ದಿಟ್ಟ ಹೆಜ್ಜೆ ಇಟ್ಟ ಮಹಾನ್ ನಾಯಕ …..!!
ಅಶೋಕ ಎಂ ಸಜ್ಜನ
( ನಿವೃತ್ತಿ ನಿಮಿತ್ತ ಈ ಲೇಖನ )
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ವಗಾ೯ವಣೆ , ವೇತನ ತಾರತಮ್ಯ , ಶಿಕ್ಷಕರ ಬಡ್ತಿ , ಶಿಕ್ಷಕರ ನೇಮಕ , ಎನ್ ಪಿ ಎಸ್ ರದ್ಧತಿ , 7ನೇ ವೇತನ ಹೀಗೆ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಶಿಕ್ಷಕರು ಸಿಲುಕಿಕೊಂಡಿದ್ದರು. ಅಂತ:ಹ ಸಂದಭ೯ದಲ್ಲಿ ನ್ಯಾಯ ಕೇಳಿ ಹೋರಾಟಕ್ಕಿಳಿಯಬೇಕಿದ್ದ ಇತರೆ ಶಿಕ್ಷಕ ಸಂಘಟನೆಗಳು ಕೈಚೆಲ್ಲಿ ಕುಳಿತಿದ್ದ ಕಾಲವದು ….
ಗ್ರಾಮೀಣ ಶಿಕ್ಷಕ ಸಂಘದ ಹುಟ್ಟು
ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಗಮನಿಸಿದ ಶ್ರೀ ಅಶೋಕ ಎಂ ಸಜ್ಜನರು ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಏನಾದರೊಂದು ದಾರಿ ಹುಡುಕಿ ಮುಕ್ತಿ ಕಾಣಿಸಬೇಕೆಂದು ಹಂಬಲ ಹೊಂದಿದ್ದರು. ಛಲದಂಕ ಮಲ್ಲನಂತೆ ಪಟ್ಟು ಬಿಡದೇ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಕಷ್ಟ ಕಾಲದಲ್ಲಿ ಫಿನಿಕ್ಸನಂತೆ ಹುಟ್ಟು ಹಾಕಿದ್ದೆ “ ಕನಾ೯ಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ” ಅದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಅಶೋಕ ಎಂ ಸಜ್ಜನರು ಆಯ್ಕೆಯಾದರು. ಅದರ ನೇತ್ರತ್ವ ಮತ್ತು ಸಂಪೂಣ೯ ಜವಾಬ್ದಾರಿಯನ್ನು ವಹಿಸಿಕೊಂಡರು. ರಾಜ್ಯದ ಮೂಲೆ ಮೂಲೆಗೆ ಸುತ್ತಿ. ಜಿಲ್ಲಾ ,ತಾಲ್ಲೂಕು ಘಟಕಗಳನ್ನು ರಚಿಸಿ , ಅಲ್ಪ ಸಮಯದಲ್ಲೇ ಗ್ರಾಮೀಣ ಶಿಕ್ಷಕರ ಬಹುದೊಡ್ಡ ಸೈನ್ಯವನ್ನೆ ಕಟ್ಟಿದರು. ನಾಡಿನ ಉದ್ದಗಲಕ್ಕೂ ಸಂಘ ಸಂಘಟನೆ ಮಾಡಿದರು. ಅನೇಕ ಹೋರಾಟಗಳ ಮೂಲಕ ಶಿಕ್ಷಕರ ಒಂದೊಂದೆ ಸಮಸ್ಯೆಗಳು ಬಗೆಹರಿಸಿದರು. ಗ್ರಾಮೀಣ ಸಂಘದ ಕೀತಿ೯ಯನ್ನು ನಾಡಿನ ಉದ್ದಗಲಕ್ಕೂ ಪಸರಿಸಿ ಧೀಮಂತ ನಾಯಕರಾದರು.
ಅಷ್ಟೇ ಅಲ್ಲ ದೂರದೃಷ್ಟಿ ಹೊಂದಿರುವ ಇವರು ಶಿಕ್ಷಕರ ಕಲ್ಯಾಣಕ್ಕಾಗಿ ಒಂದಿಷ್ಟು ತಮ್ಮ ಸೇವೆಯನ್ನು ಮುಡುಪಾಗಿಟ್ಟರು. ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರು ಸದಾ ಒಂದಿಲ್ಲೊಂದು ವಿಷಯದಲ್ಲಿ ತುಳಿತಕ್ಕೊಳಗಾಗುತ್ತಿರುವುದನ್ನು ಮನಗಂಡು. ಅವರ ಜೀವ ಮಮ್ಮಲ ಮರುಗಿತು. ಅಧಿಕಾರಿಗಳ ದುರಾಸೆ , ಜನರ ಒತ್ತಡ , ಓಡಾಡಲು ಇರುವ ತೊಂದರೆ , ಬಸ್ಸಿನ ಅವ್ಯವಸ್ಥೆ , ವಾಸ್ತವ್ಯ ಇರಬೇಕೆಂದರೆ ಮೂಲ ಸೌಕಯ೯ ಇರದೇ ಇರುವ ಹಳ್ಳಿಗಳು. ಅಂಗವಿಕಲ , ಅನಾರೋಗ್ಯ ಪೀಡಿತ ಶಿಕ್ಷಕರು ಇಂತಹ ಅನೇಕ ಕಷ್ಟಗಳು ಅರಿತ ಇವರು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವನ್ನು ಹುಟ್ಟು ಹಾಕಲು ಕಾರಣವಾಯಿತು ಎನ್ನಬಹುದು. ಸಂಘಟನೆಯ ಮೂಲಕ ಸಾವ೯ಜನಿಕವಾಗಿ ಸದೃಡರಾಗಲು ಶಿಕ್ಷಕರನ್ನು ಕರೆ ಕೊಟ್ಟರು. ನಿರಂತರ ಹೋರಾಟಗಳ ಮೂಲಕ ಶಿಕ್ಷಕರಿಗೆ ಕಡ್ಡಾಯ ವಗಾ೯ವಣೆ , ಕೋವಿಡ್ 19 ರ ಸಂಕಷ್ಟ ಕಾಲದಲ್ಲಿ ಶಿಕ್ಷಕರಿಗೆ ವಿನಾಯಿತಿ , ಹೆಣ್ಣು ಮಕ್ಕಳಿಗೆ ಪ್ರಸೂತಿ ರಜೆ , ಎನ್ ಪಿ ಎಸ್ ಹೋರಾಟ , 7ನೇ ವೇತನ ಪರಿಷ್ಕರಣೆ , ಚುನಾವಣೆ ಸದಭ೯ದಲ್ಲಿಯ ವಾಸ್ತವತೆ , ವೈದ್ಯಕೀಯ ಸೇವೆ , ಜನಸ್ನೀಹಿ ವಗಾ೯ವಣೆ ಭಾಗ್ಯವನ್ನೂ ಕಲ್ಪಿಸಿದರು. ಗ್ರಾಮೀಣ ಶಿಕ್ಷಕರ ಸಂಘದಿಂದ ಹಲವಾರು ಕಾಯ೯ಕ್ರಮಗಳನ್ನು ರೂಪಿಸಿ ಸಚಿವರ , ಶಾಸಕರ , ರಾಜಕೀಯ ಧುರಿಣರ , ಅಧಿಕಾರಿಗಳ , ಸಾವ೯ಜನಿಕರ ಸಮ್ಮುಖದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಎತ್ತಿ ಹಿಡಿದರು. ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸಾವ೯ಜನಿಕವಾಗಿ ಪ್ರಶಸ್ತಿ ನೀಡಿ ಗೌರವಿಸಿದರು. ದುಬ೯ಲರಿಗೆ , ಶಿಕ್ಷಿತ ಶಿಕ್ಷಕರಿಗೆ ಧೈಯ೯ ತುಂಬಿದರು. ಶಿಕ್ಷಕರ ಮನೋಸ್ಥೈಯ೯ವನ್ನು ಹೆಚ್ಚಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತಂದರು.
ಶಿಕ್ಷಕ ವೃತ್ತಿ
ಶಿಕ್ಷಕ ವೃತ್ತಿಯಲ್ಲಿ ಸಂಪೂಣ೯ವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಯಾವ ? ತಪ್ಪು ಮಾಡದೇ ತಮ್ಮ ವೃತ್ತಿ ಅವಧಿಯನ್ನು ಸಂಘದ ಮತ್ತು ಕಛೇರಿಯ ಯಾವ ಚಟುವಟಿಕೆಗೂ ಬಳಸಿಕೊಳ್ಳಲಿಲ್ಲ. ಶಿಕ್ಷಕ ವೃತ್ತಿ ಅವರು ಸಂತ್ರಪ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಧುರೀಣರು , ಅಧಿಕಾರಿ ವಗ೯ , ಸಾವ೯ಜನಿಕರು ಕೂಡಾ ಅವರ ಸೇವೆಯ ಬಗ್ಗೆ ಅಪಾರ ಪ್ರೀತಿ , ವಿಶ್ವಾಸ , ಗೌರವವನ್ನು ಹೊಂದಿದ್ದಾರೆ. ಯಾರ ಮನಸ್ಸು ನೋಯಿಸಿದ ಉದಾಹರಣೆಗಳೇ ಇಲ್ಲ !! . ಎಲ್ಲರನ್ನು ಪ್ರೀತಿಸಿ ಗೌರವಿಸುವ ಹೃದಯವಂತರು. ಈಗ ಇವರಿಗೆ 60ರ ಸಂಭ್ರಮ.
ಇವರು ಒಬ್ಬ ಕ್ರೀಯಾಶೀಲ ಶಿಕ್ಷಕರಾಗಿ ಜನಾನುರಾಗಿಯಾದರು. ಶಾಲಾ ಮಕ್ಕಳನ್ನು ಅತೀವ ಪ್ರೀತಿ , ಬಡ ವಿದ್ಯಾಥಿ೯ಗಳಿಗೆ ಓದಲು ಬರೆಯಲು ಬೇಕಾದ ಕಲಿಕಾ ಸಾಮಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ಒದಗಿಸಿದರು. ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಉತ್ತಮ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾದರು.
ಹೆಸರಿಗೆ ತಕ್ಕಂತೆ ಸರಳ , ಸಜ್ಜನ , ಸನ್ನಡತೆಯ ಹಾದಿಯನ್ನು ಬಯಸಿದ್ದ ಇವರು ಬದುಕಿನ ಏಳು ಬೀಳುಗಳ ರಹದಾರಿಯಲ್ಲಿ ತಮ್ಮ ಸ್ವಂತ ನಾಯಕತ್ವದಲ್ಲಿ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘವನ್ನು ಕಟ್ಟಿ ಬೆಳೆಸಿದರು. ರಾಜಕೀಯ , ಅಧಿಕಾರಿಗಳ, ಶಿಕ್ಷಕರ , ಮಕ್ಕಳ , ಸಾಮಾಜೀಕ ಕಳಕಳಿಯೊಂದಿಗೆ ಹೂವಿನಂತೆ ಅರಳಿ ಬೆಳೆದವರು. ಅಶೋಕ ಸಜ್ಜನರು ಒಬ್ಬ ಧೀಮಂತ ಶಿಕ್ಷಕ ನಾಯಕರಾಗಿ ರಾಜ್ಯದಲ್ಲಿ ಸಂಚಲನ ಮೂಡಿಸಿದರು. ಮುಗ್ದ ಸ್ವಭಾವದ ಇವರು ಎಲ್ಲರೊಳಗೊಂದಾಗಿ ಚೆಂದಾಗಿ , ಬೆಂದು ಬಾಳಿ ಬೆಳಗಿದ ವ್ಯಕ್ತಿಗಳು. ಜೀವನ ಗಂಧದಷ್ಟೇ ತೇದು ಶಿಕ್ಷಣ ಇಲಾಖೆ , ಸಮಾಜ , ಶಿಕ್ಷಕ ಸಮೂದಾಯ , ಸಂಘಟನೆ ಮತ್ತು ಕುಟುಂಬಕ್ಕೆ ಸುಗಂದ ದ್ರವ್ಯದಷ್ಟೇ ಪರಿಮಳ ಬೀರಿದ ಹಿರಿಯ ಜೀವವದು. “ ಕನ್ನಡ ಶಾಲೆಯೊಂದು ಜೀವಂತ ದೇವಾಲಯ , ಮಕ್ಕಳೇ ನಿಜ ದೇವರು ” ಎಂದು ನಂಬಿ ಶ್ರದ್ಧಾ , ಭಕ್ತಿಪೂವ೯ಕವಾಗಿ ಪಾಠ ಪ್ರವಚನ ಮಾಡುತ್ತಾ ಬಂದರು.
ಕಲ್ಲರಳಿ ಹೂವಾಗಿ ಎಲ್ಲರಿಗೂ ಬೇಕಾಗಿ ಎನ್ನುವಂತೆ ಗ್ರಾಮದ ಹಿರಿ ಕಿರಿಯರೊಂದಿಗೆ ಬೆರೆತರು. ಶಾಲೆಯ ಯಾವತ್ತೂ ಮುಖ್ಯೋಪಾಧ್ಯಾಯರು ಶಿಕ್ಷಕರು , ಮಕ್ಕಳು , ಪಾಲಕರು , ಎಸ್ ಡಿ ಎಂ ಸಿ ಯ ಸವ೯ ಸದಸ್ಯರ ನೆರವಿನೊಂದಿಗೆ ; ಎಲ್ಲರನ್ನು ತಮ್ಮವರಂತೆ ಕಂಡು ಪ್ರೀತಿಸಿ ಶಾಲೆಯ ಅಭಿವೃದ್ಧಿ ಮಾಡುವಲ್ಲಿ ಸಂಪೂಣ೯ ಯಶಸ್ವಿಯಾದರು. ಜೊತೆಗೆ ಮಕ್ಕಳ ವಿದ್ಯಾಭ್ಯಾಸದೊಂದಿದೆ ಅವರ ಉನ್ನತ ವ್ಯಾಸಂಗಕ್ಕೂ ಸಹಾಯ ಸಹಕಾರ ನೀಡಿದರು. ಅವರ ಕೈಯಲ್ಲಿ ಕಲಿತ ಅದೆಷ್ಟೋ ವಿದ್ಯಾಥಿ೯ಗಳು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಶಾಲಾ ವಿಚಾರದಲ್ಲಿ ಅವರ ಬಗ್ಗೆ ಬರೆಯುವುದೆಂದರೆ ಅದೊಂದು ಇತಿಹಾಸವಾಗುವಷ್ಟಿದೆ. ಒಟ್ಟಾರೆ ಶಾಲೆ ಮತ್ತು ಮಕ್ಕಳ ಸವಾ೯ಂಗಿಣ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದು ಹೇಳಬಹುದು….!!
ಉತ್ತಮ ಸಂಸ್ಕಾರ ಹೊಂದಿರುವ ಇವರು. ಶಿಕ್ಷಣ ಇಲಾಖೆಯಿಂದ ಇದೇ ಜನೆವರಿ 2024 ರಂದು ವಯೋ ಸಹಜ ನಿವೃತ್ತಿ ಹೊಂದಿದ್ದಾರೆ. ಒಂದು ಕಡೆ ದುಃಖ , ಇನ್ನೊಂದು ಕಡೆ 37 ವಷ೯ 11 ತಿಂಗಳುಗಳ ಕಾಲ ಸುದೀಘ೯ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾದರು. ಶಿಕ್ಷಕ ಸೇವೆ ಸಂತೃಪ್ತಿಯಿಂದ ಸಲ್ಲಿಸಿದರು. ಅವರ ವಿಶ್ರಾಂತ ಜೀವನ ಸುಖಕರವಾಗಲಿ , ದೇವರು ಅವರಿಗೆ ಆಯೂರಾರೋಗ್ಯ ಭಾಗ್ಯಗಳು ಕರುಣಿಸಲಿ ಎಂದು ಹಾರೈಸುವೆ …..! !
ಅಕ್ಬರಅಲಿ ಇ ಸೋಲಾಪೂರ
ಶಿಕ್ಷಕ ಸಾಹಿತಿಗಳು
ಧಾರವಾಡ