ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಾ ಮಟ್ಟದ ಮಕ್ಕಳ ಗಣಿತ ಸ್ಪರ್ಧೆಗಳ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮ
“ಶಾಲೆಗಳು ಸಮುದಾಯದ ಕನ್ನಡಿ.ಸಮುದಾಯದ ಸಮರ್ಥ ಸಹಭಾಗಿತ್ವದಿಂದ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ಲಕ್ಷ್ಮೇಶ್ವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮಾರ ಅಭಿಪ್ರಾಯಪಟ್ಟರು. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಕ್ಷರ ಫೌಂಡೇಶನ್ ಮತ್ತು ಗ್ರಾಮ ಪಂಚಾಯತಿ ಅಡ್ರಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಡ್ರಕಟ್ಟಿಯಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳ ಗಣಿತ ಸ್ಪರ್ಧೆಯ ತಾಲೂಕಾ ಮಟ್ಟದ ಸಾಂಕೇತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇನ್ನೋರ್ವ ಉದ್ಘಾಟಕರಾಗಿ ಭಾಗವಹಿಸಿದ ಜಿ.ಎಂ.ಮುಂದಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಮಾತನಾಡಿ ” ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ 28 ಗ್ರಾಮ ಪಂಚಾಯಿತಿಗಳ ಪೈಕಿ 121 ಶಾಲೆಗಳಲ್ಲಿನ 4,5 ಹಾಗೂ 6ನೇ ತರಗತಿಗಳ ಒಟ್ಟು 4,465 ವಿದ್ಯಾರ್ಥಿಗಳಿಗೆ ಇಂದು ಪಂಚಾಯತಿ ಮಟ್ಟದಲ್ಲಿ ಏಕಕಾಲಕ್ಕೆ ಗಣಿತ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಡರಕಟ್ಟಿಯ ಅಧ್ಯಕ್ಷೆ ಶ್ರೀಮತಿ ಪ್ರೇಮಕ್ಕ ಮಾನಪ್ಪ ಲಮಾಣಿ ಮಾತನಾಡಿ “ಅಡರಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಅಡರಕಟ್ಟಿ,ಹರದಗಟ್ಟಿ ಹಾಗೂ ಕೊಂಡಿಕೊಪ್ಪ ಸರ್ಕಾರಿ ಶಾಲೆಗಳಲ್ಲಿ ಪಂಚಾಯಿತಿಯಿಂದ ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ವ ರೀತಿಯಿಂದ ಸಹಕಾರ ನೀಡಲಾಗುತ್ತಿದೆ” ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಚ್.ಪಾಟೀಲ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಹರ್ಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಭಂಗಿ, ಸದಸ್ಯ ಕುಮಾರಣ್ಣ ಚಕ್ರಸಾಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ತಾಲೂಕ ನೋಡಲ್ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ ಲಮಾಣಿ,ಪಿ.ಡಿ.ಓ ಶ್ರೀಮತಿ ಸವಿತಾ ಸೋಮಣ್ಣವರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್.ಕೆ.ಡಂಬಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿ ಎಂ.ಎಸ್.ಹಿರೇಮಠಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ಎಚ್.ಉಮಚಗಿ ಸ್ವಾಗತಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಡಿ.ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪಿ.ಸಿ.ಕಾಳಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶ್ರೀಮತಿ ಎಂ.ವಾಯ್. ನೀಲನಾಯ್ಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಎಸ್.ಕೆ.ಅಮ್ಮಿನಭಾವಿ, ಶ್ರೀಮತಿ ಎಸ್.ಸಿ.ಹಿರೇಮಠ,ಶ್ರೀಮತಿ ಎಸ್.ಎಂ.ಕೌಜಗೇರಿ,ಶ್ರೀಮತಿ ಪಿ.ಬಿ.ಗುರುಮಠ, ಎನ್.ಎಫ್.ಸಜ್ಜನರ,ಎಸ್.ಆರ್.ನದಾಫ್, ಶ್ರೀಮತಿ ಪಿ.ಪಿ.ಸುಗನಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.