ಅಶೋಕಪಥ ಅಭಿನಂದನಾ ಗ್ರಂಥಕ್ಕೆ ಲೇಖನಗಳನ್ನು ಆಹ್ವಾನಿಸಿದ ಗ್ರಾಮೀಣ ಶಿಕ್ಷಕರ ಸಂಘ..
ಅಶೋಕ ಸಜ್ಜನ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕ.ಸ.ಗ್ರಾ, ಪ್ರಾಶಾ.ಶಿ.ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ, ಹಿರಿಯ ಶಿಕ್ಷಕರು ಸ.ಹಿ.ಪ್ರಾ.ಕ.ಹೆ.ಶಾಲೆ ಹೆಬಸೂರ, ಸ್ವಗ್ರಾಮ ಇಂಗಳಹಳ್ಳಿ ಹಾಗೂ ಉಣಕಲ್ಲ, ತಾ. ಹುಬ್ಬಳ್ಳಿ ಇವರು ದಿ. 31-01-2024 ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು.ಸದರಿಯವರ ಅಭಿನಂದನ ಸಮಾರಂಭವನ್ನು ರವಿವಾರ ದಿ. 11-2-2024 ರಂದು ಸವಾಯಿ ಗಂಧರ್ವ ಕಲಾಮಂದಿರ,ದೇಶಪಾಂಡೆನಗಹುಬ್ಬಳ್ಳಿಯಲ್ಲಿ ರಾಜ್ಯ ಸಂಘ ಎಲ್ಲಾ ಜಿಲ್ಲಾ ಸಂಘಗಳು ಹಾಗೂ ಸಜ್ಜನ – ಹೊಸಗಾಣಿಗೇರ ಪರಿವಾರದ ಆಶ್ರಯದಲ್ಲಿ ರಾಜ್ಯ ಮಟ್ಟದ ಅಭಿನಂದನ ಸಮಾರಂಭ ಆಯೋಜಿಸುತ್ತಿದ್ದು, ಈ ದಿಸೆಯಲ್ಲಿ ಶಿಕ್ಷಕ ಸಾಹಿತಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಅವರ ಕನಸಿನ ‘ಅಶೋಕಪಥ’ ಪುಸ್ತಕ ವಾಯ್, ಬಿ. ಕಡಕೋಳ ಇವರ ಸಂಪಾದಕತ್ವದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ.
ಆದ್ದರಿಂದ ಅಶೋಕ ಸಜ್ಜನ ಅವರ ಕುರಿತು ಅವರ ವೃತ್ತಿ ಬಾಂಧವರು, ಸಮುದಾಯದವರು, ಬಂಧುಗಳು, ಮಿತ್ರರು, ಗಣ್ಯರು ಅನಿಸಿಕೆ ಅಭಿಪ್ರಾಯ ಲೇಖನ ಕವನ, ಶುಭಸಂದೇಶ, ಆಶಯನುಡಿ, ಅವರ ವೃತ್ತಿ ಜೀವನ, ನಿತ್ಯ ಜೀವನದ ಕುರಿತು ಸ್ವಂತ ಲೇಖನ ಕವನ ಕಳುಹಿಸಿಕೊಡಲು ಅಭಿನಂದನ ಸಮಿತಿಯ ಅಧ್ಯಕ್ಷ ಧರ್ಮಣ್ಣ ಭಜಂತ್ರಿ.ಗ್ರಾಮೀಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಕಾರ್ಯಾಧ್ಯಕ್ಷರುಗಳಾದ ಶರಣಪ್ಪಗೌಡ್ರ ಆರ್.ಕೆ.ಎಮ್.ವಿ.ಕುಸುಮಾ.ಮಹಾ ಪೋಷಕರಾದ ಎಮ್.ಆಯ್.ಮುನವಳ್ಳಿ ಸಲಹಾ ಸಮಿತಿ ಅಧ್ಯಕ್ಷ ಗೋವಿಂದ ಜುಜಾರೆ ಶಿಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಮೇಟಿ.ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಉಕ್ಕಲಿ ವಿನಂತಿಸಿದ್ದಾರೆ.
ಲೇಖನ ಕವನಗಳನ್ನು yallappakadakol12@gmail. com ಮೇಲ್ ಮಾಡಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನ ಉಪ್ಪಿನ : 9741340206 ಎಲ್. ಐ. ಲಕ್ಕಮ್ಮನವರ : 9880454233 ಅಕ್ಬರಲಿ ಸೋಲಾಪುರ : 7975605054 ಸಂಪರ್ಕಿಸಲು ಕೋರಿದ್ದಾರೆ.