ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ!! ಗಂಬೀರವಾಗಿ ಗಾಯಗೊಂಡ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು..ಮಾನ್ಯ ಶಿಕ್ಷಣ ಸಚಿವರೇ ಗಮನಿಸಿ…
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲಿಯೇ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ…
ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಖಾಸಗಿ ಶಾಲೆ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.10ನೇ ತರಗತಿ ವಿದ್ಯಾರ್ಥಿ ಧನುಷ್ ಶಿಕ್ಷಕನಿಂದ ಹಲ್ಲೆಗೊಳಗಾದ ಬಾಲಕ.ಶಿಕ್ಷಕ ಲೋಕೇಶ್ ವಿದ್ಯಾರ್ಥಿಯ ಬೆನ್ನು, ಕಾಲು, ತೊಡೆಗೆ ಬಾಸುಂಡೆ ಬರುವಂತೆ ಕೊಲಿನಿಂದ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ಧನುಷ್ ತಾಯಿ ಕೂಡ ಬಂದಿದ್ದರು. ವಿದ್ಯಾರ್ಥಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ತಾನು ತಯಾರಿಸಿದ್ದ ವಿಜ್ಞಾನದ ಮಾಡೆಲ್ ಗಳನ್ನು ಚಿತ್ರೀಕರಿಸಿದ್ದ. ಇದೇ ವಿಚಾರವಾಗಿ ಕೋಪಗೊಂಡ ಶಿಕ್ಷಕ ಲೋಕೇಶ್ ವಿದ್ಯಾರ್ಥಿಯನ್ನು ಮನಬಂದಂತೆ ಹೊಡೆದಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ವಿದ್ಯಾರ್ಥಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗನ ಮೇಲೆ ಮನಬಂದಂತೆ ಹೊಡೆದಿದ್ದಕ್ಕೆ ಪೋಷಕರು ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ಶಿಕ್ಷಕ ಲೋಕೇಶ್ ಪೋಷಕರ ಮೇಲೂ ದರ್ಪ ತೋರಿದ್ದಾರೆ. ಶಿಕ್ಷಕನ ವರ್ತನೆಗೆ ಪೋಷಕರು ಆಡಳಿತ ಮಂಡಳಿಗೆ ದೂರಿದ್ದಾರೆ. ಅಲ್ಲದೇ ವಿನೋಬಾನಗರ ಠಾಣೆಗೂ ದೂರು ನೀಡಿದ್ದಾರೆ.