ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿ ಜೀವನದ ಪ್ರಮುಖ ಜ್ಞಾನದ ಆಕರಗಳಾಗಿವೆ
ವಿಶ್ವಾಸ ವೈದ್ಯ
ಸವದತ್ತಿ: ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿ ಜೀವನದ ಪ್ರಮುಖ ಜ್ಞಾನದ ಆಕರಗಳಾಗಿವೆ. ಅಧ್ಯಯನದ ಜೊತೆಗೆ ಸ್ಥಳ ಭೇಟಿ ವಿದ್ಯಾರ್ಥಿಗಳಿಗೆ ಜ್ಞಾನದ ಸ್ಪಷ್ಟತೆಗೆ ದಾರಿ ಮಾಡಿ ಕೊಡುತ್ತವೆ” ಎಂದು ಶಾಸಕರಾದ ಶ್ರೀ ವಿಶ್ವಾಸ ವಸಂತ ವೈದ್ಯರವರು ಅಭಿಪ್ರಾಯಪಟ್ಟರು. ಅವರು ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ “ಕರ್ನಾಟಕ ದರ್ಶನ” ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ ಮಾತನಾಡಿ “ಉಚಿತ ಪ್ರವಾಸದ ಯೋಜನೆಯಿಂದ ಕಡು ಬಡತನದ ಹಿನ್ನೆಲೆಯ ವಿಧ್ಯಾರ್ಥಿಗಳು ಸಹ ಪ್ರವಾಸದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸರಕಾರದ ಈ ಯೋಜನೆಯಿಂದ ಬಹಳಷ್ಟು ಮಕ್ಕಳಿಗೆ ಅವರ ಜ್ಞಾನದ ವಿಸ್ತಾರಕ್ಕೆ ಸಹಕಾರಿಯಾಗಿದೆ” ಎಂದರು.
ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಗೈಡ್ ಶಿಕ್ಷಕರ ಮಾರ್ಗದರ್ಶನವನ್ನು ಪಾಲಿಸಬೇಕು” ಎಂದು ಸಲಹೆ ನೀಡಿದರು.
ನಂತರ ಪ್ರವಾಸ ಕಿಟ್ ವಿತರಣೆ ಮಾಡಲಾಯಿತು
ಕ್ಷೇತ್ರ ಸಮನ್ವಯಾಧಿಕಾರಿ ಬಿ ಎನ್ ಬ್ಯಾಳಿ, ಶಿಕ್ಷಣ ಸಂಯೋಜಕ ಶ್ರೀ ಗುರುನಾಥ ಕರಾಳೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ
ಕಿರಣ್ ಕುರಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾದ ಯಶವಂತ ಶಿವಕೇರಿ
ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಪೋಷಕರು ಬಿ.ಆರ್.ಪಿ ಮತ್ತು ಸಿ ಆರ್ ಪಿ ಹಾಗೂ ಬಿ ಐ ಈ ಆರ್ ಟಿ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.