ಸರ್ಕಾರದ ಆದೇಶಕ್ಕೂ ಡೊಂಟ್ ಕೇರ್!! ಶಾಲಾ ಮುಖ್ಯ ಶಿಕ್ಷಕಿ ಅಮಾನತ್ ಮಾಡಿ ಆದೇಶ…
ಶಿಕ್ಷಣ ಸಚಿವರ ಹಾಗೂ ಸಿಎಎಮ್ ಅವರ ಆದೇಶಕ್ಕೂ ಬೆಲೆ ಕೋಡದ ಶಿಕ್ಷಕಿ!! ಏನಿದು ಪ್ರಕರಣ ನೀವೆ ನೋಡಿ…
ಸರ್ಕಾರದ ಆದೇಶ ಪಾಲನೆ ಮಾಡಿ…
ಕೋಲಾರದಲ್ಲಿ ಮಲದ ಗುಂಡಿಗೆ ಶಾಲಾ ಮಕ್ಕಳನ್ನು ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರಲ್ಲಿ ಒಂದರ ಮೇಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರುವ ವಿಡಿಯೊವೊಂದು ವೈರಲ್ ಆಗಿದೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಕುದಪಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಡ್ಲಘಟ್ಟ ತಾಲೂಕಿನ ಕುದಪಕುಂಟೆ ಗ್ರಾಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಲೆಗೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ತಾಲೂಕಿನ ಬಿಇಒ ನರೇಂದ್ರ ಕುಮಾರ್, ಇಓ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಜಗದೀಶ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಗೌಪ್ಯ ಹೇಳಿಕೆಯನ್ನು ಪಡೆದಿದ್ದಾರೆ.
ಪೆನ್ನು ಹಿಡಿಯಬೇಕಿದ್ದ ಮಕ್ಕಳ ಕೈಗೆ ಶಿಕ್ಷಕರು ಪೊರಕೆ ಕೊಟ್ಟು ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಶಾಲೇಲಿ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೋಷಕರು ತಿರುಗಿ ಬಿದ್ದಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮಕ್ಕೆ ಪೋಷಕರು ಒತ್ತಾಯಸಿದ್ದಾರೆ. ಪೋಷಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಬಿಇಒ ನರೇಂದ್ರ ಕುಮಾರ್ ಅವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.