ಶಿವಮೊಗ್ಗ: ನಗರದಲ್ಲಿ ಮಾದ್ಯಮವರೊಂದಿಗೆ ಮಾತನಾಡಿದ ಸಚಿಬ ಮಧು ಬಂಗಾರಪ್ಪ ಅವರು,ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಸರಕಾರದ ತೀರ್ಮಾನ.ಸರಕಾರದಲ್ಲಿ ವರ್ಗಾವಣೆ ಮಾಡಿದ್ದಾರೆ ನಾನು ಸರಕಾರದಲ್ಲಿ ಇದ್ದೇನೆ ಇಲ್ಲ ಅಂತಾ ಹೇಳಕ್ಕೆ ಆಗುತ್ತಾದ? ಅದೇನು ದೊಡ್ಡ ವಿಷಯ ಏನಲ್ಲ. ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು.ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಿಯೋನಿಕ್ಸ್ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ ಎಂದರು.
ಎಫ್ ಡಿಎ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾನೂನು ಗೆಲ್ಲಬೇಕು, ನ್ಯಾಯಾಲಯ ಗೆಲ್ಲಬೇಕು ಅಷ್ಟೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದೇ ನನ್ನ ಅಭಿಪ್ರಾಯವೆಂದರು.