ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ BEO – ನಿವೃತ್ತ ಶಿಕ್ಷಕರೊಬ್ಬರಿಗೆ ಪಿಂಚಿಣಿ ಸೆಟಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿದ್ಯಾ ಕುಂದರಗಿ ಟ್ರ್ಯಾಪ್..
ಹುಬ್ಬಳ್ಳಿ:
ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣವನ್ನು ಸೆಟಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾ ಯಕ್ತ ಬಲೆಗೆ ಬಿದ್ದ ಘಟನೆ ಕುಂದಗೋಳದಲ್ಲಿ ನಡೆದಿದೆ.
ತಮ್ಮ ಪಿಂಚಣಿ ದಾಖಲೆ ಮತ್ತು ವೇತನ ಕುರಿತಂತೆ ಬಿಇಓ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ್ದರು.ಈ ಒಂದು ಕುರಿತಂತೆ ಸಮಸ್ಯೆಯನ್ನು ಸರಿ ಮಾಡಲು ಬಿಇಓ ವಿದ್ಯಾ ಕುಂದರಗಿ 10 ಸಾವಿರ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.
ಅಂತಿಮವಾಗಿ 8 ಸಾವಿರ ರೂಪಾಯಿ ಕೊಡಲು ಒಪ್ಪಿದ್ದರು.ಈ ಒಂದು ವಿಚಾರ ಕುರಿತಂತೆ ನಿವೃತ್ತ ಶಿಕ್ಷಕ ಧಾರವಾಡ ಲೋಕಾಯುಕ್ತರಿಗೆ ದೂರನ್ನು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಲೋಕಾಯುಕ್ತರು 8 ಸಾವಿರ ರೂಪಾಯಿ ಹಣವನ್ನು ತಗೆದುಕೊಳ್ಳುವಾಗ ಬಿಇಓ ವಿದ್ಯಾ ಕುಂದರಗಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅವರ ಮಾರ್ಗದರ್ಶನದಲ್ಲಿ ಡಿಎವೈಎಸ್ಪಿ ಶಂಕರ ರಾಗಿ ಪಿಐ ಬಸವರಾಜ ಮುಕರ್ತಿಹಾಳ ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದುಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಸಧ್ಯ 8 ಸಾವಿರ ರೂಪಾಯಿಗಳೊಂದಿಗೆ ಬಿಇಓ ಅವರನ್ನು ವಶಕ್ಕೆ ತಗೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.