ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯು ಪ್ರವಾಹಕ್ಕೆ ತತ್ತರಿಸಿ ಇದೀಗ ವಿವಿಧ ಯೋಜನೆಗಳಲ್ಲಿ ಏಳು ನೂತನ ಕೊಠಡಿಗಳನ್ನು ನಿರ್ಮಿಸಿಕೊಳ್ಳುತ್ತ ಇದೀಗ ಸಮುದಾಯದ ಸಹಭಾಗಿತ್ವದಲ್ಲಿ ಅಂದಾಜು ಎರಡು ಕೋಟಿಗೂ ಅಧಿಕ ಸಕಲ ಸೌಲಭ್ಯ ಸಂಪನ್ಮೂಲ ಕ್ರೋಢೀಕರಿಸಿ ಸ್ಮಾರ್ಟ ಡಿಜಿಟಲ್ ಶಾಲೆಯನ್ನಾಗಿ ಮಾಡಿ ರಾಜ್ಯಕ್ಕೆ ಮಾದರಿಯ ಶಾಲೆಯತ್ತ ಸಾಗುತ್ತಿರುವ ಈ ಶಾಲೆಯ ಎಸ್.ಡಿ.ಎಮ್.ಸಿ.ಎಲ್ಲ ಪದಾಧಿಕಾರಿಗಳ ಪಾಲಕರ ಸ್ಥಳೀಯ ಜನನಾಯಕರ ಶಾಲಾ ಗುರು ವೃಂದದ ಸ್ಮಾರ್ಟ ಡಿಜಿಟಲ್ ಶಾಲಾ ಕ್ರಿಯಾತ್ಮಕ ಯೋಜನೆಯ ಪ್ರಸ್ತಾವನೆ ಸ್ವೀಕರಿಸಿದ ರಾಜ್ಯ ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ(ಸಿಸ್ಲೆಪ್) ಧಾರವಾಡ ಇದರ ನಿರ್ದೇಶಕರಾದ ಡಾ.ಬಿ.ಕೆ.ಎಸ್.ವರ್ಧನ್ ರವರು ಈ ಶಾಲೆ ರಾಜ್ಯಕ್ಕೆ ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಸಿಸ್ಲೆಪ್ ಅಧಿಕಾರಿಗಳಾದ ಶೀಲಾ ಹಾಗೂ ಸ್ವರೂಪಾ ಮತ್ತು ಕ.ಸ.ಗ್ರಾಮೀಣ ಪ್ರಾ.ಶಾ.ಶಿ.ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ. ಎಸ್.ಡಿ.ಎಮ್.ಸಿ.ಅಧ್ಯಕ್ಷ ಪುರದೀರಪ್ಪ ಗಾಳಿ ಸದಸ್ಯರಾದ ವೆಂಕಣ್ಣ ತಳವಾರ ಯುವ ನಾಯಕ ಈಶ್ವರ ಶೆಟ್ಟರ ಉಪಸ್ಥಿತರಿದ್ದರು.