ಜೀವನ ಸ್ಪೂರ್ತಿ
ನೀ ನನಗೆ ನಾ ನಿನಗೆ
ಪ್ರೀತಿಯ ಸೆಲೆಯಾಗುವಾ
ಜೀವನವಿಡೀ ಜೇನಾಗುವಾ
ಮಧುರ ಭಾವವಾಗುವಾ
ನೀನೊಂದು ಭರಿಸಲಾಗದ ಪಾತ್ರ
ನಿನ್ನ ಮಾತುಗಳು ನನ್ನ ಹೃದಯಕ್ಕೆ ಸ್ಪೂರ್ತಿ
ಜೀವಕ್ಕೆ ಭಾವದ ಬೆಸುಗೆಯ ರೀತಿ
ಸೇರಿ ಕೂಡಿ ಪ್ರೇಮಿಗಳ ತೆರದಿ ಹಾರಾಡುವ ರೀತಿ
ಕತ್ತಲೆ ತುಂಬಿ ಕನವರಿಸಿದ
ಪ್ರೀತಿಗೆ
ನೀ ನೀಡಿದ ಪ್ರೀತಿಯ ಬೆಳಕು
ಸ್ಪೂರ್ತಿ
ನಮ್ಮ ಪ್ರೇಮದ ಮಾತುಗಳು
ಮುಂದಿನ ದಿನಗಳ ಹೊಸ ಚೈತನ್ಯ ನೀಡುವ ಸ್ಪೂರ್ತಿ
ಬಾಂಧವ್ಯ ದ ಬೆಸುಗೆ ಪ್ರೀತಿಯ ಚಂದ
ಸ್ನೇಹ ಪ್ರೀತಿಗೆ ನಲುಮೆಯ ಸಿರಿಗಂಧ
ಕೊನೆಯವರೆಗೂ ಜೊತೆ ಸೇರಿ ಬದುಕುವ ಬಂಧ
ಒಂದಕ್ಕೊಂದು ಶರೀರ ಬೆರೆತ
ಜೀವನಾಂಶದ ಆನಂದ
ಇರಲಾರದು ವಯಸ್ಸಿನ ನಿರ್ಬಂಧ
ಸೇರಿಹುದು ಜಾತಿ ಪಂಥ ಮೀರಿದ ಅನುರಾಗ ಬಂಧ
ಸೇರಿ ಕಲಿತಿಹುದು ಹೃದಯಗಳ ಭಾವ ಬಂಧ
ಬೆರೆತ ಮನಗಳ ವಿಹಾರ ಸ್ವಚ್ಛಂದ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್.
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು..
ಬೆಳಗಾವಿ ಜಿಲ್ಲೆ
8971117442
9449518400
ರೇಖಾಚಿತ್ರ. ರೇಖಾ ಮೊರಬ
ಚಿತ್ರ ಕಲಾ ಶಿಕ್ಷಕಿ
ಹುಬ್ಬಳ್ಳಿ