ಅಡುಗೆ ಮಾಡುವುದರ ಜೊತೆಗೆ ಅದನ್ನು ಸಂರಕ್ಷಿಸುವ ಜವಾಬ್ದಾರಿ ಮಹತ್ವದ್ದು
ಮೋಹನ ದಂಡಿನ
ಸವದತ್ತಿ ;’ನಾವು ಎಷ್ಟೇ ಆರಿವು ಹೊಂದಿದ್ದರೂ ಕೆಲವು ಮುಂಜಾಗೃತಾ ಕ್ರಮಗಳು ಮುಖ್ಯ. ಅಡುಗೆ ಮಾಡುವುದರ ಜೊತೆಗೆ ನಿರ್ವಹಿಸಬೇಕಾದ ಇನ್ನಿತರ ಪ್ರಮುಖ ಕೆಲಸಗಳ ಬಗ್ಗೆಯೂ ನಿಗಾ ವಹಿಸುವುದು ಮಹತ್ವದ್ದು.ಯಾವುದೇ ಅಹಿತಕರ ಘಟನೆ ಜರುಗದಂತೆ ಕಾರ್ಯ ನಿರ್ವಹಿಸುವುದು ಮುಖ್ಯ’ ಎಂದು ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಕರೆ ನೀಡಿದರು. ಅವರು ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಜರುಗಿದ ಅಕ್ಷರ ದಾಸೋಹ ಯೋಜನೆಯ ಅಡುಗೆಯವರ ತರಬೇತಿ ಉದ್ದೇಶಿಸಿ ಮಾತನಾಡಿದರು.
“ ಅಡುಗೆ ತಯಾರಿಸುವ ಜೊತೆಗೆ ಮಕ್ಕಳ ಪ್ರತಿದಿನ ಊಟ ಬಡಿಸುವಾಗ ಮುಂಜಾಗೃತೆ ಮುಖ್ಯ.ಮಕ್ಕಳ ಪೌಷ್ಟಿಕಾಂಶ ಮಾತ್ರೆ ನೀಡುವುದು.ಮೊಟ್ಟೆ ಬಾಳೆಹಣ್ಣು ಚಕ್ಕಿ ವಿತರಣೆ ಮಹತ್ವದ್ದು ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಮಕ್ಕಳಿಗೆ ಸಮರ್ಪಕವಾಗಿ ದೊರೆಯಬೇಕು. ಉತ್ತಮ ಅಡುಗೆ ತಯಾರಿಕೆ ಜೊತೆಗೆ ಶುಚಿತ್ವದ ಕಡೆಗೂ ಮಹತ್ವ ಗಮನ ಹರಿಸುವುದು ಮುಖ್ಯ ಎಂದು ಅಕ್ಷರ ದಾಸೋಹ ಯೋಜನೆಯ ತಾಲೂಕಿನ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಎಫ್ ಜಿ ನವಲಗುಂದ ಕುಶಾಲ್ ಮುದ್ದಾಪುರ. ಶಿಕ್ಷಣ ಸಂಯೋಜಕರಾದ ಜಿ ಎಂ ಕರಾಳೆ. ಮುಖ್ಯೋಪಾಧ್ಯಾಯರಾದ ಎಸ್.ವ್ಹಿ.ಜೋಶಿ.ಕೆ.ಎಸ್.ಸಿಂದೋಗಿ ಎಂ. ಎಲ್. ಕುಂಕುಮಗಾರ.ಪಿ.ಆರ್.ಹೆಮ್ಮರಡಿ. ಗಿರೀಶ ಮುನವಳ್ಳಿ ಸೇರಿದಂತೆ ವಿವಿಧ ಶಾಲೆಗಳಿಂದ ತರಬೇತಿಗೆ ಆಗಮಿಸಿದ್ದ ಅಡುಗೆದಾರರು ಉಪಸ್ಥಿತರಿದ್ದರು. ಕುಶಾಲ್ ಮುದ್ದಾಪುರ ಸ್ವಾಗತಿಸಿದರು. ಎಫ್ ಜಿ ನವಲಗುಂದ ವಂದಿಸಿದರು.