ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಭಾವೈಕ್ಯತಾ ಮೇಳ..
ಇಂದು ದಿನಾಂಕ 31/01/2024 ರಂದು ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಮಟ್ಟದ ಭಾರತ್ ಸ್ಕೌಟ್ ಗೈಡ್ ದ್ವಿತೀಯ ಸೋಪಾನ ಪರೀಕ್ಷೆ ಹಾಗೂ ಮಕ್ಕಳ ಭಾವೈಕ್ಯತಾ ಮೇಳ ಸಿ ಸಿ ಎನ್ ಸರಕಾರಿ ಪ್ರೌಢಶಾಲೆ ಶಿರಹಟ್ಟಿಯಲ್ಲಿ ನಡೆಯಿತು.
ಬೆಳಗ್ಗೆ 10 ಗಂಟೆಗೆ ದ್ವಜಾರೋಹಣ ಪಥಸಂಚಲನ ಪ್ರಭಾತಬೇರಿ ಬೇಸ್ ಗುಂಪು ರಚನೆ ಮಾಡಲಾಯಿತು.ಈ ಕಾರ್ಯಕ್ರಮವನ್ನು ಮಾನ್ಯ ಜನಪ್ರಿಯ ಶಾಸಕರಾದ ಡಾಕ್ಟರ್ ಚಂದ್ರು ಲಮಾಣಿ ಉದ್ಘಾಟನೆ ಮಾಡಿದರು. ಜೊತೆಗೆ ಉದ್ಘಾಟನೆ ನುಡಿಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಟ್ರೋಪಗಳು ಪ್ರತಿಯೊಂದು ಶಾಲೆಗಳಲ್ಲಿ ರಚನೆಯಾಗಬೇಕು ಮಕ್ಕಳಿಗೆ ದೇಶಪ್ರೇಮ ಶಿಸ್ತು ಸಂಯಮ ಮೂಡಿಬರಲಿ ಹಾಗೂ ಭಾವೈಕ್ಯತೆಯಿಂದ ನಾವೆಲ್ಲರೂ ಭಾರತೀಯರು ಹಾಗೂ ಮಕ್ಕಳು ರಾಜ್ಯ ಪುರಸ್ಕಾರ ರಾಷ್ಟ್ರ ಪುರಸ್ಕಾರ ಪದಕಗಳನ್ನು ಪಡೆದು ಒಳ್ಳೆಯ ಶಿಕ್ಷಣವನ್ನು ಪಡೆದು ಸಮಾಜಮುಖಿಯಾಗಲಿ ಎಂಬ ಮಾತನ್ನು ಹೇಳಿದರು.
ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನಿಂದ ಸುಮಾರು 250 ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಿಗೆ ದ್ವಿತೀಯ ಸೋಪಾನ ಪರೀಕ್ಷೆ ಮಾಡಿ ಮೌಲ್ಯ ಮಾಪನ ಮಾಡಿ ತೇರ್ಗಡೆ ಆದವರನ್ನು ಜಿಲ್ಲಾ ಹಂತಕ್ಕೆ ಕಳುಹಿಸಲಾಗುವುದು. ಜಿ ಎಚ್ ಪೂಜಾರ ಜಿಲ್ಲಾ ಕಾರ್ಯದರ್ಶಿಗಳು ಸ್ಕೌಟ್ ಗೈಡ್ ಬೆಳೆದು ಬಂದ ಇತಿಹಾಸ ಅದರ ಗುರಿ ಉದ್ದೇಶ ನಮ್ಮ ರಾಜ್ಯದಲ್ಲಿ ಸುಮಾರು ಐದು ಲಕ್ಷ ವಿದ್ಯಾರ್ಥಿಗಳು ಸ್ಕೌಟ್ ಗೈಡ್ ನಲ್ಲಿದ್ದಾರೆಂದು ತಿಳಿಸಿ ಪ್ರಪಂಚದ 215 ದೇಶಗಳ ಲ್ಲಿ ಸ್ಕೌಟ್ ಗೈಡ್ ಅನುಷ್ಠಾನ ದಲ್ಲಿದೆ ಎಂದು ಪ್ರಾಸ್ತಾವಿಕ ನುಡಿಗಳಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀ ಜಿಎಂ ಮುಂದಿನಮನಿ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿರಹಟ್ಟಿ ಶ್ರೀ ಎಂ ಎನ್ ಹವಳದ್ ದೈಹಿಕ ಶಿಕ್ಷಣಾಧಿಕಾರಿಗಳು ಶ್ರೀ ಉಮೇಶ್ ಹುಚ್ಚಯ್ಯನಮಠ ಶಿಕ್ಷಣ ಸಂಯೋಜಕರು ಶಿರಹಟ್ಟಿ ಶ್ರೀ ಎಚ್ಎಂ ದೇವಗೇರಿ. ಶಿರಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀ ಸಂದೀಪ ಕಪ್ಪತ್ತನವರ ಶ್ರೀ ಫಕೀರೇಶ ರಟ್ಟಿಹಳ್ಳಿ ಶ್ರೀ ಹೊನ್ನಪ್ಪ ಶಿರಹಟ್ಟಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ನಾಗರಾಜ್ ಲಕ್ಕುಂಡಿ ಬಸವಣ್ಣೆಪ್ಪ ತುಳಿ ಶ್ರೀ ಮತಿ ರೇಣುಕಾ ತುಳಿ ಶ್ರೀ ಮತಿ ನಿರ್ಮಲಾ ಶಿಗ್ಲಿ.ಡಾಕ್ಟರ್ ಮಹೇಂದ್ರಕರ್ ಶ್ರೀ ಜಿ ಹಚ್ ಪೂಜಾರ ಜಿಲ್ಲಾಕಾಯ೯ದಶಿ೯ಗಳು ಗದಗ ಶ್ರೀ ಗಣಪತಿ ಈರಕ್ಕನವರ ಮುಖ್ಯೋಪಾಧ್ಯಾಯರು ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕಿನ ಕಾಯ೯ದಶಿ೯ಗಳಾದ ಕೆ ಆರ್ ಲಮಾಣಿ ಶಿರಹಟ್ಟಿ ಕಾಯ೯ದಶಿ೯ಗಳಾದ ಎಂಎ ಬುಕ್ಕಿಟಗಾರ ಶ್ರೀ ಶಿವಕುಮಾರ ಸಂಘಟನಾ ಕಾರ್ಯದರ್ಶಿ ಗದಗ ಎನ್ ಎನ್ ಸಾವಿರ ಕುರಿ ಶಿರಹಟ್ಟಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಮಾಗಡಿ ಕ್ಲಸ್ಟರ್ ವ್ಯಕ್ತಿಗಳಾದ ಶ್ರೀಮತಿ ಕೆ ಪಿ ಕಂಬಳಿ ಹಾಗೂ ಶ್ರೀಮತಿ ವಾಯ್ ಎ ಶಿರಹಟ್ಟಿ ಶ್ರೀ ಪಿ ಎಫ್ ಬಂತಿ ಶ್ರೀ ಹೆಚ್ ವಾಯ್ ಹೊಸಮನಿ ಶ್ರೀಮತಿ ನಂದಾ ಪ್ರ ಪಲ್ಲೇದ ಶ್ರೀಮತಿ ಉಮಜಿ೯ ಶ್ರೀ ಮಹೇಶ ಕಲ್ಲಪ್ಪನವರ ಮಹೇಶ ವರವಿ ಹಾಗೂ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನಿಂದ ಸ್ಕೌಟ್ಸ್ ಮಾಸ್ಟರ ಗೈಡ್ಸ್ ಕ್ಯಾಪ್ಟನ್ಸ್ ಮತ್ತು ವಿದ್ಯಾರ್ಥಿಗಳು ಪ್ರೌಢಶಾಲೆ ಶಿರಹಟ್ಟಿಯು ಸವ೯ಸದಸ್ಯರು ಹಾಗೂ ಶಾಲಾ ಶಿಕ್ಷಕರು ಇನ್ನೂ ಅನೇಕ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.