ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಕುಕ್ಕರ್ ಸ್ಫೋಟ್!!
ನವೆಂಬರ್ 2 ರಂದು ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿತ್ತು…
ಬಳ್ಳಾರಿ, ನ.09: ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಕುಕ್ಕರ್ ಸ್ಫೋಟವಾದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆದಿದೆ. ಹೌದು, ಒಲೆಯ ಮೇಲೆ ತೊಗರಿಬೇಳೆ ಬೇಯಿಸಲು ಇಟ್ಟಿದ್ದಾಗ ಕುಕ್ಕರ್ ಸ್ಫೋಟಗೊಂಡಿದೆ. ಈ ವೇಳೆ ಅಡುಗೆ ಮಾಡುತ್ತಿದ್ದ ಲೋಕಮ್ಮ ಎಂಬುವವರಿಗೆ ಬಿಸಿ ನೀರು ಸಿಡಿದು ಗಾಯವಾಗಿದ್ದು, ಅವರನ್ನು ಕಂಪ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅದೇ ಕೊಠಡಿಯಲ್ಲಿದ್ದ ಮೂವರು ಮಹಿಳೆಯರು ಪಾರಾಗಿದ್ದಾರೆ.
ಇನ್ನು ಇದೇ ನವೆಂಬರ್ 2 ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿತ್ತು. ಮುಖ್ಯ ಶಿಕ್ಷಕ ಮಹದೇವಯ್ಯ, ಶಿಕ್ಷಕಿ ಮೀನಾಕ್ಷಿ ಸೇರಿ ವಿದ್ಯಾರ್ಥಿಗಳಾದ ಧನುಷ್ ಪೃಥ್ವಿ,ಗೌತಮ್ಗೆ ಗಂಭೀರ ಗಾಯವಾಗಿತ್ತು. ಈ ಹಿನ್ನಲೆ ಕೂಡಲೇ ಗಾಯಾಳುಗಳನ್ನು ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದಾದ ಬಳಿಕ ಆಸ್ಪತ್ರೆಗೆ ಬಿಇಒ ಶೋಭಾ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಇಂತಹುದೇ ಘಟನೆ ಇದೀಗ ಕಂಪ್ಲಿ ತಾಲೂಕಿನ ಸರ್ಕಾರಿ ಶಾಲೆಯಲ್ಲೆ ನಡೆದಿದೆ.