ಮುನವಳ್ಳಿ ವಲಯದ ಫಿಸಿಯೋಥೆರಪಿ ಕಾರ್ಯ
ಮುನವಳ್ಳಿ: “ಭೌತಿಕ ಚಿಕಿತ್ಸೆಗಳು ಜೀವನದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ಅವರ ಸ್ವಾತಂತ್ರವನ್ನು ಮರಳಿ ಪಡೆಯಲು ಅಧಿಕಾರ ನೀಡುತ್ತದೆ. ಗಾಯದಿಂದ ಗುಣಮುಖವಾಗಲು ಅಥವಾ ದೀರ್ಘ ಆರೋಗ್ಯ ಪರಿಸ್ಥಿತಿ ನಿರ್ವಹಣೆ ಅಥವಾ ಚಲನಶೀಲತೆ ಹೆಚ್ಚಿಸಲು ದೈಹಿಕ ಸವಾಲುಗಳಿಂದ ಹೊರಬರಲು ಈ ಚಿಕಿತ್ಸೆಗಳು ಸಾಕಷ್ಟು ಸಹಾಯ ಮಾಡುತ್ತದೆ”.ಎಂದು ಫಿಸಿಯೋಥೆರಪಿಸ್ಟ ಡಾ. ಸೋನಾಲಿ ಬಂಡೂರಕರ್ ತಿಳಿಸಿದರು.
ಅವರು ಪಟ್ಟಣ ದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸಮನ್ವಯ ಶಿಕ್ಷಣ ಯೋಜನೆಯಡಿ ಮುನವಳ್ಳಿ ಸಿಂದೋಗಿ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಕಾರ್ಯ ವನ್ನು ಕುರಿತು ಪಾಲಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುನವಳ್ಳಿ ವಲಯದ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾದ ಸಿ. ವ್ಹಿ.ಬಾರ್ಕಿ.ಯರಗಟ್ಟಿ ವಲಯದ ಸಮನ್ವಯ ಸಂಪನ್ಮೂಲ ಶಿಕ್ಷಕರಾದ ವೈ. ಬಿ. ಕಡಕೋಳ. ಮುರಗೋಡ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ. ಎಲ್. ಭಜಂತ್ರಿ. ಮುಖ್ಯೋಪಾಧ್ಯಾಯ ರಾದ ಭವಾನಿ ಖೊಂದುನಾಯ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಾಲಕರಿಗೆ ಫಿಸಿಯೋಥೆರಪಿ ಕಾರ್ಯ ಮಾಡುವ ವಿಧಾನವನ್ನು ಸ್ವತಃ ಮಾಡುವ ಮೂಲಕ ಮನೆಯಲ್ಲಿ ದಿನನಿತ್ಯದ ಬದುಕಿನಲ್ಲಿ ಆ ಮಕ್ಕಳ ಫಿಸಿಯೋಥೆರಪಿ ಕಾರ್ಯ ಕೈಗೊಳ್ಳುವ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಭವಾನಿ ಖೊಂದುನಾಯ್ಕ ಸ್ವಾಗತಿಸಿದರು. ಸಿ. ವ್ಹಿ. ಬಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ. ಬಿ. ಕಡಕೋಳ ನಿರೂಪಿಸಿದರು. ಡಿ. ಎಲ್. ಭಜಂತ್ರಿ ವಂದಿಸಿದರು