ವಚನ ಇಂಚರ ಕೃತಿ ಲೊಕಾರ್ಪಣೆ ನಾನು ಲೂಸಿ ಟೆಲಿಪಿಲ್ಮ ಬಿಡುಗಡೆ ಶ್ರಮಿಕ ರತ್ನ.ಶಿಕ್ಷಕ ರತ್ನ.ಕಲಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಮೀಡಿಯ ಮೈಂಡ್ ಕ್ರಿಯೇಶನ್ಸ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಧಾರವಾಡ ಇವರ ಸಹಕಾರದೊಂದಿಗೆ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕಥೆಯಾಧಾರಿತ ಟೆಲಿಪಿಲ್ಮ ನಾನು ಲೂಸಿ.ಹಾಗೂ ವೈ.ಬಿ.ಕಡಕೋಳ ಸಂಪಾದಕತ್ವದ ವಚನ ಇಂಚರ.ನೂತರ ಟೆಲಿಪಿಲ್ಮ ಪೋಸ್ಟರ್ ಅನಾವರಣ.ಮತ್ತು ಶ್ರಮಿಕ ರತ್ನ.ಶಿಕ್ಷಕ ರತ್ನ.ಕಲಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು,.ಈ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಮಕ್ಕಳ ಮಹರ್ಷಿ ಶಂಕರ ಹಲಗತ್ತಿ ಉದ್ಘಾಟಿಸಿದರು.ಪೋಸ್ಟರ್ ಬಿಡುಗಡೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ.ಕಿರುಚಿತ್ರ ಬಿಡುಗಡೆಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ.ವಚನ ಇಂಚರ ಕೃತಿಯನ್ನು ಮಹಿಳಾಪರ ಹೋರಾಟಗಾರ್ತಿ ಡಾ.ಇಸಾಬೇಲಾ ಝೇವಿಯರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಧಾರವಾಡ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕಕುಮಾರ ಸಿಂದಗಿ.ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ,ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾದ ಸತೀಶ ತುರಮರಿ.ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾದ ಭೀಮಪ್ಪ ಕಾಸಾಯಿ.ಸವದತ್ತಿ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿದತ್ತಿದಾನಿ ಲೂಸಿ ಸಾಲ್ಡಾನಾ.ಲೇಖಕ ವೈ.ಬಿ.ಕಡಕೋಳ. ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಎಲ್.ಐ.ಲಕ್ಕಮ್ಮನವರ.ಶಿಕ್ಷಕರ ಸಂಘಗಳ ಸಂಸ್ಥೆಗಳ ರಾಜ್ಯಾಧ್ಯಕ್ಷರಾದ ಶ್ರೀಶೈಲ ಗಡದಿನ್ನಿ.ನಿರ್ಮಾಪಕ ಮಲ್ಲಿಕಾರ್ಜುನ ಚರಂತಿಮಠ.ನಿವೃತ್ತ ಮುಖ್ಯ ಶಿಕ್ಷಕರಾದ ಎ.ಎಮ್.ಲೋಬೋ.ಸೋಮನಗೌಡ್ರ ಮಮ್ಮಿಗಟ್ಟಿ.ಆರ್.ಆರ್.ಹುಲ್ಲೂರ.ಎಂ.ಆರ್.ಕಬ್ಬೇರ.ರಮೇಶ ಲಿಂಗದಾಳ.ವ್ಹಿ.ಎನ್.ಕೀರ್ತಿವತಿ.ಚಂದ್ರು ತಿಗಡಿ.ರುದ್ರೇಶ ಕುರ್ಲಿ.ಹಸೀನ ಸಮುದ್ರಿ ಸೇರಿದಂತೆ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಂಕರ ಹಲಗತ್ತಿ ಮಾತನಾಡಿ “ಗುರುವಿನ ಮಹತ್ವವನ್ನು ಅವರ ಶಿಷ್ಯ ಎಲ್.ಐ.ಲಕ್ಕಮ್ಮನವರ ಸಮಾಜಕ್ಕೆ ತಿಳಿಸುವ ಮೂಲಕ ಅಕ್ಷರತಾಯಿ ಲೂಸಿ ಸಾಲ್ಡಾನಾ ಸಂಘಟನೆಯನ್ನು ಹುಟ್ಟು ಹಾಕಿರುವರು.ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ.ವೈ.ಬಿ.ಕಡಕೋಳ ಕೃತಿ ಬಿಡುಗಡೆ ಜೊತೆಗೆ ಟೆಲಿಪಿಲ್ಮ ಗೆ ಕಥೆ ಒದಗಿಸಿದ ಅವರ ಬದುಕಿನ ಪುಟಗಳನ್ನು ನಿರ್ದೇಶಕ ಎಲ್ಲರ ಮನಮುಟ್ಟುವಂತೆ ಚಿತ್ರೀಕರಣ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯವಾಗಿದೆ”ಎಂದು ಅಭಿಪ್ರಾಯಪಟ್ಟರು.
ಡಾ.ಇಸಾಬೆಲಾ ಝೇವಿಯರ್ ಮಾತನಾಡುತ್ತ “ಸಾಲ್ಡಾನಾ ಕ್ರಿಶ್ಚಿಯನ್ ಆದರೂ ಎಲ್ಲ ಧರ್ಮಗಳನ್ನು ತಮ್ಮ ಮೈಮನಗಳಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ಮಹಿಳೆಯಾಗಿದ್ದು ನಮ್ಮ ಮುಂದಿರುವ ಓರ್ವ ಆದರ್ಶ ಮಹಿಳೆ”ಎಂದರು.ರುದ್ರೇಶ ಕುರ್ಲಿ ನಿರೂಪಿಸಿದರು.ಎಲ್.ಐ.ಲಕ್ಕಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರು ತಿಗಡಿ ಸ್ವಾಗತಿಸಿದರು.ವೈ.ಬಿ.ಕಡಕೋಳ ಲೂಸಿ ಸಾಲ್ಡಾನಾ ಅವರ ಕುರಿತು ಇದುವರೆಗೂ ಪ್ರಕಟಿಸಿದ ಹತ್ತು ಕೃತಿಗಳ ಪುನರಾವಲೋಕನ ಮಾಡಿದರು.ಲೂಸಿ ಸಾಲ್ಡಾನಾ ಮಾತನಾಡಿ ಎಲ್ಲರ ಸಹಕಾರ ಪ್ರೀತಿ ವಿಶ್ವಾಸಗಳ ನಡುವೆ ಸಾಗಿದ ತಮ್ಮ ಬದುಕನ್ನು ನೆನೆದರು.ಇದೇ ಸಂದರ್ಭದಲ್ಲಿ ಛಾಯಾಗ್ರಾಹಕ ಬಸವರಾಜ ಗೋಕಾವಿ ಟೆಲಿಪಿಲ್ಮ ಪ್ರದರ್ಶನ ನಡೆಸಿಕೊಟ್ಟರು. ಶ್ರಮಿಕ ರತ್ನ.ಶಿಕ್ಷಕ ರತ್ನ.ಕಲಾ ರತ್ನ. ಉತ್ತಮ ಶಾಲೆ/ಸಂಸ್ಥೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.ಡಾ.ವೀಣಾ ಅವರ ಜೀವನ ಚಿತ್ರಣ ಆಧಾರಿತ ನೂತನ ಟೆಲಿಪಿಲ್ಮ ಪೋಸ್ಟರ್ ಅನಾವರಣಗೊಳಿಸಲಾಯಿತು.
ವಿದ್ಯಾ ದೇವಗಿರಿ ಸ್ವಾಗತ ಗೀತೆ ಹಾಡಿದರು. ಎ.ಎಚ್.ನದಾಫ್ ವಂದಿಸಿದರು.