ಶಿಕ್ಷಕರ ಸಂಘದ ರಾಜ್ಯಾದ್ಯಕ್ಷಕರ ಕಾರು ಕಳ್ಳತನ!!
ಮನೆ ಮುಂದೆ ನಿಲ್ಲಿಸಿದ್ದ ಕಾರು,ಬೆಳಗಾಗುವುದರಲ್ಲಿ ನಾಪತ್ತೆ..
ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ಹೆಸರಿನಲ್ಲಿದ್ದ ಕಾರು ಭಾನುವಾರ ರಾತ್ರಿ ಕಳ್ಳತನವಾಗಿದೆ.ಸಂಘದ ರಾಜ್ಯಾಧ್ಯಕ್ಷ ನಾನೇ ಇದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ನನಗೆ ಸಂಘದಿಂದ ನೀಡಲಾಗಿದ್ದ ಕಾರು ನಾಪತ್ತೆಯಾಗಿದೆ.
ಕಾರಿನ ಒಂದು ಕೀಲಿ ನನ್ನ ಬಳಿ, ಇನ್ನೊಂದು ಕೀಲಿ ಕಚೇರಿಯಲ್ಲಿತ್ತು.ಸೋಮವಾರ ಬೆಳಿಗ್ಗೆ ನೋಡಿದಾಗ ನನ್ನ ಮನೆ ಬಳಿ ಕಾರು ಇರಲಿಲ್ಲ ಎಂದು ಇಲ್ಲಿನ ಶಂಭುಲಿಂಗನಗೌಡ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.
ಕಾರು ಯಾರು ಕದ್ದುಕೊಂಡು ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ಕಾರು ಬೆಂಗಳೂರಿನಲ್ಲಿರುವ ಸಂಘದ ಕಚೇರಿ ಬಳಿಯಿದೆ ಎನ್ನುವ ಮಾಹಿತಿಯಿದೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡುವೆ ಎಂದು ಅವರು ಹೇಳಿದರು.
ಕೆ.ಎ.50, ಎಂಬಿ 0382 ಕಾರಿನ ಸಂಖ್ಯೆ ಕಾರು ಕಳ್ಳತನವಾಗಿದೆ
ಘಟನೆ ವಿವರ: ಕೆಲ ತಿಂಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಾರು ಎನ್ನುವುದು ಗೊಂದಲವಾಗಿತ್ತು. ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ.
ಸಂಘಕ್ಕೆ ತಾವೇ ಅಧ್ಯಕ್ಷರೆಂದು ಮಂಡ್ಯದ ನಾಗೇಶ ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಜಿಲ್ಲಾಧ್ಯಕ್ಷರ ಸಭೆ ನಡೆಸಿದ್ದಾರೆ. ಕಾರು ಯಾರೇ ತೆಗೆದುಕೊಂಡು ಹೋಗಿರಲಿ, ನನಗೆ ಗಮನಕ್ಕೆ ತರಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.