ಕೇವಲ ಐದು ಸಾವಿರ ರೂಪಾಯಿಗೆ ಕೈ ಚಾಚಿ ಲೋಕಾಯುಕ್ತ ಪೋಲಿಸರ್ ಅತಿಥಿಯಾದ ಸರಕಾರಿ ಅಧಿಕಾರಿ…
ದಾವಣಗೆರೆ:ಜಮೀನಿನ ಪಹಣಿ, ಆಕಾರ್ ಬಂದ್ ತಾಳೆ ಸರಿಪಡಿಸಿಕೊಡಲು
5 ಸಾವಿರ ರೂಪಾಯಿ ಲಂಚ ಪಡೆ ಯುತ್ತಿದ್ದ ಚನ್ನಗಿರಿ
ತಾಲೂಕು ಚೇರಿಯ ಆರ್.ಆರ್.ಟಿ. ಶಾಖೆಯ ಶಿರಸ್ತೇದಾರ್‌ರನ್ನು
ಶುಕ್ರವಾರ ಲೋಕಾ ಯುಕ್ತ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕು ಕಚೇರಿಯ ಆರ್.ಆರ್.ಟಿ. ಶಾಖೆಯ
ಶಿರಸ್ತೇದಾರ್ ಸುಧೀರ್ ಲೋಕಾಯುಕ್ತರ ಬಲೆಗೆ ಬಿದ್ದವರು.
ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ಲೋಹಿತ್ ಕುಮಾರ್
ಎಂಬುವರು ಅವರ ಅಕ್ಕನ ಮಗಳಾದ ಮೇಘನಾ ಎಂಬುವರಿಗೆ
ಸೇರಿದ ಮರಡಿ ಗ್ರಾಮದಲ್ಲಿನ ಸರ್ವೇ ನಂಬರ್ 42/1ರಲ್ಲಿ 7 ಗುಂಟೆ ಜಮೀನಿನ ದಾಖಲಾತಿಗಾಗಿ ಜಮೀನಿನ ಪಹಣಿ,
ಆಕಾರ್ ಬಂದ್ ತಾಳೆ ಸರಿಪಡಿಸಿಕೊಡಲು ಅರ್ಜಿ ಸಲ್ಲಿಸಿದ್ದರು.
ಶಿರಸ್ತೇದಾರ್ ಸುಧೀರ್ ಐದು ಸಾವಿರ ರೂಪಾಯಿ ಲಂಚಕ್ಕೆ
ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಲೋಹಿತ್ ಕುಮಾರ್
ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಶುಕ್ರವಾರ ತಾಲೂಕು
ಕಚೇರಿಯಲ್ಲೇ ೫ ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ
ದಾಳಿ ನಡೆಸಿದ ಲೋಕಾಯುಕ್ತರು ಶಿರಸ್ತೇದಾರ್ ಸುಧೀರ್ ಅವರನ್ನು ಬಂಧಿಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ
ಎಂ.ಎಸ್. ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್
ನಿರೀಕ್ಷಕರಾದ ಎಚ್.ಎಸ್. ರಾಷ್ಟ್ರಪತಿ, ಸಿ. ಮಧುಸೂಧನ್,
ಪ್ರಭು ಬಿ. ಸೂರಿನ, ಸಿಬ್ಬಂದಿಗಳಾದ ವೀರೇಶಯ್ಯ, ಆಂಜನೇಯ,
ಲಿಂಗೇಶ್, ಮಲ್ಲಿಕಾರ್ಜುನ್, ಧನರಾಜ್, ಕೋಟಿನಾಯ್ಕ, ಕೃಷ್ಣನಾಯ್ಕ,
ಬಸವರಾಜ್ ದಾಳಿ ನಡೆಸಿದರು.