ಶಿಕ್ಷಕರಿಗೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸಿ ನ್ಯಾಯ ಕೊಡಿಸಬೇಕಾದದ್ದು ಶಿಕ್ಷಕ ಸಂಘಟನೆಗಳಲ್ಲಿ ಇರುವ ನಮ್ಮೆಲ್ಲರ ಜವಾಬ್ದಾರಿ..
ಬಹಳ ನೋವಿನ ಸಂಗತಿ ಏನೆಂದರೆ..!!??
2016 ಕ್ಕಿಂತ ಮುಂಚೆ 1-7/8 ಕ್ಕೆ ಸಹ ಶಿಕ್ಷಕರು ಎಂದು ನೇಮಕಗೊಂಡು 20-25 ವರ್ಷಗಳ ಕಾಲ ಸೇವಾನುಭವ ಹೊಂದಿ, ಉನ್ನತ ವ್ಯಾಸಂಗ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಮುಂಬಡ್ತಿ ಪಡೆಯುವ ಬದಲು ಹಿಂಬಡ್ತಿ ಪಡೆದು 1-5 ರ PST ಶಿಕ್ಷಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವಮಾನಿತರಾಗಿ ಈಗ 7 ವರ್ಷಗಳೇ ಕಳೆದಿವೆ..ಇವರಿಗೆ ನ್ಯಾಯ ಕೊಡಿಸದೇ ನಮ್ಮ ಸಂಘಗಳು ಜಾಣ ಮೌನಕ್ಕೆ ಶರಣಾಗಿರುವುದು ಏಕೆ ಎಂಬ ಸಂಶಯ ಎಲ್ಲರನ್ನೂ ಕಾಡುತ್ತಿದೆ..?!!
ಒಂದೆಡೆ ಶಿಕ್ಷಕ ಸಂಘದಲ್ಲಿರುವ ನಮ್ಮ ರಾಜ್ಯ ಪದಾಧಿಕಾರಿಗಳು ಕೆಲಬಾರಿ PST ಶಿಕ್ಷಕರಿಗೆ ಬಡ್ತಿ ಕೊಡಿಸುತ್ತೇವೆ ಎನ್ನುತ್ತಾರೆ, ಇನ್ನು ಕೆಲಬಾರಿ ವಿಲೀನ ಮಾಡಿಸುತ್ತೇವೆ ಎನ್ನುತ್ತಾರೆ, ಇವರಲ್ಲಿ ಸ್ಪಷ್ಟತೆ ಇಲ್ಲದಿರುವುದು ವಿಷಾದನೀಯ..ಇನ್ನೂ ಎಷ್ಟು ವರ್ಷಗಳ ಕಾಲ ಈ ಅನ್ಯಾಯವನ್ನು ಸಹಿಸಿಕೊಳ್ಳುವುದು…!!?? ಎಂದು ಹಲವು ಶಿಕ್ಷಕರ ಗೋಳು. ಇದಕ್ಕೆ ಸಂಘದ ಪ್ರತಿ ತಾಲೂಕ, ಜಿಲ್ಲಾ ಅಧ್ಯಕ್ಷರು ಪದಾಧಿಕಾರಿಗಳು, ನಿರ್ದೇಶಕರು ರಾಜ್ಯ ಸಂಘಕ್ಕೆ ಕೇಳುವ ಮನಸ್ಸು ಯಾಕೆ ಮಾಡುತ್ತಿಲ್ಲ ಅನ್ನೋ ಪ್ರಶ್ನೆ ಎಲ್ಲಾ ಶಿಕ್ಷಕರಲ್ಲಿ ಕಾಡುತ್ತಿದೆ.
ಇನ್ನೊಂದೆಡೆ ಸೇವಾನಿರತ ಪದವೀಧರ ಶಿಕ್ಷಕ ಸಂಘದವರು ಬಡ್ತಿ ಕೊಡಿಸುವ ತರಾತುರಿಯಲ್ಲಿ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದು ಗೊತ್ತಿದ್ದರೂ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಹೊರಬರುತ್ತಿಲ್ಲ..
ಇವರ ಮಧ್ಯ PST ಶಿಕ್ಷಕರು ಬಲಿಪಶುಗಳಾಗಿ ಗೊಂದಲಕ್ಕೆ ಸಿಲುಕಿದ್ದಾರೆ..
ಇದಕ್ಕೆ ಪರಿಹಾರವೇನಾದರೂ ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ..????????. ನ್ಯಾಯ ಕೊಡಿಸಲು ಸಾಧ್ಯವಾಗದೆ ಇದ್ದರೆ ನಾವೆಲ್ಲಾ ಸಂಘದ ಪದಾಧಿಕಾರಿಗಳು ಆಗಲು ಏನು ನೈತಿಕತೆ ಇದೆ. ರಾಜೀನಾಮೆ ಕೊಟ್ಟು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ,,,,,, PST ಶಿಕ್ಷಕರಿಗೆ ನ್ಯಾಯ ಒದಗಿಸಿ.
ಇಂದ ,
ಶ್ರೀ ಆನಂದ ಭಿ ಕೆಂಭಾವಿ
ನಿರ್ದೇಶಕರು KSPSTA ಇಂಡಿ