ಟೆರಸ್ ಮೇಲೆ ಕ್ರಿಕೇಟ ಆಡುವಾಗ ಲೈನ್ ಮೇಲೆ ಜಾರಿ ಬಿದ್ದು ಹತ್ತನೆ ತರಗತಿ ವಿದ್ಯಾರ್ಥಿನಿ ಸಾವು!! ಗೆಳೆಯನನ್ನು ಉಳಿಸಲು ಹೋದ ಇನ್ನೊರ್ವ ವಿದ್ಯಾರ್ಥಿಗೆ ಗಂಭೀರಗಾಯ..
ಧಾರವಾಡ: ಟೆರೇಸ್ ಮೆಲೆ ಕ್ರಿಕೇಟ್ ಆಡುವಾಗ ಲೈನ್ ಮೆಲೆ ಬಿದ್ದು ವಿದ್ಯಾರ್ಥಿಯೋರ್ವ ಸಾವಿಗೀಡಾದ ಘಟನೆ ಧಾರವಾಡದ ಮದಿಹಾಳ ಕಾಲನಿಯಲ್ಲಿ ಸಂಭವಿಸಿದೆ.
ರಾಜೀವಗಾಂಧಿ ಸಿಬಿಎಸ್ಸಿ ಶಾಲೆಯ ಹತ್ತನೇ ವರ್ಗದ 16 ವರ್ಷದ ಶ್ರೆಯಸ್ ಸಿನ್ನೂರು ಎಂಬ ಬಾಲಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ.
ಮೊದಲನೇಯ ಮಹಡಿಯ ಮೆಲೆ ಕ್ರಿಕೆಟ್ ಆಡುವಾಗ ಘಟನೆ ನಡೆದಿದೆ. ಬಾಲ್ ಹಿಡಿಯಲು ಹೋದಾಗ ಬಾಲ ಮೇಲೆ ಕಾಲಿಟ್ಟ ತಕ್ಷಣ ಜಾರಿ ಲೈನ್ ಮೇಲೆ ಬಿದ್ದ ಪರಿಣಾಮ ಶ್ರೆಯಸ್ ಸಿನ್ನೂರು ಸಾವಿಗೀಡಾಗಿದ್ದಾನೆ.
ಶ್ರೇಯಸ್ನ ಬಿಡಿಸಲು ಹೋದ ಇನ್ನೋರ್ವ ಬಾಲಕನಿಗೂ ಶಾಕ್ ತಗುಲಿದ್ದು, ಬಾಲಕನನ್ನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಧಾರವಾಡ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.