ವಿಶೇಷ ಚೇತನ ಮಕ್ಕಳಿಗೆ ಇಲಾಖೆಯಿಂದ ಕಿಟ್ ಗಳ ವಿತರಣೆ..
ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳವಿಶೇಷ ಅಗತ್ಯತೆಯುಳ್ಳ ಮಕ್ಕಳ ಸಮನ್ವಯ ಶಿಕ್ಷಣ ಮಧ್ಯವರ್ತನ ಕಾರ್ಯಚಟುವಟಿಕೆಗಳ ಅನುಷ್ಠಾನದಡಿಯಲ್ಲಿ ಕಳೆದ ವರ್ಷ(2022-23)ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ವಿಶೇಷ ಚೇತನ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅಗತ್ಯವಿರುವ ಸಾಧನ ಸಲಕರಣೆಗಳ ಬೇಡಿಕೆ ಪಟ್ಟಿಯಂತೆ ಇಲಾಖೆಯಿಂದ ಮಂಜೂರಾದ ವ್ಹಿಲ್ ಚೇರ್, ರೋಲೆಟರ್, ಎಲ್ ಬೋ ಕ್ರ್ಯಾಚಿಸ್, ಎಕ್ಸಿಲ್ಲಾ ಕ್ರ್ಯಾಚಿಸ್, ಸಿ.ಪಿ.ಚೇರ್, ಟ್ರ್ಯಾಸಿಕಲ್, ಎಂ.ಡಿ.ಕಿಟ್, ಬ್ರೈಲ್ ಸ್ಲೇಟ್, ಮತ್ತು ಬ್ರೈಲ್ ಕಿಟ್ ಸಾಧನ ಸಲಕರಣೆಗಳು ಬಂದಿರುತ್ತವೆ. ಇವುಗಳಲ್ಲಿ ಇಂದು ಗಣೇಶ ಲ.ಮೋಡಿಕರ, ನಾಝ ಮು. ಚೋರಗಸ್ತಿ, ಯಲ್ಲಮ್ಮ ಪ. ಮೋಡಿಕರ ಈ ವಿಶೇಷ ಮಕ್ಕಳಿಗೆ ವ್ಹಿಲ್ ಚೇರ್, ರೋಲೆಟರ್, ಎಲ್ ಬೋ ಕ್ರ್ಯಾಚಿಸ್ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ …….
*ಶ್ರೀ ಜಿ.ಎಂ. ಮುಂದಿನಮನಿ* ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ *ಶ್ರೀ ಬಿ.ಎಸ್ ಭಜಂತ್ರಿ* ಕ್ಷೇತ್ರ ಸಮನ್ವಯ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಎಂ.ಬಿ.ಹೊಸಮನಿ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀ ಬಸವರಾಜ ಕಳಸಾಪುರ , *ಬಿ.ಐ.ಇ.ಆರ್.ಟಿ* ಗಳಾದ ನಾಗರಾಜ ಮಜ್ಜಿಗುಡ್ಡ, ಶ್ರೀಶೈಲ ಪೂಜಾರಿ .ಶಿರಹಟ್ಟಿ *ಬಿ ಆರ್ ಪಿ* ಗಳಾದ ಶ್ರೀ ಬಸವರಾಜ ಯರಗುಪ್ಪಿ ,ವಾಸು ದೀಪಾಳಿ *ಸಿ ಆರ್ ಪಿ* ಗಳಾದ ಶ್ರೀ ಎನ್.ಎನ್ ಸಾವಿರ ಕುರಿ ,ಶ್ರೀ ಎಲ್ . ಎಫ.ಮಠದ ಶಿಕ್ಷಕರಾದ ಶ್ರೀ ರಮೇಶ ಭಟಗುರ್ಕಿ ,ಶ್ರೀ ಸುನಿಲ್ ಲಮಾಣಿ ವಿಶೇಷ ಚೇತನ ಮಕ್ಕಳು ಮತ್ತು ಪಾಲಕರು ಪಾಲ್ಗೊಂಡಿದ್ದರು