ಪಬ್ಲಿಕ್ಟುಡೆ ನ್ಯೂಸ್ ಡೆಸ್ಕ…
ಸಂಕೇಶ್ವರ: ಸಮೀಪದ ಸೋಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೆ.ಕೆ.ಶಾಸ್ತ್ರಿ ಅವರನ್ನು ಕರ್ತವ್ಯಲೋಪ ಆರೋಪದ ಮೇರೆಗೆ ಚಿಕ್ಕೊಡಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಮ್ ಎಮ್ ಹಂಚಾಟೆ ಅವರು ಅಮಾನತ್ ಮಾಡಿ ಆದೇಶ ಮಾಡಿದ್ದಾರೆ..
ಶಾಲೆಯ ಮುಖ್ಯ ಶಿಕ್ಷಕರ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ವಿತರಿಸಿರಿರುವುದು ಜೊತೆಗೆ ಬಿಸಿ ಊಟದ ಆಹಾರ ಸಾಮಗ್ರಿ ಖರ್ಚು ಹಾಗೂ ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರವರ್ಹಿಸದೆ ಇರುವುದು ಹಾಗೂ ಮೆಲಾಧಿಕಾರಿಗಳ ಅನುಮತಿ ಪಡೆಯದೆ ರಜೆಯ ಮೆಲೆ ಹೋಗಿರುವುದು ಕಂಡು ಬಂದಿದಿದ್ದರಿಂದ ಮುಖ್ಯ ಶಿಕ್ಷಕರನ್ನು ಅಮಾನತ್ ಮಾಡಲಾಗಿದೆ..
ಮುಖ್ಯ ಶಿಕ್ಷಕರು ಪಾನಮತ್ತರಾಗಿ ಶಾಲೆಗೆ ಬರುತ್ತಿದ್ದರು ಎಂದು ಸ್ಥಳಿಯರು ಆರೋಪಿಸಿದ್ದಾರೆ.. ಅನುದಾನ ಸುರ್ಬಳಕೆಯನ್ನು ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ..