ಒತ್ತಡ ಮುಕ್ತ ಹಾಗೂ ಸಂತಸದಾಯಕ ಕಲಿಕೆಗೆ ಬೊಂಬೆ ಆಧಾರಿತ ಚಟುವಟಿಕೆ ಕಲಿಕೆ ಪರಿಣಾಮಕಾರಿ
ಮೋಹನ ದಂಡಿನ
ಸವದತ್ತಿ : “ಮಕ್ಕಳಲ್ಲಿ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಬೊಂಬೆ ಆಧಾರಿತ ಚಟುವಟಿಕೆ ಕಲಿಕೆ ಒತ್ತಡ ಮುಕ್ತ ಹಾಗೂ ಸಂತಸದಾಯಕ ಕಲಿಕೆ ಆಗಿದೆ.ಇಂದು ತಾಲೂಕು ಮಟ್ಟದ ಪ್ರದರ್ಶನ ಇಲ್ಲಿ ಜರಗುತ್ತಿರುವುದು.ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ ಉತ್ತಮ ಬೋಧನೋಪಕರಣಗಳನ್ನು ವಿಷಯಾಧಾರಿತವಾಗಿ ತಯಾರಿಸಿದ್ದು ಒಂದಕ್ಕಿಂತ ಒಂದು ಉತ್ತಮ ರೀತಿಯಲ್ಲಿ ಮೂಡಿ ಬಂದಿವೆ.ಇದು ಶಿಕ್ಷಕರಲ್ಲಿನ ಕಲ್ಪನೆ ಮತ್ತು ಸೃಜನಶೀಲತೆಗೆ ಹಿಡಿದ ಕೈಗನ್ನಡಿ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದರು.
ಅವರು ತಾಲೂಕಿನ ಮಬನೂರ ಗ್ರಾಮದಲ್ಲಿ ಜರುಗಿದ ಸವದತ್ತಿ ತಾಲೂಕು ಮಟ್ಟದ ಗೊಂಬೆ ಆಧಾರಿತ ಕಲಿಕೋಪಕರಣ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. “ ವಿವೇಕ ಯೋಜನೆಯಡಿಯಲ್ಲಿ ಶಾಲೆಗೆ ಮಂಜೂರಾದ ಕೊಠಡಿಯನ್ನು ಕೂಡಲೇ ನಿರ್ಮಾಣ ಮಾಡಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸಂಪರ್ಕ ಮಾಡಿ ಶೀಘ್ರಗತಿಯಲ್ಲಿ ಕಾಮಗಾರಿಗೆ ಒತ್ತಾಯಿಸವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಶಿಕ್ಷಕರ ಜೊತೆಗೆ ಗುತ್ತಿಗೆ ಆಧಾರಿತ ಶಿಕ್ಷಕರ ನೇಮಕಕ್ಕೂ ಈ ಶಾಲೆಗೆ ಅನುಕೂಲ ಕಲ್ಪಿಸಲಾಗಿದೆ.”ಎಂದು ಮೋಹನ ದಂಡಿನ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಹಾಗೂ ಶಿಕ್ಷಣ ಸ್ಥಾಯೀ ಸಮೀತಿ ಸದಸ್ಯರಾದ ಫಕೀರಪ್ಪ ಹದ್ದನ್ನವರ.ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಂಡಲೀಕ.ಮಳಗಲಿ. ಗ್ರಾಮ ಅಧ್ಯಕ್ಷರಾದ ನಿಂಗವ್ವ ಮೇಟಿ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ.ವ್ಹಿ.ಕುರಿ.ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ಧನಗೌಡರ.ನೋಡಲ್ ಅಧಿಕಾರಿಗಳಾದ ವೀರಯ್ಯ ಹಿರೇಮಠ.ಸಿ.ಆರ್.ಪಿ ಗುರುದೇವಿ ಮಲಕನ್ನವರ.ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಬಂಗಾರವ್ವ ನರಿ ಶಿಕ್ಷಣ ಪ್ರೇಮಿ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಯಲ್ಲಪ್ಪ ನರಿ.ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು.ಎಸ್.ಡಿ.ಎಂ.ಸಿ ಸದಸ್ಯರು.ಪಿ.ಡಿ.ಓ ಆರ್.ಎಸ್.ಚಿಪ್ಪಲಕಟ್ಟಿ ಶಿಕ್ಷಣ ಸಂಯೋಜಕರಾದ ಜಿ.ಎಂ.ಕರಾಳೆ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು.ಬಿ.ಆರ್.ಪಿಗಳು.ಸಿ.ಆರ್.ಪಿಗಳು.ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಪ್ರಭಾರಿ ಮುಖ್ಯಾಪಾಧ್ಯಾಯರಾದ ಹೆಚ್ಚ.ವಾಯ್.ಗೌಡರ.ಸೇರಿದಂತೆ ಗ್ರಾಮದ ಹಿರಿಯರು ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮುಖ್ಯೋಪಾಧ್ಯಾಯರುಗಳು.ಶಿಕ್ಷಕರು ಉಪಸ್ಥಿತರಿದ್ದರು.
ಮಾಜಿ ಜಿಲ್ಲಾ ಪಂಚಾಯತಿ ಹಾಗೂ ಶಿಕ್ಷಣ ಸ್ಥಾಯೀ ಸಮೀತಿ ಸದಸ್ಯರಾದ ಫಕೀರಪ್ಪ ಹದ್ದನ್ನವರ ಮಾತನಾಡುತ್ತ “ ಒಂದು ಕಾಲವಿತ್ತು ಶಿಕ್ಷಣಕ್ಕೆ ಈಗಿನಂತೆ ಹೆಚ್ಚಿನ ಪ್ರಾಶಸ್ತ್ಯರಲಿಲ್ಲ.ನಾನು ಜಿಲ್ಲಾ ಪಂಚಾಯತಿ ಸದಸ್ಯನಾದ ನಂತರ ಶಿಕ್ಷಣ ಸ್ಥಾಯೀ ಸಮೀತಿಯ ಸದಸ್ಯನಾಗಿ ಶೈಕ್ಷಣಿಕ ಕಾರ್ಯಕ್ಕೆ ಜಿಲ್ಲಾ ಪಂಚಾಯತಿಯಿಂದ ಅನುದಾನ ಒದಗಿಸಲು ಸಹಾಯಕವಾಯಿತು.ನಮ್ಮ ಊರಿಗೆ ಹೆಚ್ಚು ಶಿಕ್ಷಕರು ಆಗಮಿಸಿದ್ದು ಕೂಡ ನಮಗೆ ಸಂತಸ ತಂದಿತು.ಈ ವರ್ಷದಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ನಮ್ಮ ಶಾಲೆಯಲ್ಲಿ ಜರುಗಿಸಿದ್ದು ಈಗ ತಾಲೂಕು ಮಟ್ಟದ ಗೊಂಬೆ ಆಧಾರಿತ ಕಲಿಕೋಪಕರಣ ಮೇಳವನ್ನು ನಮ್ಮ ಊರಿನ ಶಾಲೆಯಲ್ಲಿ ಜರುಗಿಸುತ್ತಿರುವುದು ಸಂತಸ ತಂದಿದೆ”ಎಂದು ನುಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ಧನಗೌಡರ ಮಾತನಾಡುತ್ತ “ ಮಬನೂರ ಶಾಲೆಗೆ ಶಿಕ್ಷಕರ ಕೊರತೆಯಾಗಿತ್ತು. ಹೆಚ್ಚುವರಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಮ್ಮಲೇ ಆರು ಜನ ಶಿಕ್ಷಕರು ಬೈಲಹೊಂಗಲ ವಲಯದಿಂದ ಈ ಶಾಲೆಗೆ ಆಗಮಿಸಿದ್ದು ವ್ಹಿ.ಸಿ.ಹಿರೇಮಠ ದಂಪತಿಗಳ ಸಹಿತ ಒಂದು ತಂಡ ಗುಣಾತ್ಮಕ ಶಿಕ್ಷಣ ಚಟುವಟಿಕೆಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಈ ಶಾಲೆಗೆ ಶುಕ್ರದೆಸೆ ಮೂಡಿತು.ಈಗ ಹಲವಾರು ಕೊಠಡಿ ನಿರ್ಮಾಣದ ಜೊತೆಗೆ ಉತ್ತಮ ಪರಿಸರ ನಿರ್ಮಾಣಗೊಂಡಿದ್ದು ಪಂಚಾಯತಿ.ಎಸ್.ಡಿ.ಎಂ.ಸಿ ಯವರ ಸಹಕಾರ ನಿಜಕ್ಕೂ ಅಭಿನಂದನಾರ್ಹ”ಎಂದು ಶ್ಲಾಘಸಿದರು.
ನೋಡಲ್ ಅಧಿಕಾರಿಗಳಾದ ಬಿ.ಆರ್.ಪಿ ವೀರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡುತ್ತ “ಗುಣಾತ್ಮಕ ಕಲಿಕೆಗೆ ಕಲಿಕೋಪಕರಣಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.ಅದರಲ್ಲೂ ನಲಿಕಲಿ ವಿಷಯಾಧಾರಿತ ಚಟುವಟಿಕೆಯುಕ್ತ ಕಲಿಕೆಯಲ್ಲಿ ಬೊಂಬೆಗಳ ತಯಾರಿಕೆ ಮೂಲಕ ಬೋಧನೆ ಬಹಳ ಉಪಯುಕ್ತ.ಮಕ್ಕಳು ಈ ಹಂತದಲ್ಲಿ ಪ್ರಶ್ನೆಗಳನ್ನು ಕೇಳುವ ಉತ್ತರ ಕಂಡುಕೊಳ್ಳುವ ಸಂತಸದಾಯಕ ಕಲಿಕೆ ಅನುಭವಿಸುವರು.ಅಂತಹ ಬೋಧನೋಪಕರಣಗಳು ಇಂದು ಪ್ರತಿ ಕ್ಲಸ್ಟರ್ ಹಂತದಿಂದ ಇಲ್ಲಿ ಒಟ್ಟುಗೂಡಿದ್ದು ಒಂದಕ್ಕಿಂತ ಒಂದು ಭಿನ್ನವಾಗಿವೆ.ಇವುಗಳ ಸದುಪಯೋಗ ಎಲ್ಲರೂ ಮಾಡಿಕೊಳ್ಳಬೇಕು.”ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಗಳಿಗೆ ಅಭಿನಂದನಾ ಪತ್ರಗಳನ್ನು ಸಮಾರೋಪ ಸಮಾರಂಭದಲ್ಲಿ ನೀಡಲಾಯಿತು.ರುಚಿ ಶುಚಿಯಾದ ಅಡುಗೆಯನ್ನು ಅಕ್ಷರದಾಸೋಹ ಸಿಬ್ಬಂದಿ ಮಾಡುವ ಎಲ್ಲರಿಗೂ ಉಣಬಡಿಸಿದ್ದು ಕಾರ್ಯ ಕ್ರಮಕ್ಕೆ ಮೆರಗು ತಂದಿತು.
ಹೆಚ್ ವಾಯ್ ಗೌಡರ ಸ್ವಾಗತಿಸಿ ನಿರೂಪಿಸಿದರು.ಪಲ್ಲವಿ ನರಿ ಹಾಗೂ ಸಂಗಡಿಗರಿಂದ ಪ್ರಾರ್ಥನಾ ಗೀತೆ ಜರುಗಿತು.ಗುರುದೇವಿ ಮಲಕನ್ನವರ ವಂದಿಸಿದರು.