ಗದಗ ಜಿಲ್ಲೆಯಲಕ್ಷ್ಮೇಶ್ವರ ತಾಲೂಕಿನ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಶಾಸಕ ಚಂದ್ರು ಲಮಾಣಿ ಅವರಿಗೆ ಲಕ್ಷ್ಮೇಶ್ವರ ಘಟಕದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಲಕ್ಷ್ಮೇಶ್ವರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು .
ರಾಜ್ಯದ ಸರ್ಕಾರಿ ನೌಕರರ ಕರ್ತವ್ಯ ನಿಷ್ಠೆ ದೇಶದಲ್ಲಿಯೇ ಮಾದರಿಯಾಗಿದೆ. ಆದರೆ ಇಲ್ಲಿಯವರೆಗೆ ಏಳನೇ ವೇತನ ಆಯೋಗದ ಸವಲತ್ತುಗಳು ಅನುಷ್ಠಾನಗೊಳಿಸದೆ ಕಾಲಹರಣವಾಗುತ್ತಿದೆ.
ಕರ್ನಾಟಕ ರಾಜ್ಯ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಡಿ ಎಚ್ ಪಾಟೀಲ ಮಾತನಾಡಿ ಹಿಂದಿನ ಸರ್ಕಾರವು ಜಾರಿಗೊಳಿಸಿದ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಸರ್ಕಾರಿ ನೌಕರರ ಕುಟುಂಬಕ್ಕೆ ಅನುಕೂಲವಾಗುವಂತೆ ಶೀಘ್ರವೇ ಜಾರಿಗೊಳಿಸಬೇಕು ಈ ಕುರಿತು ಸರ್ಕಾರದ ಇಡೀ ರಾಜ್ಯದ್ಯಂತ ಎಲ್ಲಾ ಶಾಸಕರಿಗೂ ಮನವಿ ಸಲ್ಲಿಕೆ ಅಭಿಯಾನ ನಡೆಸಲಾಗುತ್ತಿದೆ ಎಂದರು.
ನಿವೃತ್ತಿಯ ಸಂಧ್ಯಾ ಕಾಲದಲ್ಲಿ ಸರ್ಕಾರಿ ನೌಕರರಿಗೆ ಸಿಗಬೇಕಾಗಿದ್ದ ಹಳೆಯ ನಿವೃತ್ತಿ ವೇತನ ವ್ಯವಸ್ಥೆ ಮರುಸ್ಥಾಪನೆ ಆಗಬೇಕು. ಎನ್ ಪಿ ಎಸ್ ನಂತಹ ಮಾರಕ ಯೋಜನೆಯನ್ನು ನಿಲ್ಲಿಸಬೇಕು.ಈ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿದ 2006ರ
ನಂತರ ಸೇವೆಗೆ ಸೇರಿದ ಸರ್ಕಾರಿ ಅನುದಾನಿತ ಹಾಗೂ
ನಿಗಮ ಮಂಡಳಿ ನೌಕರರಿಗೆ ತಕ್ಷಣವೇ ಹಳೆ ಪಿಂಚಣಿ
ವ್ಯವಸ್ಥೆಯನ್ನು ಜಾರಿಗೆ ಮಾಡಲು ಸಚಿವ ಸಂಪುಟದಲ್ಲಿ
ನಿರ್ಧಾರ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಎನ್ ಪಿ ಎಸ್ ಸಂಘದ ಅಧ್ಯಕ್ಷರಾದ ಎಫ್ ಎಸ್ ತಳವಾರ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ, ಡಿ ಎಚ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಮ್ ಎ ನದಾಫ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ,ಎಸ್ ಎಫ್ ಮಠದ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಮ್ ಬಿ ಹೊಸಮನಿ, ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲೂಕು ಘಟಕದ ಎನ್ ಪಿ ಎಸ್ ಸಂಘದ ಗೌರವಾಧ್ಯಕ್ಷರಾದ ಮಂಜುನಾಥ ಕೊಕ್ಕರಗುಂದಿ, ಜೆ ಡಿ ಲಮಾಣಿ, ತಾಲೂಕು ಘಟಕದ ಎನ್ ಪಿ ಎಸ್ ಸಂಘದ ಅಧ್ಯಕ್ಷರಾದ ಎಫ್ ಎಸ್ ತಳವಾರ, ಸರ್ವ ಸಂಘಗಳ ಗೌರವಾಧ್ಯಕ್ಷರಾದ ಬಿ ಎಮ್ ಕುಂಬಾರ, ಎಮ್ ಎಸ್ ಹಿರೇಮಠ, ಡಿ ಡಿ ಲಮಾಣಿ, ಎಲ್ ಎನ್ ನಂದೆಣ್ಣವರ, ಜೆ ಡಿ ಲಮಾಣಿ ಹಾಗೂ ವಿವಿಧ ಇಲಾಖೆಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.