ಆರದಿರಲಿ ಜ್ಯೋತಿ
ಸಿಹಿ ಕಹಿ ಇರಲಿ
ಬಾಳ ಬಂಡಿ ಸಾಗುತಿರಲಿ
ಜೀವನ ಕಡಿದು ಹೋಗುವ
ಮುನ್ನ ಪ್ರೇಮ ಜ್ಯೋತಿ ಅರಳುತಿರಲಿ
ನಸುಕಿನ ಕನಸು
ಸವಿದಷ್ಟು ಪ್ರೀತಿ
ಸದಾ ಅರಳುತಿರಲಿ
ದೀಪ ಜ್ಯೋತಿಯ ಹಾಗೆ
ರಸಕ್ಷಣಗಳ ಮೆಲುಕಾಡಿದಷ್ಟು
ನೆನಪುಗಳ ಸರಮಾಲೆಯಾಗಿ
ಹೃದಯ ಆವರಿಸುತಲಿರಲಿ
ಹಣತೆಗಳ ಜ್ಯೋತಿ ಆರದಿರಲಿ
ಚಿಗುರೊಡೆಯುವ ಮರದ
ಎಲೆಗಳು ಹಸಿರು ತೋರಣ
ಕಟ್ಟುವ ತೆರದಿ ನಮ್ಮೀ ಪ್ರೀತಿ
ಚಿಗುರೊಡೆದು ಹೆಮ್ಮರವಾಗಲಿ
ಪ್ರೀತಿಯ ಹುಳಿ ಮಾವಿನ
ಸಿಹಿಯಾಗಿ ಹೊರಹೊಮ್ಮಲಿ
ದಿನದ ಕ್ಷಣಗಳ ಸವಿದ ದೇಹಕೆ
ನವಿರಾದ ಪ್ರೀತಿ ಚಿಮ್ಮಲಿ
ತುಟಿಗೆ ತುಟಿಯೊತ್ತಿ
ಮಧುವ ಹೀರುವಾಗ
ಒಳಮನದ ಆಸೆ ಬೀಜವಾಗಿ
ಅಂಕುರಿಸಿ ಆಕಾಶ ದತ್ತ ಮುಖಮಾಡಿ
ಎಳೆ ಬಿಸಿಲು ಮೈ ತಾಗಿ
ದಿನವು ಯುಗಗಳಾಗಿ
ಪ್ರೀತಿ ಜ್ಯೋತಿ ಬೆಳಗುತಿಹದು
ದೀಪಾವಳಿ ಹಬ್ಬದ ದೀಪತೆರದಿ
ನೋವು ನಲಿವಿನ ಪುಟಗಳು
ದೇಹವೆರಡು ಭಾವ ಒಂದಾಗಿ
ಸುಖ ದುಃಖಗಳ ಸವಿದು
ಕ್ಷಣಕ್ಷಣ ಸಂಬಂಧ ಉಳಿಯಲಿ ಸದಾಕಾಲ
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ. ಸಿಂದೋಗಿ ಕ್ರಾಸ್.
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨