ಅಶೋಕಪಥ ಪುಸ್ತಕ ಲೋಕಾರ್ಪಣೆ ಹಾಗೂ ಅಶೋಕ ಸಜ್ಜನ ಅವರ ನಿವೃತ್ತಿ ಅಭಿನಂದನ ಸಮಾರಂಭ..
ಹುಬ್ಬಳ್ಳಿ ಪೆಬ್ರವರಿ 08
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಅಶೋಕ ಎಂ ಸಜ್ಜನ ಅವರು 2024 ನೆಯ ಜನೇವರಿ 31 ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದು, ಅವರ ಸೇವಾ ನಿವೃತ್ತಿಯ ಅಭಿನಂದನ ಸಮಾರಂಭ ಹಾಗೂ ಅಶೋಕಪಥ ಪುಸ್ತಕ ಲೋಕಾರ್ಪಣೆ ಹಾಗೂ ಗಣ್ಯರಿಗೆ ಸತ್ಕಾರ ಸಮಾರಂಭವನ್ನು, ಪೆಬ್ರವರಿ 11 ರಂದು ರವಿವಾರ ಮಧ್ಯಾಹ್ನ 2,30 ಗಂಟೆಗೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನ ಸಮಿತಿಯ ಅಧ್ಯಕ್ಷರಾದ ಡಿ ಎಸ್ ಭಜಂತ್ರಿ ಮಾಧ್ಯಮ ಗೋಷ್ಟಿ ಯನ್ನು ಉದ್ದೇಶಿಸಿ, ಮಾತನಾಡಿದರು, ಚಿಕ್ಕಮಗಳೂರಿನ, ಮಾಚಗೊಂಡನಹಳ್ಳಿಯ ಬೇರುಗಂಡಿ ಬ್ರಹನ್ಮಠದ ಪರಮಪೂಜ್ಯ ಶ್ರೀ ಶ್ರೀ ಷ,ಬ್ರ,ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಈ ಸಮಾರಂಭದ ಉದ್ಘಾಟನೆಯನ್ನು ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ನೆರವೇರಿಸುವರು, ವಿಧಾನ ಪರಿಷತ್ತಿನ ಗೌರವಾನ್ವಿತ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅಶೋಕಪಥ ಪುಸ್ತಕವನ್ನು ಲೋಕಾರ್ಪಣೆ ಮಾಡುವರು,ಧಾರವಾಡ ಜಿಲ್ಲೆಯ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಘದ ಅಧ್ಯಕ್ಷರಾದ ಅಕ್ಬರಲಿ ಸೋಲಾಪುರ ಇವರ ಹೊಸ ಯುಗಾದಿ ಕವನ ಸಂಕಲನವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡುವರು,ಎಂದು ಡಿ ಎಸ್ ಭಜಂತ್ರಿ ತಿಳಿಸಿದರು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ, ಸಜ್ಜನ ಹಾಗೂ ಹೊಸಗಾಣಿಗೇರ ಪರಿವಾರದ ಸಹಕಾರದೊಂದಿಗೆ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳು ಸೇರಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,
ಈ ಸಮಾರಂಭಕ್ಕೆ ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ, ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ, ಹುಬ್ಬಳ್ಳಿಯ ಶಾಸಕರಾದ ಮಹೇಶ ಟೆಂಗಿನಕಾಯಿ ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹು,ಧಾ, ಮಹಾನಗರ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ರಾಜಣ್ಣ ಕೊರವಿ ವಿಧಾನ ಸಭೆಯ ಸಚಿವಾಲಯ ವಿಶ್ರಾಂತ ಕಾರ್ಯದರ್ಶಿಗಳು ಎಸ್ ವಾಯ್ ಕುಳಗೇರಿ, ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ, ಸಿಸ್ಲೆಪ್ ನಿರ್ದೇಶಕರಾದ ಡಾ, ಬಿ ಕೆ ಎಸ್ ವರ್ದನ್, ಉಪನಿರ್ದೇಶಕರಾದ ಧಾರವಾಡದ ಎಸ್ ಎಸ್ ಕೆಳದಿಮಠ ಚಿಕ್ಕೋಡಿಯ ಮೋಹನ ಕುಮಾರ ಹಂಚಾಟೆ ಹುಬ್ಬಳ್ಳಿ ಗ್ರಾಮೀಣ ಬಿಇಒ ಉಮೇಶ್ ಬಮ್ಮಕ್ಕನವರ, ಶಿಕ್ಷಕರ ನಾಯಕರಾದ ಶಂಭುಲಿಂಗನಗೌಡ ಪಾಟೀಲ ತೇರಿಗೆ ಸಲಹೆಗಾರ ಸಂಗಮೇಶ ಸಜ್ಜನ, ಗಣ್ಯ ಉದ್ಯಮಿ ಮಹಾಲಿಂಗೇಶ ಜಿಗಳೂರ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಗೌರವಾದ್ಯಕ್ಷರಾದ ಗುರು ತಿಗಡಿ, ಅಶೋಕ ಸಜ್ಜನ ಅವರ ಧರ್ಮಪತ್ನಿ ಅನಸೂಯಾ ಸಜ್ಜನ ಅಶೋಕಪಥ ಪುಸ್ತಕದ ಸಂಪಾದಕ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ಸೇರಿದಂತೆ, ರಾಜ್ಯ ಸಂಘದ ಪದಾಧಿಕಾರಿಗಳು ಹಾಗ ಸಾವಿರಕ್ಕೂ ಅಧಿಕ ಸಂಘದ ಆಜೀವ ಸದಸ್ಯರು ಪಾಲ್ಗೊಳ್ಳುವರು ಎಂದು ಉಪ್ಪಿನ ತಿಳಿಸಿದರು. ರಾಜ್ಯ ಗೌರವಾದ್ಯಕ್ಷ ಎಲ್ ಐ ಲಕ್ಕಮ್ಮನವರ ಕಾರ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆ ಸಲಹಾ ಸಮಿತಿಯ ಅಧ್ಯಕ್ಷರಾದ ಗೋವಿಂದ ಜುಜಾರೆ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಅಕ್ಬರಲಿ ಸೋಲಾಪುರ………. ಮುಂತಾದವರು ಮಾಧ್ಯಮ ಗೋಷ್ಠಿಯಲ್ಲಿ ಇದ್ದರು.