ಹುಬ್ಬಳ್ಳಿ ನಗರದ ದುರ್ಗದ ಬೈಲ್ ಬ್ರಾಡವೇಯಲ್ಲಿರುವ ಸರ್ಕಾರಿ ಶಾಲೆ ಉಳಿಸಲು ಶಿಕ್ಷಣ ಸಚಿವರಿಗೆ ಅಶೋಕ ಸಜ್ಜನ ಆಗ್ರಹ..
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ ವ್ಯಾಪ್ತಿಯ ದುರ್ಗದ ಬೈಲ್ ಹತ್ತಿರದ ಬ್ರಾಡವೇಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ಈ ಶಾಲೆಯನ್ನು ಮುಚ್ಚಲಾಗುವುದು ಅಥವಾ ಸ್ಥಳಾಂತರಿಸಲಾಗುವುದು ಎಂಬ ಸಂಗತಿ ತಿಳಿದು ನಮಗೆಲ್ಲ ತುಂಬಾ ಆಘಾತವೆನಿಸಿದೆ.
156 ವರ್ಷಗಳ ಶತಮಾನ ಕಂಡ ಶಾಲೆಯಾಗಿದ್ದು ಐವತ್ತಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ.ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಬೆಳೆಸಬೇಕು ಎಂಬ ಆಂದೋಲನ ಹುಬ್ಬಳ್ಳಿ ನಗರದಲ್ಲಿ ಸಹಿ ಸಂಗ್ರಹದ ಮೂಲಕ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘ ಪಾಲಕರು ಸಾರ್ವಜನಿಕರು ಆರಂಭಿಸಿದ್ದಾರೆ.
ಈ ದಿಸೆಯಲ್ಲಿ ತಾವುಗಳು ಈ ಸಂಗತಿಯನ್ನು ಪ್ರಥಮಾಧ್ಯತೆಯಲ್ಲಿ ವಿಶೇಷ ಮುತುವರ್ಜಿವಹಿಸಿ ತತ್ ಕ್ಷಣ ಮಧ್ಯ ಪ್ರವೇಶಿಸಿ ಸದರಿ ಶಾಲೆಯನ್ನು ಮುಚ್ಚದೇ ಸ್ಥಳಾಂತರಿಸದೇ ಕಟ್ಟಡ ಕೆಡವದೇ ಈಗಿರುವ ಜಾಗವನ್ನು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗದಂತೆ ಶಾಲೆಯ ಮುಂದಿರುವ ಜಾಗವನ್ನು ಶಾಲಾ ಆವರಣವೆಂದು ಪರಿಗಣಿಸಿ ಸುತ್ತಲೂ ಕಂಪೌಂಡ ಗೋಡೆ ಕಟ್ಟಿಸಿ ಸದರಿ ಶಾಲಾ ಆಸ್ತಿಯನ್ನು ಶಿಕ್ಷಣ ಇಲಾಖೆಗೆ ಪರಿವರ್ತಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಹುಬ್ಬಳ್ಳಿಯ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ..ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ರಾಜ್ಯ ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮನವರ.ರಾಜ್ಯ ಕಾರ್ಯಾಧ್ಯಕ್ಷರುಗಳಾದ ಶರಣಪ್ಪಗೌಡ್ರ ಆರ್.ಕೆ.ಎಮ್.ವಿ.ಕುಸುಮಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಆಗ್ರಹಿಸಿದ್ದಾರೆ.