ಲಿ ಇಂದೇ ನಡೆಯಲಿದೆ.