ಲೂಸಿ ಅಮ್ಮನ ಬದ್ಧತೆ ಮೆಚ್ಚುವಂತಹುದು, ಇಸಾಬೆಲ್ಲಾ ಝೇವಿಯರ್,
ತಿಮ್ಮಾಪೂರ
ಇಡೀ ಬದುಕನ್ನು ಶಾಲೆಗಾಗಿ ಶಾಲೆಯ ಮಕ್ಕಳಿಗಾಗಿಯೇ ಮೀಸಲಿಟ್ಟ ತ್ಯಾಗಮಯಿ ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾಯಿತು ಎನ್ನುವವರ ಮದ್ಯೆ ಈ ಮಹಾನ್ ತಾಯಿ ಆದರ್ಶವಾಗಿ ನಿಲ್ಲುತ್ತಾರೆ ಎಂದು ಮಹಿಳೆಯರ ಪರ ಹೋರಾಟಗಾರ್ತಿ ಇಸಾಬೆಲ್ಲಾ ಝೇವಿಯರ್ ಹೇಳಿದರು,
ಅವರು ಧಾರವಾಡ ತಾಲ್ಲೂಕಿನ ತಿಮ್ಮಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ 103 ನೆಯ ದತ್ತಿನಿಧಿ ಚೆಕ್ ವಿತರಿಸಿ ಮಾತನಾಡಿದರು,ಅಕ್ಷರತಾಯಿ ಲೂಸಿ ಸಾಲ್ಡಾನರವರು ಇದೇ ಸಂದರ್ಭದಲ್ಲಿ ಮಾತನಾಡಿ, ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿರುವೆ ನನ್ನ ಕಷ್ಟ ನನ್ನ ನಾಡಿನ ಮಕ್ಕಳಿಗೆ ಬರಬಾರದು. ಮಕ್ಕಳು ಶಿಕ್ಷಣವಂತರಾದರೆ ಸ್ವಾವಲಂಬಿ ಬದುಕನ್ನು ನಿರ್ವಹಿಸುವುದರ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವರು. ಮಕ್ಕಳೇ ನನ್ನ ಆಸ್ತಿ. ಸರಕಾರಿ ಶಾಲೆಗಳು ಸೇವಾ ಸಂಸ್ಥೆಗಳೇ ಎಂದರು ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಅಕ್ಷರತಾಯಿ ತಾಗಜೀವಿ, ಮಹಿಳೆ ಅಬಲೆಯಲ್ಲ ಸಬಲೆ ಎಂಬುವುದನ್ನು ಈ ನಾಡಿಗೆ ತೋರಿಸಿಕೊಟ್ಟ ಧೀಮಂತ ಮಹಿಳೆ, ಕಷ್ಟದ ಜೀವನವನ್ನು ಬದಿಗಿಟ್ಟು ನನ್ನಂತಹ ಸಾವಿರಾರು ಮಕ್ಕಳಿಗೆ ಅಕ್ಷರದ ಬೆಳಕು ನೀಡಿದ್ದಾರೆ ಎಂದರು.
.ಎಸ್ಡಿಎಂಸಿ ಅಧ್ಯಕ್ಷರಾದ ಶಿವನಗೌಡ ಜಟ್ಟಿನಗೌಡ್ರ, ಉಪಾಧ್ಯಕ್ಷರಾದ ಶ್ರೀಮತಿ ಈರವ್ವ ಹಾರೋಬೆಳವಡಿ & ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಮರೇವಾಡದ ಸದಸ್ಯರಾದ ಶ್ರೀ ಶೇಖಪ್ಪ ಕಮತರ, ಶ್ರೀಮತಿ ಮಂಜುಳಾ ದೊಡ್ಡಗೌಡ್ರ , ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಶ್ರೀ ಎಸ್ ಎ ಜಾದವ್, ಶ್ರೀ ಉದಯ ಮೊರಬ, ಗುರು ಮಾತೆಯರಾದ ಶ್ರೀಮತಿ ಎಂ ಎನ್ ಕೊಂಡಿ, ಎಸ್ ಡಿ ಬಳಿಗಾರ್, ಎಸ್ ಡಿ ಬೆಂಗೇರಿ, ಎಮ್ ಎಚ್ ಅಜ್ಜಿ, ಆರ್ ಎನ್ ಜೊಂಜಾಳೆ, ಎನ್ ವಿ ಕುಲಕರ್ಣಿ, ಕುಮಾರಿ ವಿದ್ಯಾ ಚಿಕ್ಕನಗೌಡ್ರ…ಎಸ್ ಎ ಜಾಧವ ಎ ಎನ್ ಕೊಂಡಿ ಎಸ್ ಡಿ ಬಳಿಗೇರ ಎಸ್ ಬಿ ಬಿಂಗೇರಿ ಎನ್ ವಿ ಕುಲಕರ್ಣಿ ಎಂ ಎಚ್ ಅಜ್ಜಿ ಆರ್ ಎನ್ ಜೊಂಜಾಳೆ ಇದ್ದರು.