ಮಕ್ಕಳ ದಿನಾಚರಣೆ
ಒಂದು ಊರಿನಲ್ಲಿ ಓರ್ವ ಅಜ್ಜಿ ಇದ್ದಳು. ಅವಳು ಮರದ ಕೆಳಗೆ ಕುಳಿತು ಹಣ್ಣು ಮಾರುತ್ತಿದ್ದಳು.ಒಂದು ದಿನ ಕೆಂಪು ದೀಪದ ಕಾರಿನಿಂದ ಸೂಟು ಬೂಟು ಧರಿಸಿದ ಯುವಕನೊಬ್ಬ ಅಜ್ಜಿಯ ಹತ್ತಿರ ಹೋಗಿ ಕುಳಿತ, ಅಜ್ಜಿ ಹೇಗೆ ಇದ್ದೀಯಾ ,? ಈ ವಯಸ್ಸಿನಲ್ಲಿಯೂ ಯಾಕೆ ಕೆಲಸ ಮಾಡುವೆ.? ಅಂತ ಕೇಳಿದ.ಆಗ ಅಜ್ಜಿ “ಯಾರಪ್ಪ ನೀವು ಬಡವಿ ಹತ್ತಿರ ಏನು ಕೆಲಸ ?” ಏನ್ನುತ್ತಿರಲು ,ಆತ
“ಅಜ್ಜಿ ನಾನು ನಿಮ್ಮ ಪಕ್ಕದ ಮನೆಯ ಸಂತೋಷ. ಚಿಕ್ಕ ವಯಸ್ಸಿನಲ್ಲಿ ಅನಾಥನಾದ ನನಗೆ ಊಟ ಆಶ್ರಯ ಕೊಟ್ಟು ಶಾಲೆಗೆ ಹೋಗಲು ಪ್ರೇರೇಪಿಸಿದ್ದು .ನೀವು.ನಿಮ್ಮನ್ನು ಮರೆಯಲು ಸಾಧ್ಯವೇ. ? ನನ್ನ ಪಾಲಿನ ಆದರ್ಶ ನೀವು.
ಅಂದು ನೀವು ನನಗೆ “ನಾಳೆ ನಿಮ್ಮದು”. ಎಂದು ಹೇಳಿರುವುದು ಮರೆಯಲು ಸಾಧ್ಯವೇ…?..ಎಂದು ಅಜ್ಜಿ ಯ ಕಾಲಿಗೆ ನಮಸ್ಕರಿಸಿದ.
ಅಂದು ನೀನು ಹೇಳಿದ ಮಾತು ನಾನು ಮನದಲ್ಲಿಟ್ಟುಕೊಂಡು ಅನಾಥಾಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡೆ.ಇಂದು ನನಗೆ ದೊಡ್ಡ ಹುದ್ದೆ ಸಿಕ್ಕಿದೆ. ದೇವಸ್ಥಾನಕ್ಕೆ ಬಂದೆ… ಅನ್ನುತಿರಲು “ಯಾವ ದೇವಸ್ತಾನ ಕಣಪ್ಪ?” ಎಂದು ಅಜ್ಜಿ ಕೇಳಿದಾಗ “ನೀನೇ ನನ್ನ ಪಾಲಿನ ದೇವರು ಅಜ್ಜಿ” ಎಂದು ಅಜ್ಜಿಯ ಪಾದಗಳಿಗೆ ದೀರ್ಘ ದಂಡ ನಮಸ್ಕಾರ ಮಾಡಿದ.
ಇಂದಿನ ಮಕ್ಕಳೆ ನಾಳಿನ ಪ್ರಜೆಗಳು
ಮಕ್ಕಳು ದೇಶದ ಆಸ್ತಿ
ಮಕ್ಕಳು ದೇವರ ಸಮಾನ
ಹೀಗೆ ಮಕ್ಕಳ ಬಗ್ಗೆ ಪ್ರೀತಿ, ಕಾಳಜಿ ವಹಿಸಿದ ಚಾಚಾ ನೆಹರು ಜಿ, ಮಕ್ಕಳ ಮೇಲೆ ಇರುವ ಅತೀವ ಪ್ರೀತಿಯಿಂದ ತಮ್ಮ ಜನುಮದಿನವನ್ನು ಮಕ್ಕಳ ಜನುಮ ದಿನ ಅಂತ ಆಚರಣೆ ಮಾಡಬೇಕು ಎಂದು ಹೇಳಿರುವುದು ತುಂಬಾ ಸಂತಸದ ಸಂಗತಿ.
ಮಕ್ಕಳಲ್ಲಿ ಸತ್ಯವಿದೆ,ಮಕ್ಕಳಲ್ಲಿ ಖುಷಿ ಇದೆ,ಮಕ್ಕಳಲ್ಲಿ ನಿರಾಳತೆ ಇದೆ..ಮಕ್ಕಳು ಮನೆಯ, ದೇಶದ ಹಿರಿಮೆ -ಗರಿಮೆ. ಮಕ್ಕಳ ಶಿಕ್ಷಣ, ಮಕ್ಕಳ ಹಕ್ಕು, ಆರೈಕೆ ಹಾಗೂ ಜವಾಬ್ದಾರಿ ನಮ್ಮೆಲ್ಲರ ಕರ್ತ್ಯವಾಗಿದೆ..
ನೀವೇನಾದರೂ ನಿಮ್ಮ ಮನೆಯಲ್ಲಿ ಮಗುವಿಗೆ
“ಮಗು ಅಲ್ಲಿ ನೋಡು ಅವರು ಏನು ಮಾಡುತ್ತಿದ್ದಾರೆ ನೋಡಿ ಬಾ. ? ಅಂತ ಹೇಳಿದಾಗ… ಆ ಮಗು ತಾನು ಆ ಮನೆಯಲ್ಲಿ ಯಾರು ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ” ಒಬ್ಬ ರು ಚೀಲದಲ್ಲಿ ಕೈ ಹಾಕಿ ಏನೋ ತಗಿಯುತ್ತಿದ್ದಾರೆ,ಇನ್ನೊಬ್ಬರು ಗೇಮ್ ಆಡುತ್ತಿದ್ದಾರೆ,ಇನ್ನೊಬ್ಬರು ಕ್ರಿಕೆಟ್ ನೋಡುತಿದ್ದಾರೆ”….. ಹೀಗೆ ನಿಜವನ್ನು ಹೇಳಿತು.
.
ನಿಮ್ಮ ಮನೆಗೆ ಅತಿಥಿಗಳು ಬಂದಾಗ ನಮ್ಮ ಮಗ ಟೀ ಕುಡಿಯೋದಿಲ್ಲ ಆಂಥ ಅವರ ಅಮ್ಮ ಹೇಳಿದಾಗ, ಆ ಮಗು “ನಾನು ದಿನಾಲೂ ಟೀ ಕುಡಿಯುವೆನು ಎಂದು ಸತ್ಯ ಹೇಳುವದು. .
ಅಪ್ಪ-ಅಮ್ಮ ಯಾರು ಜಗಳ ಜಾಸ್ತಿ ಮಾಡುತ್ತಾರೆ ಅಂತ ಕೇಳಿದಾಗ ಅಮ್ಮ ತನ್ನ ಮಗುವಿನ ಮುಖ ನೋಡಿ ಕಣ್ಣು ಸನ್ನೆ ಮಾಡುತ್ತಿದ್ದರೂ ಕೂಡ ಆ ಮಗು ಭಯಪಡದೇ ಅಮ್ಮ ಜಾಸ್ತಿ ಜಗಳ ಮಾಡೋದು ಅಂತ ಹೇಳಿಬಿಡುತ್ತದೆ..
ಹೀಗೆ ಮುಗ್ಧ ಮನಸಿನ ಮಕ್ಕಳು ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಕಾಮುಕತೆ, ಸುಲಿಗೆ ಕೋರರು, ಬಾಲ ಅಪರಾಧಿಗಳಾಗುತ್ತಿರುವುದು ಶೋಚನೀಯ ಸಂಗತಿ.
ಏಕೆಂದರೆ ಇಂದಿನ ಶಿಕ್ಷಣದಲ್ಲಿ ನೈತಿಕತೆಗೆ ಹೆಚ್ಚಿನ ಮಹತ್ವ ಕೊಡುವುದು ಅವಶ್ಯಕ ವಾಗಿದೆ, ವಿವಿಧ ಕ್ಷೇತ್ರಗಳಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವುದು ಕೂಡ ಅಷ್ಟೇ ಅಗತ್ಯವಾಗಿದೆ. ತಂದೆ ತಾಯಿ ಮತ್ತು ಶಿಕ್ಷಕರ ಹಾಗೂ ಸಮಾಜದ ಜವಾಬ್ದಾರಿ ಆಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ, ಗೆಳೆಯರಾಗಿ,ಹಾಗೂ ಗುರುವಾಗಿ ನಮ್ಮ ಜವಾಬ್ದಾರಿ ನಾವು ನಿಭಾಯಿಸಬೇಕು…… ಮಕ್ಕಳ ನಡೆ ನುಡಿ, ಅವರ ಸುತ್ತಲಿನ ಪರಿಸರ ಹಾಗೂ ಅವರೊಂದಿಗೆ ಇರುವ ಗೆಳೆಯರ ಬಗ್ಗೆ ಪಾಲಕರಿಗೆ ಮಾಹಿತಿ ಇರಬೇಕು……..
ಒಂದು ಕಡೆ ಪ್ರಗತಿಯತ್ತ ಸಾಗುತ್ತಿರುವ ನಮ್ಮ ಭಾರತ, ಇನ್ನೊಂದು ಕಡೆ ಹೆಚ್ಚುತ್ತಿರುವ ಬಾಲಾಪರಾಧಗಳು…
ಹೆಣ್ಣು ಮಕ್ಕಳಿಗೆ ಅಲ್ಲ ಗಂಡು ಮಕ್ಕಳ ಪಾಲಕರಲ್ಲಿಯೂ ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇದೆ.
ಎಲ್ಲ ಪಾಲಕರಲ್ಲಿ ಕಳಕಳಿಯ ಮನವಿ ಮಕ್ಕಳೊಂದಿಗೆ ಸಮಯ ಇಡಿ. ಮಕ್ಕಳ ಭವಿಷ್ಯ ಸುಂದರವಾಗಿ. ಸದಾ ಹೂವಿನ ಹಾಗೆ ನಗುನಗುತ ಸುಂದರ ಭವಿಷ್ಯ ಕಟ್ಟಲು ಸಹಕರಿಸುವ.ಈ ದಿನ
ಮಕ್ಕಳ ದಿನಾಚರಣೆಯ ಶುಭಾಶಯಗಳು
ನಂದಿನಿ ಸನಬಾಲ್..
ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಬುರ್ಗಿ.