ಹೆಬ್ಬಳ್ಳಿಯಲ್ಲಿ ವಿಕಲಚೇತನರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ..
ಧಾರವಾಡ ಜಿಲ್ಲೆ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗ್ರಾಮ್ ಆರೋಗ್ಯ ಯೋಜನೆ ಅಡಿ ವಿಕಲಚೇತನರಿಗೆ ವಿಶೇಷ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಒಂದು ಕಾರ್ಯಕ್ರಮದಲ್ಲಿ ಮಧುಮೇಹ ರಕ್ತದೊತ್ತಡ ರಕ್ತ ಹೀನತೆ ಕ್ಷಯ ರೋಗ ಎತ್ತರ ತೂಕ ಪರೀಕ್ಷೆಯನ್ನು ಮಾಡಲಾಯಿತು..
ವಿಕಲಚೇತನರು ಹೊಂದಿರುವ ಆರೋಗ್ಯ ಸಮಸ್ಯೆಗಳನ್ನು ಕುರಿತು ಪರೀಕ್ಷಿಸಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫಾರಸ್ ಮಾಡಲಾಯಿತು ಈ ಕಾರ್ಯಕ್ರಮದ ಸದುಪಯೋಗವನ್ನು ಸುಮಾರು 53 ಜನ ಪಡೆದುಕೊಂಡಿದ್ದು ಪಂಚಾಯತ್ ನ ಸಿಬ್ಬಂದಿ ವರ್ಗ ಸೇರಿದಂತೆ ಪಿ. ಸ್ ಕೊನಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು. ಜಯಶ್ರೀ ಬಡಿಗೇರ್ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಗಿರಿಜಾ ಹೊಸವಾ ಳ ಕೆ. ಎಚ್. ಪಿ .ಟಿ ತಾಲೂಕ ಸಂಯೋಜಕರು ಗ್ರಾಮ ಆರೋಗ್ಯ. ಶಿವಾನಂದ್ ಮಾರಡಗಿ ಪುನರ್ವಸತಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಭಾಗವಹಿಸಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.