ಬೆಂಗಳೂರು: ರಾಜ್ಯ ಸರಕಾರಿ ನೌಕರರ ಸಂಘದ ಹಾಲಿ ರಾಜ್ಯಾದ್ಯಕ್ಷರನ್ನು ವರ್ಗಾವಣೆ ಮಾಡಿರುವುದು ಇದೇ ಮೋದಲು..ಸರಕಾರಿ ನೌಕರರ ಅದ್ಯಕ್ಷರಾಗಿ ನೌಕರರ ಹೀತಕಾಯಬೇಕಾಗಿದ್ದ ಷಡಕ್ಷರಿಯವರನ್ನೆ ರಾಜ್ಯ ಸರಕಾರ ವರ್ಗಾವಣೆ ಮಾಡಿರುವುದು ಸರಕಾರಿ ನೌಕರರಲ್ಲಿ ಭಾರಿ ನಿರಾಸೆ ಮೂಡಿಸಿದೆ…
ಏಳನೇ ವೇತನ ಆಯೋಗ ತನ್ನ ವರದಿ ನೀಡಲು ಅವಧಿ ವಿಸ್ತರಣೆಯಾದ ಬೆನ್ನಲ್ಲೆ ಇವರ ವರ್ಗಾವಣೆಯಾಗಿರುವುದರಿಂದ ಸರಕಾರಿ ನೌಕರರನ್ನು ಹೋರಾಟಕ್ಕೆ ಇಳಿಯದಂತೆ ಸರ್ಕಾರ ಈ ರೀತಿ ಮಾಡಿದೇಯಾ ಎಂಬ ಪ್ರಶ್ನೆಗಳು ಮೂಡುತ್ತಿವೆ..
ನಿನ್ನೆಯಷ್ಟೇ ರಾಜ್ಯಾದ್ಯಕ್ಷರ ಸಂದರ್ಶನದ ಒಂದು ಭಾಗ ಪ್ರಸಾರ ಮಾಡಿದ್ದ ನಿಮ್ಮ ಪಬ್ಲಿಕಟುಡೆ ಇವತ್ತು ಎರಡನೇ ಸಂದರ್ಶನದ ಇನ್ನೊಂದು ಭಾಗವನ್ನು ಇದೀಗ ಪ್ರಸಾರ ಮಾಡಿದೆ..
ನಾನು ಸರಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷನಾಗಿ ಯಾವುದೆ ಒಬ್ಬ ನೌಕರನ ಮೇಲೆ ಒತ್ತಡ ಅಥವಾ ಸರಕಾರಿ ನಿಯಮ ಮೀರಿ ಕೆಲಸ ಮಾಡಿ ಅಂತ ಯಾವೋಬ್ಬ ನೌಕರರಿಗೆ ಹೇಳಿದ್ದರೆ ಅದನ್ನು ರುಜುವಾತು ಮಾಡಿದರೆ ನಾನು ಸರಕಾರ ನೀಡುವ ಯಾವುದೇ ಶಿಕ್ಷೆ ಕೊಟ್ಟರು ಕೂಡ ನಾನು ಸ್ವೀಕರಿಸುತ್ತೇನೆ..ಸರಕಾರಿ ನೌಕರರಿಗಾಗಿ ಜೈಲಿಗೆ ಹೋಗಲು ನಾನು ಸಿದ್ದನಿದ್ದೇನೆ ಎಂದರು…
ಮಾನ್ಯ ಶಿಕ್ಷಣ ಸಚಿವರು ಬರೆದಿರುವ ಪತ್ರದ ಬಗ್ಗೆ ನನಗೆ ಈಗಷ್ಯೆ ತಿಳಿದಿದೆ..ಆ ತರಹದ ಯಾವುದೇ ಅವ್ಯವಹಾರ ನಡೆದಿಲ್ಲ..ಎಲ್ಲವು ಪಾರದರ್ಶಕವಾಗಿದೆ ಎಂದರು…
ಮಾಜಿ ಸಿಎಮ್ ಬಿ.ಎಸ್.ಯಡಿಯೂರಪ್ಪನವರಿಗೆ ಆತ್ಮಿಯರಾಗಿದ್ದರಿಂದ ನಿಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂಬ ಪ್ರಶ್ನೇಗೆ ಉತ್ತರಿಸಿದ ಅವರು,
ರಾಜ್ಯ ಸರಕಾರಿ ನೌಕರರ ಅದ್ಯಕ್ಷನಾಗಿ ನಾನು ಸಚಿವರ,ಶಾಸಕರ,ಸಿಎಮ್ ಅವರ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದೇನೆ, ಎಲ್ಲ ಪಕ್ಷದವರ ಜೊತೆ ನಾನು ಸ್ನೇಹವಿದೆ, ನಾನು ಕೂಡ ಒಬ್ಬ ಸರಕಾರಿ ನೌಕರ, ನನಗೆ ಯಾವುದೇ ನೋಟಿಸ್ ನೀಡದೆ, ಏಕಾಏಕಿ ವರ್ಗಾವಣೆ ಮಾಡಿರುವುದು ಭಾರಿ ನಿರಾಸೆ ಮೂಡಿಸಿದೆ ಎಂದು ತಮ್ಮ ಅಸಮಾಧಾನವನ್ನು ಹೋರ ಹಾಕಿದರು..
ನಾನು ಯಾವುದೇ ಅವ್ಯವವರಾ ಆಗಲಿ,ಸರಕಾರದ ಬೊಕ್ಕಸಕ್ಕೆ ನಷ್ಟವಾಗುವ ಕೆಲಸವನ್ನು ಮಾಡಿಲ್ಲ ಎಂದರು..
ಒಟ್ಟಿನಲ್ಲಿ ಸರಕಾರಿ ನೌಕರ ಸಂಘದ ರಾಜ್ಯಾದ್ಯಕ್ಷರ ಅವಧಿ ಮುಗಿಯುತ್ತಾ ಬಂದಿದೆ..ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈಗಿನಿಂದಲೇ ಅವರ ಬದ್ದ ವೈರಿಗಳು ಸಜ್ಜಾಗುತ್ತಿದ್ದಾರೆ.ಅವರ ಮನೊಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡಡಯುತ್ತಿದೆ..
ರಾಜ್ಯದ ಮೂಲೆ ಮೂಲೆಗೆ ತೆರಳಿ ಸಂಘವನ್ನು ಬೆಳೆಸಿದ್ದಾರೆ. ಮುಂದೆ ಏನಾಗುತ್ತದೋ ಎಂಬುದನ್ನು ಕಾದು ನೋಡೊಣ..